ರಾಷ್ಟ್ರೀಯ ಕ್ರೀಡಾ ದಿನ: ಕ್ರೀಡೆ ಜನಪ್ರಿಯತೆಗಳಿಸಲಿ: ಪ್ರಧಾನಿ ಮೋದಿ


Team Udayavani, Aug 29, 2022, 11:22 PM IST

ರಾಷ್ಟ್ರೀಯ ಕ್ರೀಡಾ ದಿನ: ಕ್ರೀಡೆ ಜನಪ್ರಿಯತೆಗಳಿಸಲಿ: ಪ್ರಧಾನಿ ಮೋದಿ

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಅವರು ಹಾಕಿ ದಿಗ್ಗಜ ಮೇಜರ್‌ ಧ್ಯಾನ್‌ ಚಂದ್‌ ಅವರ ಜನ್ಮ ವಾರ್ಷಿಕೋತ್ಸವದಂದು ಅವರಿಗೆ ಗೌರವ ಸಲ್ಲಿಸಿದರು. ಸೋಮವಾರ ಎಲ್ಲೆಡೆ ರಾಷ್ಟ್ರೀಯ ಕ್ರೀಡಾ ದಿನವನ್ನು ಆಚರಿಸಲಾಗುತ್ತಿದ್ದು ದೇಶಾದ್ಯಂತ ಕ್ರೀಡಾಪಟುಗಳು, ರಾಜಕೀಯ ವ್ಯಕ್ತಿಗಳು ಹಾಕಿ ದಿಗ್ಗಜನನ್ನು ಸ್ಮರಿಸಿ ಗೌರವ ಸಲ್ಲಿಸಿದ್ದಾರೆ.

ಹಾಕಿ ದಿಗ್ಗಜ ಧ್ಯಾನ್‌ಚಂದ್‌ ಅವರ ಜನ್ಮದಿನವಾದ ಆ. 29ರಂದು ರಾಷ್ಟ್ರೀಯ ಕ್ರೀಡಾ ದಿನವಾಗಿ ಆಚರಿಸಲಾಗುತ್ತದೆ. ರಾಷ್ಟ್ರೀಯ ಕ್ರೀಡಾ ದಿನದ ಶುಭಾಶಯಗಳು ಮತ್ತು ಅವರ ಜನ್ಮದಿನದಂದು ಮೇಜರ್‌ಧ್ಯಾನ್‌ ಚಂದ್‌ ಅವರಿಗೆ ಗೌರವಗಳು. ಇತ್ತೀಚಿನ ವರ್ಷಗಳು ಕ್ರೀಡೆಯ ಪಾಲಿಗೆ ಶ್ರೇಷ್ಠವಾಗಿದೆ. ಈ ಪ್ರವೃತ್ತಿ ಮುಂದುವರಿಯಲಿ. ಕ್ರೀಡೆಗಳು ಭಾರತದಾದ್ಯಂತ ಜನಪ್ರಿಯತೆಯನ್ನು ಗಳಿಸಲಿ” ಎಂದು ಮೋದಿ ಟ್ವೀಟ್‌ ಮಾಡಿದ್ದಾರೆ.

ಕಿರಿಯ ಕ್ರೀಡಾ ಸಚಿವ ನಿಸಿತ್‌ ಪ್ರಮಾಣಿಕ್‌ ಅವರು ಭಾರತವನ್ನು ಕ್ರೀಡಾ ರಾಷ್ಟ್ರವನ್ನಾಗಿ ಮಾಡಲು ಒಟ್ಟಾಗಿ ಕೆಲಸ ಮಾಡುವುದಾಗಿ ವಾಗ್ಧಾನ ಮಾಡಿದರು. ಭಾರತದಲ್ಲಿ ಕ್ರೀಡೆಯ ಉನ್ನತಿಗಾಗಿ ತಮ್ಮ ಜೀವನವನ್ನು ಸಮರ್ಪಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸಿದ ಅವರು ಭಾರತವು ಕ್ರೀಡಾರಾಷ್ಟ್ರವಾಗಿ ರೂಪುಗೊಳ್ಳಲು ಎಲ್ಲರೂ ಶ್ರಮಿಸೋಣ ಎಂದು ಅವರು ಹೇಳಿದರು.

ರಕ್ಷಣ ಸಚಿವ ರಾಜನಾಥ್‌ ಸಿಂಗ್‌, ಮಾಜಿ ಕ್ರೀಡಾ ಸಚಿವ ಕಿರಣ್‌ ರಿಜಿಜು ಮಾತ್ರವಲ್ಲದೇ ಕ್ರೀಡಾಪಟುಗಳಾದ ಸಚಿನ್‌ ತೆಂಡುಲ್ಕರ್‌, ಒಲಿಂಪಿಕ್‌ ಚಿನ್ನ ವಿಜೇತ ಜಾವೆಲಿನ್‌ ಎಸೆತಗಾರ ನೀರಜ್‌ ಚೋಪ್ರಾ ಕೂಡ ಟ್ವೀಟ್‌ ಮೂಲಕ ರಾಷ್ಟ್ರೀಯ ಕ್ರೀಡಾ ದಿನದ ಬಗ್ಗೆ ತಮ್ಮ ಸಂದೇಶ ನೀಡಿದ್ದಾರೆ. ಕಾಮನ್ವೆಲ್ತ್‌ ಗೇಮ್ಸ್‌ನ ವನಿತೆಯರ ಫೋರ್‌ ಲಾನ್‌ ಬೌಲ್ಸ್‌ ವಿಭಾಗದಲ್ಲಿ ಐತಿಹಾಸಿಕ ಚಿನ್ನ ಗೆದ್ದ ರೂಪಾರಾಣಿ ತಿರ್ಕೆ, ಪಿಂಕಿ, ನಯನಮೋನಿ ಸೈಕಿಯಾ ಮತ್ತು ಲವ್ಲಿ ಚೌಬೆ ಅವರ ಸಾಧನೆಯನ್ನು ತೆಂಡುಲ್ಕರ್‌ ಮುಕ್ತಕಂಠದಿಂದ ಹೊಗಳಿದರು.

ರೂಪಾ, ಲವ್ಲಿ, ನಯನಮೋನಿ ಮತ್ತು ಪಿಂಕಿ ಅವರ ಕಥೆಯು ಎಲ್ಲರ ಪಾಲಿಗೆ ಭರವಸೆಯ ಕಥೆಯಾಗಿದೆ. ಅವರು ನಮಗೆ ಕಡಿಮೆ ತಿಳಿದಿರುವ ಕ್ರೀಡೆಯನ್ನು ಮರುಪರಿಚಯಿಸಿದ್ದು ಮಾತ್ರವಲ್ಲದೆ, ತಮಗಾಗಿ ಸರಿಯಾದ ಮನ್ನಣೆಯನ್ನೂ ಗಳಿಸಿದರು. ಈ ನಾಲ್ವರು ಈ ಹಿಂದೆ ಬೇರೆ ಬೇರೆ ಕ್ರೀಡಾಕ್ಷೇತ್ರದಲ್ಲಿದ್ದರು. ಅಲ್ಲಿ ಅವರು ಅಷ್ಟೊಂದು ಪ್ರಸಿದ್ದಿ ಪಡೆದಿರಲಿಲ್ಲ. ರೂಪಾ ರಾಣಿ ತಿರ್ಕೆ ಕಬಡ್ಡಿ, ನಯನಮೋನಿ ಸೈಕಿಯಾ ವೇಟ್‌ಲಿಫ್ಟರ್‌, ಪಿಂಕಿ ಸಿಂಗ್‌ ಕ್ರಿಕೆಟ್‌ ಮತ್ತು ಲವ್ಲಿ ಚೌಬೆ ಸ್ಪ್ರಿಂಟರ್‌ ಆಗಿದ್ದರು.

ಟಾಪ್ ನ್ಯೂಸ್

Yaksha

Yakshagana ಆಯುಧ ವೇಷದ ಲಕ್ಷಣ ಸೂಚಕ; ಪರಾಮರ್ಶೆ ಇಂದಿನ ಅಗತ್ಯ

Udupi: ಗೀತಾರ್ಥ ಚಿಂತನೆ-40: ದುರ್ಯೋಧನರಿಗಿಂತ ಶಕುನಿಗಳು ಅಪಾಯ

Udupi: ಗೀತಾರ್ಥ ಚಿಂತನೆ-40: ದುರ್ಯೋಧನರಿಗಿಂತ ಶಕುನಿಗಳು ಅಪಾಯ

PM Modi: ವಿದೇಶದಲ್ಲಿ ನಮ್ಮ ದೇವತೆಗಳಿಗೆ ರಾಹುಲ್‌ ಅವಮಾನ

PM Modi: ವಿದೇಶದಲ್ಲಿ ನಮ್ಮ ದೇವತೆಗಳಿಗೆ ರಾಹುಲ್‌ ಅವಮಾನ

ನೌಕಾನೆಲೆ ಸಿಬಂದಿಯಿಂದ ಮೀನುಗಾರರ ಬಲೆಗೆ ಕತ್ತರಿ

Karwar: ನೌಕಾನೆಲೆ ಸಿಬಂದಿಯಿಂದ ಮೀನುಗಾರರ ಬಲೆಗೆ ಕತ್ತರಿ

“ಹಾಲಿನ ದರ ಹೆಚ್ಚಳ ಬಗ್ಗೆ ಸಿಎಂ ಸಿದ್ದರಾಮಯ್ಯ ನಿರ್ಧಾರ’: ಕೆಎಂಎಫ್ ಅಧ್ಯಕ್ಷ

KMF; “ಹಾಲಿನ ದರ ಹೆಚ್ಚಳ ಬಗ್ಗೆ ಸಿಎಂ ಸಿದ್ದರಾಮಯ್ಯ ನಿರ್ಧಾರ’: ಭೀಮಾ ನಾಯ್ಕ

Karnataka ಸುವರ್ಣ ಸಂಭ್ರಮದಲ್ಲಿ ಕನ್ನಡ ಜನೋತ್ಸವ

Karnataka ಸುವರ್ಣ ಸಂಭ್ರಮದಲ್ಲಿ ಕನ್ನಡ ಜನೋತ್ಸವ

Tungabhadra ಡ್ಯಾಂನ ಎಲ್ಲ 33 ಗೇಟ್‌ ಬದಲಿಸಲು ತಜ್ಞರ ಸಲಹೆ

Tungabhadra ಡ್ಯಾಂನ ಎಲ್ಲ 33 ಗೇಟ್‌ ಬದಲಿಸಲು ತಜ್ಞರ ಸಲಹೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

chess

Chess Olympiad: ಚೀನ, ಜಾರ್ಜಿಯ ವಿರುದ್ಧ ಭಾರತಕ್ಕೆ ಜಯ

1-rrrr

15ನೇ ವಿಶ್ವ ಅಗ್ನಿಶಾಮಕ ಕ್ರೀಡಾಕೂಟ: 2 ಚಿನ್ನ ಗೆದ್ದ ಅಶ್ವಿ‌ನ್‌ ಸನಿಲ್‌ ಕುರ್ಕಾಲು

1-asdas

Commonwealth ಚಾಂಪಿಯನ್‌ಶಿಪ್‌ : ಅಲ್ಲುರಿ ಅಜಯ್‌ಗೆ ಬಂಗಾರ

1-malavika

China ಓಪನ್‌ ಬ್ಯಾಡ್ಮಿಂಟನ್‌:ಮಾಳವಿಕಾ ಕ್ವಾರ್ಟರ್‌ ಫೈನಲಿಗೆ

1-frrr

Duleep Trophy Cricket: ಸ್ಯಾಮ್ಸನ್‌ ಅರ್ಧಶತಕ; ಭಾರತ ‘ಡಿ’ 5ಕ್ಕೆ 306

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Yaksha

Yakshagana ಆಯುಧ ವೇಷದ ಲಕ್ಷಣ ಸೂಚಕ; ಪರಾಮರ್ಶೆ ಇಂದಿನ ಅಗತ್ಯ

Udupi: ಗೀತಾರ್ಥ ಚಿಂತನೆ-40: ದುರ್ಯೋಧನರಿಗಿಂತ ಶಕುನಿಗಳು ಅಪಾಯ

Udupi: ಗೀತಾರ್ಥ ಚಿಂತನೆ-40: ದುರ್ಯೋಧನರಿಗಿಂತ ಶಕುನಿಗಳು ಅಪಾಯ

1-kashmir-msulim-IAS

Kashmir; ಮೊದಲ ಮುಸ್ಲಿಂ ಐಎಎಸ್‌ ಅಧಿಕಾರಿ ನಿಧನ

PM Modi: ವಿದೇಶದಲ್ಲಿ ನಮ್ಮ ದೇವತೆಗಳಿಗೆ ರಾಹುಲ್‌ ಅವಮಾನ

PM Modi: ವಿದೇಶದಲ್ಲಿ ನಮ್ಮ ದೇವತೆಗಳಿಗೆ ರಾಹುಲ್‌ ಅವಮಾನ

1-tWWW

Tupperware ಲಂಚ್‌ ಬಾಕ್ಸ್‌ ದಿವಾಳಿ: ಅಮೆರಿಕದ ಕಂಪೆನಿ ಘೋಷಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.