ಟಿ20 ವಿಶ್ವಕಪ್ ನಲ್ಲಿ ಕಿವೀಸ್ ವಿರುದ್ಧ ಉತ್ತಮವಾಗಿಲ್ಲ ದಾಖಲೆ! ಸೇಡು ತೀರಿಸಬಹುದೇ ಭಾರತ
Team Udayavani, Oct 31, 2021, 9:32 AM IST
ದುಬೈ: ಟಿ20 ವಿಶ್ವಕಪ್ ಅಭಿಯಾನವನ್ನು ಭಾರತ ತಂಡ ಇಂದು ಮುಂದುವರಿಸಲಿದೆ. ಅಪಾಯಕಾರಿ ನ್ಯೂಜಿಲೆಂಡ್ ಸವಾಲು ಕೊಹ್ಲಿ ಪಡೆಗೆ ಕಾದಿದೆ. ಎರಡೂ ತಂಡಗಳಿಗೆ ಇದು ಇದು ಅಳಿವು-ಉಳಿವಿನ ಪಂದ್ಯ. ಕ್ವಾರ್ಟರ್ ಫೈನಲ್ ಪಂದ್ಯದಷ್ಟೇ ಮಹತ್ವ ಹೊಂದಿದೆ. ಗೆದ್ದ ತಂಡಕ್ಕೆ ಸೆಮಿಫೈನಲ್ ಹಾದಿ ಸಲೀಸಾಗಲಿದೆ. ಸೋತರೆ ನೂರಾಯೆಂಟು ಲೆಕ್ಕಾಚಾರಗಳಿಗೆ ಜೋತು ಬೀಳಬೇಕು. ಮುಂದಿನ ಮಾರ್ಗ ಮುಚ್ಚಲೂಬಹುದು!
2019ರ ವಿಶ್ವಕಪ್ ಸೆಮಿ ಫೈನಲ್ ನೋವು, ಟೆಸ್ಟ್ ಚಾಂಪಿಯನ್ ಶಿಪ್ ಸೋಲಿನ ಬಳಿಕ ಕಿವೀಸ್ ಮತ್ತೆ ಎದುರಾಗುತ್ತಿದೆ. ಅಂದಹಾಗೆ ಟಿ20 ವಿಶ್ವಕಪ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತದ ದಾಖಲೆ ಉತ್ತಮವಾಗಿಲ್ಲ. ಆಡಿದ ಎರಡೂ ಪಂದ್ಯಗಳಲ್ಲಿ ಸೋಲನುಭವಿಸಿದೆ.
ಮೊದಲ ಸೋಲು ಮೊದಲ ವಿಶ್ವಕಪ್‌ನಲ್ಲೇ ಎದುರಾಗಿತ್ತು. ಅಂದು ಧೋನಿ ಪಡೆ ಚಾಂಪಿಯನ್ ಆಗಿದ್ದರೂ ಜೊಹಾನ್ಸ್‌ಬರ್ಗ್‌ನಲ್ಲಿ ನಡೆದ ಗುಂಪು ಹಂತದ ಪಂದ್ಯದಲ್ಲಿ ಕಿವೀಸ್ ವಿರುದ್ಧ 10 ರನ್ ಸೋಲನುಭವಿಸಿತ್ತು. ನ್ಯೂಜಿಲೆಂಡಿನ 190 ರನ್ನಿಗೆ ಜವಾಬಾಗಿ ಭಾರತ 9 ವಿಕೆಟಿಗೆ 180ರ ತನಕ ಬಂದು ಶರಣಾಗಿತ್ತು. ಗಂಭೀರ್ (51)-ಸೆಹವಾಗ್ (40) 5.5 ಓವರ್‌ಗಳಿಂದ 76 ರನ್ ಪೇರಿಸಿ ಭದ್ರ ಬುನಾದಿ ನಿರ್ಮಿಸಿದರೂ ಡೇನಿಯಲ್ ವೆಟ್ಟೋರಿ 20 ರನ್ನಿಗೆ 4 ವಿಕೆಟ್ ಕಿತ್ತು ಪಂದ್ಯದ ಗತಿಯನ್ನೇ ಬದಲಿಸಿದರು.
ಇದನ್ನೂ ಓದಿ:ಇಂದು ಗೆದ್ದರೆ ಭಾರತ ಬಚಾವ್; ಗೆದ್ದರೆ ಸೆಮಿಫೈನಲ್ ಹಾದಿ ಸಲೀಸು
ಅನಂತರದ ಸೋಲು ಎದುರಾದದ್ದು 2016ರ ಸೂಪರ್-10 ವಿಭಾಗದಲ್ಲಿ. ನಾಗ್ಪುರದ ಈ ಪಂದ್ಯ ಸಣ್ಣ ಮೊತ್ತಕ್ಕೆ ಸಾಕ್ಷಿಯಾಗಿತ್ತು. ನ್ಯೂಜಿಲೆಂಡ್ 7ಕ್ಕೆ 126 ರನ್ ಗಳಿಸಿದಾಗ ಭಾರತ ಸುಲಭದಲ್ಲೇ ಗೆಲ್ಲಲಿದೆ ಎಂದು ಭಾವಿಸಲಾಗಿತ್ತು. ಆದರೆ ಮಿಚೆಲ್ ಸ್ಯಾಂಟ್ನರ್ (11ಕ್ಕೆ), ಐಶ್ ಸೋಧಿ (18ಕ್ಕೆ 3) ಘಾತಕವಾಗಿ ಪರಿಣಮಿಸಿದರು. ಭಾರತ 18.1 ಓವರ್‌ಗಳಲ್ಲಿ 79 ರನ್ನಿಗೆ ಸರ್ವಪತನ ಕಂಡಿತು!
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Shimoga: ಮುಸ್ಲಿಂ ಸಂತೃಪ್ತಿಗೆ ಖರ್ಗೆ ಆರ್ ಎಸ್‌ಎಸ್ ಹೇಳಿಕೆ: ಈಶ್ವರಪ್ಪ ಟೀಕೆ
ಶರಣಾಗತಿಗೆ ಸೂಚಿಸಿದರೂ ಸ್ಪಂದಿಸಿಲ್ಲ… ನಕ್ಸಲ್ ಎನ್‌ಕೌಂಟರ್ ಬಗ್ಗೆ ಡಿಐಜಿ ಹೇಳಿದ್ದೇನು ?
Udupi: ಈಶ್ವರನಗರ-ಪರ್ಕಳ ರಸ್ತೆಯ ಹೊಂಡಗಳಿಗೆ ಕೊನೆಗೂ ತೇಪೆ
Udupi: ವಿಸಿಲ್ ಹೊಡೆದು, ಕೈ ಸನ್ನೆಯಲ್ಲೇ ಟ್ರಾಫಿಕ್ ನಿರ್ವಹಣೆ!
Paddana-Tulu folk songs: ಮರೆಯಾಗದಿರಲಿ ಪಾಡ್ದನನವೆಂಬ ಸಂಸ್ಕೃತಿಯ ಸಂಪರ್ಕ ಕೊಂಡಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.