T20 World Cup ಇತಿಹಾಸದಲ್ಲೇ ದಾಖಲೆ ಮೊತ್ತ ; ಗೆದ್ದವರಿಗೆ ಸಿಗುವ ಹಣವೆಷ್ಟು ಗೊತ್ತೇ?
Team Udayavani, Jun 4, 2024, 6:20 AM IST
ದುಬಾೖ: ಈ ಬಾರಿಯ ಟಿ20 ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯ ಬಹುಮಾನ ಮೊತ್ತವನ್ನು ಐಸಿಸಿ ಘೋಷಿಸಿದೆ. ಇದು 11.25 ಮಿಲಿ ಯನ್ ಡಾಲರ್ ಆಗಿದ್ದು, ರೂಪಾಯಿ ಯಲ್ಲಿ ಸುಮಾರು 93.50 ಕೋಟಿಗಳ ಷ್ಟಾಗುತ್ತದೆ. ಇದರಲ್ಲಿ ಚಾಂಪಿಯನ್ ತಂಡ ಸುಮಾರು 20.36 ಕೋಟಿ ರೂ. ಮೊತ್ತವನ್ನು ತನ್ನದಾಗಿಸಿಕೊಳ್ಳಲಿದೆ (2.45 ಮಿ. ಡಾಲರ್).
ಇದು ಕಳೆದ ಬಾರಿಯ ಬಹುಮಾನ ಮೊತ್ತಕ್ಕಿಂತ ಭಾರೀ ಹೆಚ್ಚಳವಾಗಿದೆ. ಜತೆಗೆ ಇದೊಂದು ದಾಖಲೆಯೂ ಹೌದು. ಕಳೆದ ಸಲದ ಚಾಂಪಿಯನ್ ಇಂಗ್ಲೆಂಡ್ ತಂಡಕ್ಕೆ ಸಿಕ್ಕಿದ್ದು 13 ಕೋಟಿ ರೂ. ರನ್ನರ್ ಅಪ್ ಪಾಕಿಸ್ಥಾನ ಪಡೆದದ್ದು 6.44 ಕೋಟಿ ರೂ.
ಈ ಬಾರಿ ರನ್ನರ್ ಅಪ್ ತಂಡಕ್ಕೆ 10.64 ಕೋಟಿ ರೂ. ಬಹುಮಾನ ಸಿಗಲಿದೆ. ಸೆಮಿಫೈನಲ್ನಲ್ಲಿ ಸೋತ ತಂಡಗಳಿಗೆ ತಲಾ 6.54 ಕೋಟಿ ರೂ., ಪ್ರತೀ ಗುಂಪಿನಲ್ಲಿ 3ನೇ ಸ್ಥಾನ ಪಡೆಯುವ ತಂಡಗಳಿಗೆ 2.06 ಕೋಟಿ ರೂ., ಉಳಿದ ತಂಡಗಳಿಗೆ 1.87 ಕೋಟಿ ರೂ. ಸಿಗಲಿದೆ. ಸೂಪರ್-8 ಹಂತದ ತನಕ ಪ್ರತೀ ಪಂದ್ಯವನ್ನು ಗೆಲ್ಲುವ ತಂಡಗಳಿಗೆ ತಲಾ 25.9 ಲಕ್ಷ ರೂ. ಲಭಿಸಲಿದೆ ಎಂದು ಐಸಿಸಿ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Development: ಸಂಪರ್ಕ ಸಾರಿಗೆಗಳಿಂದ ದೇಶದ ಆರ್ಥಿಕತೆ ಹೆಚ್ಚಳ: ಸಚಿವ ರಾಮಲಿಂಗಾರೆಡ್ಡಿ
SAFF U-17 Championship: ಭಾರತ-ಬಾಂಗ್ಲಾ ಫೈನಲ್
Gulveer Singh: ನೂತನ ರಾಷ್ಟ್ರೀಯ ದಾಖಲೆ ಸ್ಥಾಪಿಸಿದ ಗುಲ್ವೀರ್
ICC Women’s T20 World Cup: ವನಿತಾ ಟಿ20 ವಿಶ್ವಕಪ್; ಅಂಪಾಯರ್ಸ್ ಆಯ್ಕೆ
T20I series: ಬಾಂಗ್ಲಾದೇಶ ವಿರುದ್ಧದ ಟಿ20 ಸರಣಿ: ಸೂರ್ಯಕುಮಾರ್ ಯಾದವ್ ನಾಯಕ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.