ಇಂದು ಪ್ರಶಸ್ತಿ ಸ್ವೀಕಾರದ ಸಂಭ್ರಮದಲ್ಲಿದ್ದ ‘ದ್ರೋಣಾಚಾರ್ಯ’ ಪುರುಷೋತ್ತಮ ರೈ ನಿಧನ!
Team Udayavani, Aug 29, 2020, 6:00 AM IST
ಬೆಂಗಳೂರು: ದೇಶ ಕಂಡ ಖ್ಯಾತ ಅಥ್ಲೆಟಿಕ್ಸ್ ತರಬೇತುದಾರ ಪುರುಷೋತ್ತಮ ರೈ ತಮ್ಮ 79ನೇ ವಯಸ್ಸಿನಲ್ಲಿ ನಿಧನ ಹೊಂದಿದ್ದಾರೆ.
ಶುಕ್ರವಾರ ರಾತ್ರಿ 7.30ಕ್ಕೆ ಬೆಂಗಳೂರಿನ ತಮ್ಮ ನಿವಾಸದಲ್ಲಿ ಹೃದಯಾಘಾತ ಹೊಂದಿದ ಪರಿಣಾಮ, ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.
ಶನಿವಾರ ಆನ್‌ಲೈನ್ ಮೂಲಕ ದ್ರೋಣಾಚಾರ್ಯ ಪ್ರಶಸ್ತಿಯನ್ನು ಸ್ವೀಕರಿಸುವ ಸಂಭ್ರಮದಲ್ಲಿದ್ದ ಅವರು, ಹಿಂದಿನ ದಿನವಾದ ಶುಕ್ರವಾರ ನಿಧನ ಹೊಂದಿರುವುದು ನೋವಿನ ಸಂಗತಿಯಾಗಿದೆ.
ದ್ರೋಣಾಚಾರ್ಯ ಭಾರತೀಯ ಕ್ರೀಡಾ ತರಬೇತುದಾರರಿಗೆ ನೀಡುವ ಸರ್ವೋಚ್ಚ ಪ್ರಶಸ್ತಿಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನವರಾದ ಪುರುಷೋತ್ತಮ ರೈ ಅವರು, ರಾಷ್ಟ್ರೀಯ ಕ್ರೀಡಾ ಪ್ರಾಧಿಕಾರದ ತರಬೇತುದಾರರಾಗಿ ನಿವೃತ್ತರಾಗಿದ್ದರು.
ಅವರಿಗೆ ಹತ್ತಾರುವರ್ಷಗಳ ಹಿಂದೆಯೇ ಸಿಗಬೇಕಾಗಿದ್ದ ದ್ರೋಣಾಚಾರ್ಯ, ತಡವಾಗಿಯಾದರೂ ಸಿಕ್ಕಿತ್ತು. ಸ್ವತಃ ರೈಯವರು ಈ ಪ್ರಶಸ್ತಿ ತನಗೆ 20 ವರ್ಷಗಳ ಹಿಂದೆಯೇ ಬರಬೇಕಿತ್ತೆಂದು ಹೇಳಿದ್ದರು. ಪ್ರಸ್ತುತ ತರಬೇತುದಾರರಾಗಿ ಅವರು ಮಾಡಿದ ಆಜೀವ ಸಾಧನೆಗೆ ದ್ರೋಣಾಚಾರ್ಯ ಲಭಿಸಿದೆ.
ಪುರುಷೋತ್ತಮ ಅವರು, 1974ರಿಂದಲೇ ತರಬೇತುದಾರಿಕೆಯನ್ನು ಆರಂಭಿಸಿದರು. ಹಲವಾರು ಏಷ್ಯನ್ ಗೇಮ್ಸ್‌ಗಳು, ಸ್ಯಾಫ್ ಗೇಮ್ಸ್‌ಗಳು, ಏಷ್ಯಾಮಟ್ಟದ ಇತರೆ ಕೂಟಗಳಿಗಾಗಿ ಅವರು ಅಥ್ಲೀಟ್‌ಗಳನ್ನು ತಯಾರು ಮಾಡಿದ್ದರು.
1987ರಲ್ಲಿ ಇಟಲಿಯ ರೋಮ್‌ನಲ್ಲಿ ವಿಶ್ವ ಅಥ್ಲೆಟಿಕ್ ಕೂಟಕ್ಕೆ ಭಾರತೀಯ ತಂಡದ ತರಬೇತುದಾರರಾಗಿ ತೆರಳಿದ್ದರು.
ಇವರ ಗರಡಿಯಲ್ಲಿ ತಯಾರಾಗಿದ್ದ ಖ್ಯಾತ ಕ್ರೀಡಾಪಟುಗಳು: ಪುರುಷೋತ್ತಮ ಅವರ ಗರಡಿಯಲ್ಲಿ ಹಲವಾರು ಕ್ರೀಡಾರತ್ನಗಳು ಸಿದ್ಧವಾಗಿವೆ ಅಚರಲ್ಲಿ ಪ್ರಮುಖರೆಂದರೆ, ಮುರಳಿಕುಟ್ಟನ್, ಅಶ್ವಿನಿ ನಾಚಪ್ಪ, ಎಸ್.ಡಿ.ಈಶನ್, ರೋಸಾ ಕುಟ್ಟಿ, ಜಿ.ಜಿ.ಪ್ರಮೀಳಾ, ಎಂ.ಕೆ.ಆಶಾ, ಇ.ಬಿ.ಶೈಲಾ, ಜೈಸಿ ಥಾಮಸ್ ಇವರಿಂದ ತರಬೇತಾದ ಪ್ರಮುಖರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
T20: ತಿಲಕ್ ವರ್ಮ ಸ್ಫೋಟಕ ಶತಕ… ಭಾರತ ಆರು ವಿಕೆಟಿಗೆ 219
Ranaji Trophy: ಉತ್ತರ ಪ್ರದೇಶ ವಿರುದ್ಧ ಕರ್ನಾಟಕಕ್ಕೆ ಮುನ್ನಡೆ
Border-Gavaskar Trophy ಆರಂಭಕ್ಕೆ ಮುನ್ನ ಗಂಭೀರ್- ರಿಕಿ ಪಾಂಟಿಂಗ್ ವಾಗ್ಯುದ್ಧ
INDvsSA: ಸೆಂಚುರಿಯನ್‌ನಲ್ಲೂ ಕ್ವಿಕ್, ಬೌನ್ಸಿ ಟ್ರ್ಯಾಕ್?: ಸುಧಾರಿಸಬೇಕಿದೆ ಬ್ಯಾಟಿಂಗ್
Ranji Trophy: ಯುಪಿ ಎದುರಾಳಿ; ಕರ್ನಾಟಕಕ್ಕೆ ನಾಕೌಟ್ ಒತ್ತಡ
MUST WATCH
ಹೊಸ ಸೇರ್ಪಡೆ
T20: ತಿಲಕ್ ವರ್ಮ ಸ್ಫೋಟಕ ಶತಕ… ಭಾರತ ಆರು ವಿಕೆಟಿಗೆ 219
Ranaji Trophy: ಉತ್ತರ ಪ್ರದೇಶ ವಿರುದ್ಧ ಕರ್ನಾಟಕಕ್ಕೆ ಮುನ್ನಡೆ
Alert: ವಾಟ್ಸ್‌ಆ್ಯಪ್‌ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್ ತೆರೆದೀರಿ ಜೋಕೆ!
Vitla:ಮಾಣಿ -ಮೈಸೂರು ರಾಜ್ಯ ಹೆದ್ದಾರಿಯಲ್ಲಿ ಲಾರಿ ಮೇಲೆ ಮರ ಬಿದ್ದು ರಸ್ತೆ ಸಂಪೂರ್ಣ ಬ್ಲಾಕ್
Self Treatment!: ಸ್ವಯಂ ಚಿಕಿತ್ಸೆಯ ಮೂಲಕ ಸ್ತನ ಕ್ಯಾನ್ಸರ್ ಗೆದ್ದ ವಿಜ್ಞಾನಿ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.