ಸೆ. 15ರಿಂದ ಡೇವಿಸ್ ಕಪ್ ಪ್ಲೇ ಆಫ್ ಭಾರತಕ್ಕೆ ಕೆನಡಾ ಎದುರಾಳಿ
Team Udayavani, Apr 12, 2017, 3:15 PM IST
ಹೊಸದಿಲ್ಲಿ: ಸೆಪ್ಟಂಬರ್ 15ರಿಂದ 17ರ ವರೆಗೆ ನಡೆಯಲಿರುವ ಡೇವಿಸ್ ಕಪ್ ವಿಶ್ವ ಗುಂಪಿನ ಪಂದ್ಯದಲ್ಲಿ ಭಾರತ ತಂಡ ಕೆನಡಾ ಸವಾಲನ್ನು ಎದುರಿಸಲಿದೆ. ಇದನ್ನು ಡೇವಿಸ್ ಕಪ್ ಟ್ವಿಟರ್ ಪೇಜ್‌ನಲ್ಲಿ ಪ್ರಕಟಿಸಲಾಗಿದೆ. ಆದರೆ ಯಾವ ದೇಶದ ಆತಿಥ್ಯದಲ್ಲಿ ಈ ಟೂರ್ನಿ ನಡೆಯುತ್ತದೆ ಎನ್ನುವುದರ ಬಗ್ಗೆ ಇನ್ನಷ್ಟೇ ಮಾಹಿತಿ ಹೊರಬೀಳಬೇಕಿದೆ.
ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಡೇವಿಸ್ ಕಪ್ ಏಶ್ಯ/ಒಶಿಯಾನಿಯಾದ ಪ್ಲೇ ಆಫ್ ರೌಂಡ್ 2ರಲ್ಲಿ ಭಾರತ 4-1ರಿಂದ ಉಜ್ಬೇಕಿಸ್ಥಾನವನ್ನು ಮಣಿಸಿ ವಿಶ್ವ ಗುಂಪಿಗೆ ತೇರ್ಗಡೆಯಾಗಿದೆ. ಯುವ ಆಟಗಾರರಾದ ರಾಮಕುಮಾರ್ ರಾಮನಾಥನ್, ಪ್ರಜ್ಞೆàಶ್ ಗುಣೇಶ್ವರನ್, ರೋಹನ್ ಬೋಪಣ್ಣ ಅತ್ಯುತ್ತಮ ಪ್ರದರ್ಶನ ನೀಡಿದ್ದರು. ಮಾಜಿ ಆಟಗಾರ ಮಹೇಶ್ ಭೂಪತಿ ತಂಡದ ನಾಯಕನಾದ ಬಳಿಕ ಆಡಲಾದ ಮೊದಲ ಪಂದ್ಯಾವಳಿ ಇದಾಗಿತ್ತು. ಆದರೆ ಖ್ಯಾತ ಡಬಲ್ಸ್ ಆಟಗಾರ ಲಿಯಾಂಡರ್ ಪೇಸ್ ಅವರನ್ನು 27 ವರ್ಷಗಳ ಅನಂತರ ತಂಡದಿಂದ ಕೈಬಿಟ್ಟಿರುವುದು ವಿವಾದಕ್ಕೆ ಕಾರಣವಾಗಿತ್ತು.
ಪೇಸ್, ಭೂಪತಿ ಪ್ರೌಢರಂತೆ ವರ್ತಿಸಬೇಕು
ಉಜ್ಬೇಕಿಸ್ಥಾನದ ವಿರುದ್ಧ ಡೇವಿಸ್ ಕಪ್ ಟೆನಿಸ್ ಕೂಟದ ವೇಳೆ ತನ್ನನ್ನು ತಂಡಕ್ಕೆ ಸೇರಿಸಿಕೊಳ್ಳಲಿಲ್ಲ ಎಂದು ಲಿಯಾಂಡರ್ ಪೇಸ್ ಬಹಿರಂಗ ಬೇಸರ ವ್ಯಕ್ತಪಡಿಸಿದ್ದರು. ಬೆನ್ನಲ್ಲೇ ಭಾರತ ಡೇವಿಸ್ ಕಪ್ ತಂಡದ ಆಟವಾಡದ ನಾಯಕ ಮಹೇಶ್ ಭೂಪತಿ ತಂಡಕ್ಕೆ ಯಾಕೆ ಸೇರಿಸಿಕೊಳ್ಳಲಿಲ್ಲ ಎನ್ನುವುದಕ್ಕೆ ಕಾರಣವನ್ನೂ ನೀಡಿದ್ದರು. ಇಬ್ಬರ ವಾಕ್ಸಮರ ಅಖೀಲ ಭಾರತೀಯ ಟೆನಿಸ್ ಸಂಸ್ಥೆಗೆ (ಎಐಟಿಎ) ಮುಜುಗರ ತಂದಿದೆ. ಈ ಕುರಿತಂತೆ ಎಐಟಿಎ ಇಬ್ಬರು ಹಿರಿಯ ಟೆನಿಸಿಗರು ಈ ರೀತಿ ಕಿತ್ತಾಡುವ ಬದಲು ಪ್ರೌಢತೆಯನ್ನು ಪ್ರದರ್ಶಿಸಬೇಕು ಎಂದು ಸೂಚನೆ ನೀಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf Notice: ಬಸನಗೌಡ ಪಾಟೀಲ್ ಯತ್ನಾಳ್ ತಂಡದಿಂದ 1 ತಿಂಗಳು ಜನ ಜಾಗೃತಿ
Waqf Issue: ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ
Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ
Black Days: ಜಮೀರ್+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್.ಡಿ.ಕುಮಾರಸ್ವಾಮಿ
Air Pollution: ದಿಲ್ಲಿ ಗಾಳಿಯೇ ವಿಷ, ಒಂದು ದಿನದ ಉಸಿರಾಟ 25 ಸಿಗರೇಟಿಗೆ ಸಮ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.