ಇರಾನಿ ಕಪ್ ಗೆದ್ದ ಶೇಷ ಭಾರತ
Team Udayavani, Jan 25, 2017, 3:45 AM IST
ಮುಂಬಯಿ: ಮೊದಲ ಬಾರಿಗೆ ರಣಜಿ ಟ್ರೋಫಿ ಗೆದ್ದು ಇತಿಹಾಸ ನಿರ್ಮಿಸಿದ ಗುಜರಾತ್ ತಂಡಕ್ಕೆ ಇರಾನಿ ಕಪ್ ಜಯಿಸಿ ಮತ್ತೂಂದು ಇತಿಹಾಸ ನಿರ್ಮಿಸುವ ಅವಕಾಶ ಕೈತಪ್ಪಿದೆ. ಈ ಅದೃಷ್ಟ ಶೇಷ ಭಾರತ ತಂಡದ್ದಾಗಿದೆ. ಪಂದ್ಯದ ಅಂತಿಮ ದಿನವಾದ ಮಂಗಳವಾರ ಚೇತೇಶ್ವರ್ ಪೂಜಾರ ನಾಯಕತ್ವದ ಶೇಷ ಭಾರತ 6 ವಿಕೆಟ್‌ಗಳ ಅಮೋಘ ಜಯಭೇರಿ ಮೊಳಗಿಸಿ ಚಾಂಪಿಯನ್ ಆಗಿ ಹೊರಹೊಮ್ಮಿತು.
ಮೊದಲ ಇನ್ನಿಂಗ್ಸ್‌ನಲ್ಲಿ 132 ರನ್ನುಗಳ ಭಾರೀ ಹಿನ್ನಡೆಗೆ ಸಿಲುಕಿದ ಬಳಿಕ ಗೆಲುವಿಗೆ 379 ರನ್ನುಗಳ ಕಠಿನ ಸವಾಲು ಪಡೆದಿದ್ದ ಶೇಷ ಭಾರತ, ಅಂತಿಮ ದಿನವಾದ ಮಂಗಳವಾರ ಭೋಜನ ವಿರಾಮದ ಹೊತ್ತಿಗೆ ಕೇವಲ 4 ವಿಕೆಟ್ ನಷ್ಟದಲ್ಲಿ ಗುರಿ ಮುಟ್ಟಿತು. ನಾಯಕ ಚೇತೇಶ್ವರ್ ಪೂಜಾರ ಮತ್ತು ವಿಕೆಟ್ ಕೀಪರ್ ವೃದ್ಧಿಮಾನ್ ಸಾಹಾ ಅಸಾಮಾನ್ಯ ಬ್ಯಾಟಿಂಗ್ ಸಾಹಸವೊಂದನ್ನು ಪ್ರದರ್ಶಿಸಿ ತಂಡದ ಗೆಲುವನ್ನು ಸಾರಿದರು. ಇವರಿಬ್ಬರು ಮುರಿಯದ 5ನೇ ವಿಕೆಟಿಗೆ 78.5 ಓವರ್‌ಗಳಲ್ಲಿ 316 ರನ್ ಪೇರಿಸಿ ಗುಜರಾತ್ ತಂಡದ ಕನಸನ್ನು ಛಿದ್ರಗೊಳಿಸಿದರು. ಇದೂ ಸೇರಿದಂತೆ ಕಳೆದ 19 ಆವೃತ್ತಿಗಳಲ್ಲಿ ಶೇಷ ಭಾರತ ತಂಡ 15ನೇ ಸಲ ಚಾಂಪಿಯನ್ ಎನಿಸಿಕೊಂಡಿತು.
ತಂಡದ ವಿಜಯೋತ್ಸವದ ವೇಳೆ ಸಾಹಾ 203 ಹಾಗೂ ಪೂಜಾರ 116 ರನ್ ಬಾರಿಸಿ ಅಜೇಯರಾಗಿದ್ದರು. 63ಕ್ಕೆ 4 ವಿಕೆಟ್ ಉರುಳಿ ತಂಡಕ್ಕೆ ಸೋಲಿನ ಭೀತಿ ಎದುರಾಗಿದ್ದಾಗ ಇವರಿಬ್ಬರು ಜತೆಗೂಡಿದ್ದರು. 4ನೇ ದಿನದ ಕೊನೆಗೆ ತಂಡದ ಮೊತ್ತವನ್ನು 266ಕ್ಕೆ ಏರಿಸಿ ಗೆಲುವಿನ ಸಾಧ್ಯತೆ ಯನ್ನು ತೆರೆದಿರಿಸಿದ್ದರು.
ಮಂಗಳವಾರ ಪೂಜಾರ-ಸಾಹಾ ಜೋಡಿಯನ್ನು ಬೇಗನೇ ಬೇರ್ಪಡಿಸಿದರಷ್ಟೇ ಗುಜರಾತ್‌ಗೆ ಮೇಲುಗೈ ಅವಕಾಶವಿತ್ತು. ಆದರೆ ಪಾರ್ಥಿವ್ ಪಡೆಗೆ ಒಂದೂ ವಿಕೆಟ್ ಉರುಳಿಸಲಾಗಲಿಲ್ಲ.
ಸಾಹಾ ಜೀವನಶ್ರೇಷ್ಠ ಆಟ
ಸಾಹಾ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಹೊಡೆದ ಮೊದಲ ದ್ವಿಶತಕ ಇದಾಗಿದೆ. 346 ನಿಮಿಷಗಳ ಕಾಲ ಕ್ರೀಸ್ ಆಕ್ರಮಿಸಿಕೊಂಡ ಸಾಹಾ 272 ಎಸೆತಗಳನ್ನು ನಿಭಾಯಿಸಿದರು. 26 ಬೌಂಡರಿ, 6 ಸಿಕ್ಸರ್ ಸಿಡಿಸಿ ಗುಜರಾತ್ ದಾಳಿಯನ್ನು ಪುಡಿಗುಟ್ಟಿದರು. ಇದು ಇರಾನಿ ಕಪ್ ಇತಿಹಾಸದಲ್ಲಿ ವಿಕೆಟ್ ಕೀಪರ್ ಓರ್ವ ಬಾರಿಸಿದ ಮೊದಲ ದ್ವಿಶತಕ. ಈ ಸಾಧನೆಗಾಗಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದ ಸಾಹಾ, ಮರಳಿ ಟೀಮ್ ಇಂಡಿಯಾ ಸೇರಿಕೊಳ್ಳುವ ರೇಸ್‌ನಲ್ಲಿ ಕಾಣಿಸಿಕೊಂಡಿದ್ದಾರೆ.
ತಾಳ್ಮೆಯ ಆಟಕ್ಕೆ ಹೆಸರುವಾಸಿಯಾದ ಪೂಜಾರ 409 ನಿಮಿಷ ಕಾಲ ಬ್ಯಾಟ್ ಹಿಡಿದು ನಿಂತರು. ಎದುರಿಸಿದ್ದು 238 ಎಸೆತ, ಹೊಡೆದದ್ದು 16 ಬೌಂಡರಿ. ಹಾರ್ದಿಕ್ ಪಟೇಲ್ ಎಸೆತವನ್ನು ಲಾಂಗ್-ಆಫ್ ಬೌಂಡರಿಗೆ ಬಾರಿಸುವ ಮೂಲಕ ಪೂಜಾರ ತಂಡದ ಗೆಲುವನ್ನು ಸಾರಿದರು.
ಇದು ಇರಾನಿ ಕಪ್ ಇತಿಹಾಸದ 2ನೇ ಅತೀ ದೊಡ್ಡ ಜತೆಯಾಟ. 1990-92ರಲ್ಲಿ ಶೇಷ ಭಾರತದ ವಿರುದ್ಧ ಮುಂಬಯಿಯ ರವಿ ಶಾಸ್ತ್ರಿ-ಪ್ರವೀಣ್ ಆಮ್ರೆ 4ನೇ ವಿಕೆಟಿಗೆ 327 ರನ್ ಪೇರಿಸಿದ್ದು ದಾಖಲೆಯಾಗಿ ಉಳಿದಿದೆ.
ಸ್ಕೋರ್ ಪಟ್ಟಿ
ಗುಜರಾತ್ ಪ್ರಥಮ ಇನ್ನಿಂಗ್ಸ್: 358
ಶೇಷ ಭಾರತ ಪ್ರಥಮ ಇನ್ನಿಂಗ್ಸ್: 226
ಗುಜರಾತ್ ದ್ವಿತೀಯ ಇನ್ನಿಂಗ್ಸ್: 246
ಶೇಷ ಭಾರತ ದ್ವಿತೀಯ ಇನ್ನಿಂಗ್ಸ್:
(ಗೆಲುವಿನ ಗುರಿ 379 ರನ್)
ಅಖೀಲ್ ಹೆರ್ವಾಡ್ಕರ್ ಸಿ ಪಾಂಚಾಲ್ ಬಿ ಕರಣ್ 20
ಅಭಿನವ್ ಮುಕುಂದ್ ಸಿ ರಾವಲ್ ಬಿ ಹಾರ್ದಿಕ್ 19
ಚೇತೇಶ್ವರ್ ಪೂಜಾರ ಔಟಾಗದೆ 116
ಕರುಣ್ ನಾಯರ್ ಬಿ ಹಾರ್ದಿಕ್ 7
ಮನೋಜ್ ತಿವಾರಿ ಸಿ ಪಾರ್ಥಿವ್ ಬಿ ಥದಾನಿ 7
ವೃದ್ಧಿಮಾನ್ ಸಾಹಾ ಔಟಾಗದೆ 203
ಇತರ 7
ಒಟ್ಟು (4 ವಿಕೆಟಿಗೆ) 379
ವಿಕೆಟ್ ಪತನ: 1-29, 2-48, 3-56, 4-63.
ಬೌಲಿಂಗ್:
ಚಿಂತನ್ ಗಜ 17-4-66-0
ಮೋಹಿತ್ ಥದಾನಿ 20-5-84-1
ಕರಣ್ ಪಟೇಲ್ 9-0-40-1
ಈಶ್ವರ್ ಚೌಧರಿ 19-3-67-0
ಹಾರ್ದಿಕ್ ಪಟೇಲ್ 36.1-17-104-2
ಮನ್‌ಪ್ರೀತ್ ಜುನೇಜ 2-1-11-0
ಪಂದ್ಯಶ್ರೇಷ್ಠ: ವೃದ್ಧಿಮಾನ್ ಸಾಹಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Wrong Spelling: ಅಪಹರಣದ ಪತ್ರದಲ್ಲಿ ಅಕ್ಷರ ತಪ್ಪು ಬರೆದು ಸಿಕ್ಕಿಬಿದ್ದ ಭೂಪ!
Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ
ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್: ವಿ.ನಾರಾಯಣನ್
Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು
Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್ ನಿಶ್ಶಬ್ದ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.