ವಿಶ್ವಕಪ್ ಸಾಧಕರ ತಂಡ: ಭಾರತದ ರಿಚಾ ಘೋಷ್‌ಗೆ ಸ್ಥಾನ
Team Udayavani, Feb 28, 2023, 7:53 AM IST
ದುಬಾೖ: ಆಸ್ಟ್ರೇಲಿಯದ ಪ್ರಭುತ್ವದೊಂದಿಗೆ ವನಿತಾ ಟಿ20 ವಿಶ್ವಕಪ್ ಪಂದ್ಯಾವಳಿಗೆ ರವಿವಾರ ರಾತ್ರಿ ಕೇಪ್ ಟೌನ್‌ನಲ್ಲಿ ತೆರೆ ಬಿದ್ದಿದೆ.
ಸಂಪ್ರದಾಯದಂತೆ ಐಸಿಸಿ ಈ ಕೂಟದಲ್ಲಿ ಮಿಂಚಿದ ಆಟಗಾರ್ತಿಯರ ಆಡುವ ಬಳಗವೊಂದನ್ನು ಪ್ರಕಟಿಸಿದೆ. ಇದರಲ್ಲಿ ಸ್ಥಾನ ಪಡೆದ ಭಾರತದ ಏಕೈಕ ಆಟಗಾರ್ತಿಯೆಂದರೆ ರಿಚಾ ಘೋಷ್.
ಭಾರತ ತಂಡದ ಕೀಪರ್ ಆಗಿರುವ ರಿಚಾ ಘೋಷ್ ಆರಂಭಿಕ ಪಂದ್ಯಗಳಲ್ಲಿ ಬಿರುಸಿನ ಬ್ಯಾಟಿಂಗ್ ಮೂಲಕ ಗಮನ ಸೆಳೆದಿದ್ದರು. 68.00 ಸರಾಸರಿಯಲ್ಲಿ 136 ರನ್ ಗಳಿಸಿದ್ದು ರಿಚಾ ಸಾಧನೆ.
ಆಸ್ಟ್ರೇಲಿಯದ ನಾಲ್ವರು
ತಂಡದಲ್ಲಿ ಚಾಂಪಿಯನ್ ಆಸ್ಟ್ರೇಲಿಯದ ಸರ್ವಾಧಿಕ ನಾಲ್ವರು ಆಟಗಾರ್ತಿಯರಿದ್ದಾರೆ. ಆದರೆ ವಿಶ್ವಕಪ್ ವಿಜೇತ ತಂಡದ ನಾಯಕಿ ಮೆಗ್ ಲ್ಯಾನಿಂಗ್ ಈ ತಂಡದಲ್ಲಿ ಇಲ್ಲದಿರುವುದೊಂದು ಅಚ್ಚರಿ. ಇಂಗ್ಲೆಂಡ್‌ನ ನಥಾಲಿ ಸ್ಕಿವರ್ ಬ್ರಂಟ್ ನಾಯಕಿಯಾಗಿ ಆಯ್ಕೆಯಾದ್ದಾರೆ. ಸ್ಕಿವರ್ 3 ಸಲ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾಗಿದ್ದರು. ಕೂಟದಲ್ಲಿ ದ್ವಿತೀಯ ಸರ್ವಾಧಿಕ ರನ್ ಬಾರಿಸಿದ ಸಾಧನೆ ಇವರದು (216 ರನ್).
ತಂಡದಲ್ಲಿರುವ ಆಸ್ಟ್ರೇಲಿಯದ ಆಟಗಾರ್ತಿಯರೆಂದರೆ ಸರಣಿಶ್ರೇಷ್ಠ ಪ್ರಶಸ್ತಿಗೆ ಭಾಜನರಾದ ಆ್ಯಶ್ಲಿ ಗಾರ್ಡನರ್, ಅಲಿಸ್ಸಾ ಹೀಲಿ, ಡಾರ್ಸಿ ಬ್ರೌನ್ ಮತ್ತು ಮೆಗಾನ್ ಶಟ್.
ಉಳಿದಂತೆ ದಕ್ಷಿಣ ಆಫ್ರಿಕಾದ ಮೂವರು, ಇಂಗ್ಲೆಂಡ್‌ನ ಇಬ್ಬರು, ವೆಸ್ಟ್ ಇಂಡೀಸ್‌ನ ಒಬ್ಬರು ಸ್ಥಾನ ಪಡೆದಿದ್ದಾರೆ. 12ನೇ ಆಟಗಾರ್ತಿಯಾಗಿ ಆಯ್ಕೆಯಾದವರು ಐರ್ಲೆಂಡ್‌ನ ಓರ್ಲಾ ಪ್ರಂಡರ್ಗಾಸ್ಟ್.
ಆಯ್ಕೆ ಸಮಿತಿ
ಈ ತಂಡವನ್ನು ವೀಕ್ಷಕ ವಿವರಣ ಕಾರರು, ಪತ್ರಕರ್ತರು, ಐಸಿಸಿ ಅಧಿ ಕಾರಿಗಳು ಸೇರಿಕೊಂಡು ಆರಿಸಿದ್ದಾರೆ. ಕ್ರಿಕೆಟ್ ಅಭಿಮಾನಿಗಳ ಮತವನ್ನೂ ಪರಿಗಣಿಸಲಾಗಿದೆ. ತಂಡದ ಸದಸ್ಯರೆಂದರೆ ಇಯಾನ್ ಬಿಷಪ್, ಮೆಲಾನಿ ಜೋನ್ಸ್, ಎಬೋನಿ ರೇನ್‌ಫೋರ್ಡ್ ಬ್ರಂಟ್, ಫಿರ್ದೋಸ್ ಮೂಂಡ ಮತ್ತು ಸ್ನೇಹಲ್ ಪ್ರಧಾನ್.
ಐಸಿಸಿ ಸಾಧಕರ ತಂಡ
ಟಾಜ್ಮಿನ್ ಬ್ರಿಟ್ಸ್ (ದಕ್ಷಿಣ ಆಫ್ರಿಕಾ, 186 ರನ್)
ಅಲಿಸ್ಸಾ ಹೀಲಿ (ವಿ.ಕೀ., ಆಸ್ಟ್ರೇಲಿಯ 189 ರನ್, 4 ಕ್ಯಾಚ್/ಸ್ಟಂಪಿಂಗ್)
ಲಾರಾ ವೋಲ್ವಾರ್ಟ್ (ದಕ್ಷಿಣ ಆಫ್ರಿಕಾ, 230 ರನ್)
ನಥಾಲಿ ಸ್ಕಿವರ್ ಬ್ರಂಟ್ (ನಾಯಕಿ, ಇಂಗ್ಲೆಂಡ್, 216 ರನ್)
ಆ್ಯಶ್ಲಿ ಗಾರ್ಡನರ್ (ಆಸ್ಟ್ರೇಲಿಯ, 110 ರನ್, 10 ವಿಕೆಟ್)
ರಿಚಾ ಘೋಷ್ (ಭಾರತ, 136 ರನ್)
ಸೋಫಿ ಎಕ್‌ಸ್ಟೋನ್ (ಇಂಗ್ಲೆಂಡ್, 11 ವಿಕೆಟ್)
ಕರಿಷ್ಮಾ ರಮರಾಕ್ (ವೆಸ್ಟ್ ಇಂಡೀಸ್, 5 ವಿಕೆಟ್)
ಶಬಿ°ಮ್ ಇಸ್ಮಾಯಿಲ್ (ದಕ್ಷಿಣ ಆಫ್ರಿಕಾ, 8 ವಿಕೆಟ್)
ಡಾರ್ಸಿ ಬ್ರೌನ್ (ಆಸ್ಟ್ರೇಲಿಯ, 7 ವಿಕೆಟ್)
ಮೆಗಾನ್ ಶಟ್ (ಆಸ್ಟ್ರೇಲಿಯ, 10 ವಿಕೆಟ್)
ಓರ್ಲಾ ಪ್ರಂಡರ್ಗಾಸ್ಟ್ (ಐರ್ಲೆಂಡ್, 109 ರನ್, 3 ವಿಕೆಟ್)
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
INDvAUS: ಬ್ಯಾನ್ ತಪ್ಪಿಸಿಕೊಂಡ ವಿರಾಟ್ ಕೊಹ್ಲಿ; ಆದರೂ ಶಿಕ್ಷೆ ತಪ್ಪಲಿಲ್ಲ
Vijay Hazare Trophy: ಮಯಾಂಕ್ ಅಗರ್ವಾಲ್ ಶತಕದಾಟ; ಪಂಜಾಬ್ ಕೈನಿಂದ ಜಯ ಕಸಿದ ಕರ್ನಾಟಕ
M Chinnaswamy Stadium; ಶಾಂತಾ ಹೆಸರಿಡಲು ಸಮಸ್ಯೆಯೇನಿದೆ? ಕೆಎಸ್‌ಸಿಎ ತಾರತಮ್ಯವೇಕೆ?
PV Sindhu: ವಿಮಾನದಲ್ಲಿ ಶುರುವಾಯ್ತು ಸಿಂಧು-ದತ್ತಾ ಲವ್ ಸ್ಟೋರಿ
INDvAUS: ಯುವ ಆಟಗಾರನ ಕೆಣಕಿ ತಪ್ಪು ಮಾಡಿದರೆ ಕೊಹ್ಲಿ? ಶಿಕ್ಷೆ ಗ್ಯಾರಂಟಿ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
RSS: ಮೋಹನ್ ಭಾಗವತರ ಮಂದಿರ,ಮಸೀದಿ ಹೇಳಿಕೆಗೆ ಈಗ ಆರೆಸ್ಸೆಸ್ ಪತ್ರಿಕೆ ಆಕ್ಷೇಪ
Telangana: ಕಾನೂನು ಪಾಲನೆ ಕಡ್ಡಾಯ: ತೆಲುಗು ಚಿತ್ರರಂಗಕ್ಕೆ ತೆಲಂಗಾಣ ಸಿಎಂ ಖಡಕ್ ಮಾತು
Controversy: ಕಾಂಗ್ರೆಸ್ ಪೋಸ್ಟರ್‌ನಲ್ಲಿ ಪಿಒಕೆ ತಪ್ಪಾಗಿ ಚಿತ್ರಣ; ಬಿಜೆಪಿ ತೀವ್ರ ಆಕ್ರೋಶ
Tollywood: ಹೊಸ ವರ್ಷಕ್ಕೆ ಟಾಲಿವುಡ್‌ನಲ್ಲಿ ಸಾಲು ಸಾಲು ಹಳೆ ಸಿನಿಮಾಗಳು ರೀ- ರಿಲೀಸ್
Kambala: ಡಿ.28-29ರಂದು 8ನೇ ವರ್ಷದ ‘ಮಂಗಳೂರು ಕಂಬಳ’: ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.