Ricky Ponting: ಡೆಲ್ಲಿಯಿಂದ ಪಂಜಾಬ್ ಗೆ ಬಂದ ರಿಕಿ ಪಾಂಟಿಂಗ್
Team Udayavani, Sep 19, 2024, 8:00 AM IST
ಹೊಸದಿಲ್ಲಿ: ಆಸ್ಟ್ರೇಲಿಯದ ಕ್ರಿಕೆಟಿಗ ರಿಕಿ ಪಾಂಟಿಂಗ್ ಅವರ ಐಪಿಎಲ್ ಫ್ರಾಂಚೈಸಿ ಬದಲಾಗಿದ್ದು, ಡೆಲ್ಲಿ ಕ್ಯಾಪಿಟಲ್ಸ್‌ನಿಂದ ಪಂಜಾಬ್ ಕಿಂಗ್ಸ್‌ಗೆ ಬಂದಿದ್ದಾರೆ. ಅವರು ಪಂಜಾಬ್ ತಂಡದ ಪ್ರಧಾನ ಕೋಚ್ ಆಗಿ ನೇಮಿಸಲ್ಪಟ್ಟಿದ್ದು, ತಮ್ಮದೇ ದೇಶದ ಟ್ರೇವರ್ ಬೈಲಿಸ್ ಸ್ಥಾನವನ್ನು ತುಂಬಲಿದ್ದಾರೆ.
ರಿಕಿ ಪಾಂಟಿಂಗ್ ಕಳೆದ 7 ವರ್ಷಗಳಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮೆಂಟರ್ ಆಗಿ ಕರ್ತವ್ಯ ನಿಭಾಯಿಸುತ್ತಿದ್ದರು. 2020ರಲ್ಲಿ ಫೈನಲ್ ತಲುಪಿದ್ದಷ್ಟೇ ಡೆಲ್ಲಿ ಸಾಧನೆ ಆಗಿತ್ತು. ಇದಕ್ಕೂ ಮುನ್ನ ಪಾಂಟಿಂಗ್ ಮುಂಬೈ ತಂಡದ ಕೋಚ್ ಆಗಿದ್ದರು. “ರಿಕಿ ಪಾಂಟಿಂಗ್ ಮಂಗಳವಾರ ಪಂಜಾಬ್ ಕಿಂಗ್ಸ್ ತಂಡದ ಕೋಚ್ ಒಡಂಬಡಿಕೆಗೆ ಸಹಿ ಹಾಕಿದ್ದಾರೆ. ಇದು 4 ವರ್ಷಗಳ ಒಡಂಬಡಿಕೆ ಆಗಿರುತ್ತದೆ’ ಎಂಬುದಾಗಿ ಐಪಿಎಲ್ ಮೂಲವೊಂದು ಹೇಳಿದೆ.
ಪಂಜಾಬ್ ಈವರೆಗೆ ಐಪಿಎಲ್ ಚಾಂಪಿಯನ್ ಆಗಿಲ್ಲ. ಕಳೆದ 7 ವರ್ಷಗಳಲ್ಲಿ ಟಾಪ್-5 ಸ್ಥಾನದಲ್ಲೂ ಕಾಣಿಸಿಕೊಂಡಿಲ್ಲ. 2024ರ ಐಪಿಎಲ್‌ನಲ್ಲಿ ಅದು 9ನೇ ಸ್ಥಾನಕ್ಕೆ ಕುಸಿದಿತ್ತು. ವಿಶ್ವಕಪ್ ವಿಜೇತ ತಂಡದ ಕಪ್ತಾನನಾಗಿರುವ ರಿಕಿ ಪಾಂಟಿಂಗ್ ಪಂಜಾಬ್ ತಂಡದ ಹಣೆಬರಹವನ್ನು ಬದಲಿಸಬಲ್ಲರೇ ಎಂಬುದು ಫ್ರಾಂಚೈಸಿ ಮಾಲಕರ ನಿರೀಕ್ಷೆ.
ಇದನ್ನೂ ಓದಿ: Duleep Trophy Cricket: ಇಂದಿನಿಂದ 3ನೇ ಸುತ್ತಿನ ಸ್ಪರ್ಧೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.