ಕಾಮನ್ವೆಲ್ತ್ ಗೇಮ್ಸ್ ಬಹಿಷ್ಕರಿಸುವ ಪ್ರಸ್ತಾವಕ್ಕೆ ರೈಫಲ್ ಸಂಸ್ಥೆ ಬೆಂಬಲ
Team Udayavani, Jul 29, 2019, 10:23 AM IST
ಹೊಸದಿಲ್ಲಿ: ಶೂಟಿಂಗ್ ಸ್ಪರ್ಧೆಯನ್ನು ಕೈಬಿಟ್ಟಿರುವ ಕಾರಣಕ್ಕಾಗಿ 2022ರ ಕಾಮನ್ವೆಲ್ತ್ ಗೇಮ್ಸ್ ಅನ್ನು ಬಹಿಷ್ಕರಿಸುವ ಭಾರತೀಯ ಒಲಿಂಪಿಕ್ ಅಸೋಸಿಯೇಶನ್ (ಐಒಎ) ಪ್ರಸ್ತಾವವನ್ನು ಭಾರತೀಯ ರಾಷ್ಟ್ರೀಯ ರೈಫಲ್ ಅಸೋಸಿ ಯೇಶನ್ (ಎನ್‌ಆರ್‌ಎಐ) ಬೆಂಬಲಿಸಲಿದೆ.
“ಐಒಎ ಮೇಲೆ ನಮಗೆ ಪೂರ್ಣ ನಂಬಿಕೆ ಇದೆ ಮತ್ತು ಐಒಎ ತೆಗೆದುಕೊಳ್ಳುವ ನಿರ್ಧಾರವನ್ನು ಬೆಂಬಲಿಸಲಿ ದ್ದೇವೆ’ ಎಂದು ಎನ್‌ಆರ್‌ಎಐ ಕಾರ್ಯದರ್ಶಿ ರಾಜೀವ್ ಭಾಟಿಯ ಮತ್ತು ಪ್ರಧಾನ ಕಾರ್ಯದರ್ಶಿ ಡಿ.ವಿ. ಸೀತಾ ರಾಮ ರಾವ್ ಹೇಳಿದ್ದಾರೆ.
ಶೂಟಿಂಗ್ ಸ್ಪರ್ಧೆಯನ್ನು 2022ರ ಕಾಮನ್ವೆಲ್ತ್ ಗೇಮ್ಸ್‌ನಿಂದ ಕೈಬಿಟ್ಟ ಹಿನ್ನೆಲೆಯಲ್ಲಿ ಇಂಗ್ಲೆಂಡಿನಲ್ಲಿ ನಡೆಯಲಿರುವ ಗೇಮ್ಸ್ ಕೂಟವನ್ನು ಬಹಿಷ್ಕರಿಸುವಂತೆ ಐಒಎ ಅಧ್ಯಕ್ಷ ನರೀಂದರ್ ಬಾತ್ರ ಅವರು ಯುವಜನ ಮತ್ತು ಕ್ರೀಡಾ ಸಚಿವ ಕಿರಣ್ ರಿಜಿಜು ಅವರಿಗೆ ಪತ್ರ ಬಳಿಕ ಎನ್‌ಆರ್‌ಎಐ ಈ ರೀತಿ ಪ್ರತಿಕ್ರಿಯೆ ನೀಡಿದೆ.
ಗೇಮ್ಸ್ ಸಮ್ಮೇಳನಕ್ಕೆ ಬಹಿಷ್ಕಾರ
ಈ ವರ್ಷದ ಸೆ. 3ರಿಂದ 5ರ ವರೆಗೆ ರುವಾಂಡದ ಕಿಗಾಲಿಯಲ್ಲಿ ನಡೆಯಲಿರುವ ಕಾಮನ್ವೆಲ್ತ್ ಗೇಮ್ಸ್‌ನ ಸಮ್ಮೇಳನದಲ್ಲಿ ಭಾರತ ಭಾಗವಹಿಸದಿರಲು ನಿರ್ಧರಿಸಿದೆ ಎಂದು ರಿಜಿಜು ಅವರಿಗೆ ಬರೆದ ಪತ್ರದಲ್ಲಿ ಬಾತ್ರ ಉಲ್ಲೇಖೀಸಿದ್ದಾರೆ.
“ನಮ್ಮದು ರಾಷ್ಟ್ರೀಯ ಕ್ರೀಡಾ ಫೆಡರೇಶನ್, ನಾವು ಐಒಎಯ ಅಂಗವಾಗಿ ಕಾರ್ಯ ನಿರ್ವ ಹಿಸುತ್ತೇವೆ. ಹಾಗಾಗಿ ಐಒಎ ತೆಗೆದುಕೊಳ್ಳುವ ನಿರ್ಧಾರವನ್ನು ನಾವು ಬೆಂಬಲಿಸುತ್ತೇವೆ. ಶೂಟಿಂಗ್‌ನಲ್ಲಿ ನಾವೀಗ ನಂಬರ್ ವನ್ ಸ್ಥಾನದಲ್ಲಿದ್ದೇವೆ. ಭಾರತೀಯ ಶೂಟರ್ ಗಳು ಚೀನ, ಇಂಗ್ಲೆಂಡಿಗಿಂತ ಮಿಗಿ ಲಾದ ನಿರ್ವಹಣೆ ನೀಡುತ್ತಿದ್ದಾರೆ. ಸರಕಾರ ಒಳ್ಳೆಯ ನಿರ್ಧಾರ ತೆಗೆದು ಕೊಳ್ಳಲಿ’ ಎಂದು ಸೀತಾರಾಮ ರಾವ್ ಹೇಳಿದ್ದಾರೆ.
ಗೇಮ್ಸ್ ಬಿಕ್ಕಟ್ಟು: ಭಾರತಕ್ಕೆ ಬಾಗಿದ ಒಕ್ಕೂಟ
2022ರಲ್ಲಿ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯುವ ಕಾಮನ್ವೆಲ್ತ್ ಗೇಮ್ಸ್ ಅನ್ನು ಬಹಿಷ್ಕರಿಸಲು ಭಾರತ ಒಲಿಂಪಿಕ್ಸ್ ಸಂಸ್ಥೆ ಐಒಎ)ಮುಂದಾಗಿದೆ. ಇದ ರಿಂದ ಕಂಗಾಲಾಗಿರುವ ಕಾಮನ್ವೆಲ್ತ್ ಗೇಮ್ಸ್ ಒಕ್ಕೂಟ, ಸದ್ಯದಲ್ಲೇ ಐಒಎ ಪದಾಧಿಕಾರಿಗಳನ್ನು ಭೇಟಿ ಮಾಡಲಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಸಿಜಿಎಫ್
ಮಾಧ್ಯಮ ಮತ್ತು ಸಂವಹನ ವ್ಯವ ಸ್ಥಾಪಕ ಟಾಮ್ ಡೆಗನ್, ಭಾರತ 2022ರ ಕಾಮನ್ವೆಲ್ತ್ ಕೂಟದಲ್ಲಿ ಭಾಗ ವಹಿಸಬೇಕೆನ್ನುವುದು ನಮ್ಮ ಬಲ ವಾದ ಹಾರೈಕೆ. ಆದ್ದರಿಂದ ಐಒಎ ಅಧಿಕಾರಿ ಗಳ ಜತೆ ಮಾತುಕತೆ ನಡೆಸಿ ಸೂಕ್ತ ಪರಿಹಾರ ಕಂಡುಕೊಳ್ಳುತ್ತೇವೆ’ ಎಂದಿದ್ದಾರೆ.
ಇದೇ ವೇಳೆ ಸೆಪ್ಟೆಂಬರ್‌ನಲ್ಲಿ ನಡೆ ಯುವ ಸಭೆಯಲ್ಲಿ ಭಾರತ ಭಾಗವಹಿಸ ದಿರುವುದು ನಮಗೆ ಬೇಸರ ತರಿಸಿದೆ. ಮಹತ್ವದ ನಿರ್ಧಾರ ತೆಗೆದುಕೊಳ್ಳುವ ಸಭೆ ಇದಾಗಿರುವುದರಿಂದ ಭಾರತ ಅಲ್ಲಿ ಭಾಗವಹಿಸಬೇಕಾಗುತ್ತದೆ ಎಂದು ಸಿಜಿಎಫ್ ತಿಳಿಸಿದೆ.
“ಉದ್ದೇಶಪೂರ್ವಕವಾಗಿ ರದ್ದು’
ಗೇಮ್ಸ್‌ನಲ್ಲಿ ಶೂಟಿಂಗ್ ರದ್ದಾಗಿರುವ ಕುರಿತು ಐಒಎ ಅಧ್ಯಕ್ಷ ನರೇಂದ್ರ ಬಾತ್ರಾ ಕಿಡಿಕಿಡಿಯಾಗಿದ್ದಾರೆ. ಭಾರತ ಯಾವ ಕ್ರೀಡೆಯಲ್ಲಿ ಬೆಳವಣಿಗೆ ಸಾಧಿಸಿದರೂ ಅದಕ್ಕೆ ಕತ್ತರಿ ಹಾಕುವ ಕೆಲಸ ನಡೆಯು ತ್ತದೆ. ಇನ್ನೇನು ಒಂದು ಕ್ರೀಡೆಯಲ್ಲಿ ಬೆಳವಣಿಗೆ ಸಾಧಿಸಿದೆವು ಎಂದಾಗ, ಒಂದೋ ಆಟವೇ ಇರುವುದಿಲ್ಲ, ಇಲ್ಲ ನಿಯಮಗಳು ಬದಲಾಗಿರುತ್ತದೆ. ನಾವು ಈಗ ಯಾವ ದೇಶದ ವಸಾಹತು ಕೂಡ ಅಲ್ಲ. ಇದು ಜಗತ್ತಿನ ಇತರ ದೇಶಗಳಿಗೆ ಕಠಿನ ಪ್ರಶ್ನೆಗಳನ್ನು ಕೇಳುವ ಸಮಯ ಎಂದು ಬಾತ್ರಾ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Delhi Assembly Election: ದೆಹಲಿ ವಿಧಾನಸಭೆ ಚುನಾವಣೆಗೆ ಇಂದು ದಿನಾಂಕ ನಿಗದಿ
ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು
ಏಕಕಾಲದಲ್ಲಿ ಭಾರತ ಸೇರಿ 3 ದೇಶಗಳಲ್ಲಿ ಕಂಪಿಸಿದ ಭೂಮಿ… ಟಿಬೆಟ್‌ನಲ್ಲಿ 7.1 ತೀವ್ರತೆ ಭೂಕಂಪ
ಆಪರೇಷನ್ ಬಾಂಗ್ಲಾದೇಶಿ; ಅಕ್ರಮ ವಲಸಿಗರ ಪತ್ತೆ ಹಚ್ಚುವ ಕಾರ್ಯಾಚರಣೆ ಚುರುಕು
Bengaluru: ಇಬ್ಬರು ಮಕ್ಕಳಿಗೆ ವಿಷವುಣಿಸಿ ಕೊಂದು ಟೆಕಿ ದಂಪತಿ ಆತ್ಮಹ*ತ್ಯೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.