ಪಂತ್ ಇರುವುದೇ ಹೀಗೆ, ಅಂಜದ ಗಂಡಿನ ಹಾಗೆ
Team Udayavani, Jan 21, 2021, 7:10 AM IST
ಹೊಸದಿಲ್ಲಿ: ಬ್ರಿಸ್ಬೇನ್ ಟೆಸ್ಟ್ ಪಂದ್ಯದ ಹೀರೋ ರಿಷಭ್ ಪಂತ್ ಈಗ ಜಾಗತಿಕ ಮಟ್ಟದ ಕ್ರಿಕೆಟ್ ಫಿಗರ್. ಮುಂದಿನ ಕೆಲವು ವರ್ಷಗಳ ಕಾಲ ಇವರಿಗೆ ಟೆಸ್ಟ್ ಕೀಪಿಂಗ್ ಸ್ಥಾನ ಕಟ್ಟಿಟ್ಟ ಬುಟ್ಟಿ ಎಂದು ಮಾಜಿ ಕೀಪರ್ ಕಿರಣ್ ಮೋರೆ ಸಹಿತ ಬಹುತೇಕ ಮಂದಿ ಅಭಿಪ್ರಾಯಪಡುತ್ತಾರೆ.
ಆದರೆ ಆಸ್ಟ್ರೇಲಿಯ ವಿರುದ್ಧದ ಮೊದಲೆರಡು ಟೆಸ್ಟ್‌ಗಳಲ್ಲಿ ಪಂತ್‌ಗೆ ಜಾಗ ಇರಲಿಲ್ಲ. ಕಾರಣ, ಅವರ ಕೀಪಿಂಗ್ ಬಗ್ಗೆ ಯಾರಿಗೂ ಸಮಾಧಾನ ಇರಲಿಲ್ಲ. ಎಲ್ಲ ಕೀಪರ್‌ಗಳನ್ನೂ ಧೋನಿ ಮಟ್ಟಕ್ಕೆ ಹೋಲಿಸಿ ನೋಡುವುದರಿಂದ ಇಲ್ಲಿ ಇಂಥದೊಂದು ಅಸಮಾಧಾನ ಸಹಜ. ಆದರೆ ಸಾಹಾ ಗಾಯಾಳಾದ ಕಾರಣ ಪಂತ್ ಬದಲಿ ಕೀಪರ್ ಆಗಿ ಅವಕಾಶ ಪಡೆಯುವುದು ಅನಿವಾರ್ಯವಾಗಿತ್ತು.
ಸೆಕೆಂಡ್ ಇನ್ನಿಂಗ್ಸ್ ಹೀರೋ :
ತುಸು ರ್ಯಾಶ್ ಶೈಲಿ, ಸೀರಿಯಸ್‌ನೆಸ್ ಕಡಿಮೆ, ಹುಡುಗಾಟ ಜಾಸ್ತಿ, ಯಾರ ಸಲಹೆಯನ್ನೂ ಕೇಳುವವರಲ್ಲ ಎಂಬುದು ಪಂತ್ ಮೇಲಿರುವ ಆರೋಪಗಳು. ಉಳಿದವರು ಹೇಗೇ ಆಡಲಿ, ತಮ್ಮ ಬಿರುಸಿನ ಶೈಲಿಯಿಂದ ಅವರು ಹಿಂದೆ ಸರಿಯುವವರಲ್ಲ. ಅವರೊಂಥರ ಅಂಜದ ಗಂಡಿನ ಹಾಗೆ! ಪರಿಸ್ಥಿತಿ ಹೇಗೇ ಇದ್ದರೂ ಮುನ್ನುಗ್ಗಿ ಬಾರಿಸಲು ಹಿಂಜರಿಯುವುದಿಲ್ಲ. ರಿಷಭ್ ಪಂತ್ ಹೀಗಿರುವುದರಿಂದಲೇ ಬ್ರಿಸ್ಬೇನ್ ಭಾರತಕ್ಕೆ ಒಲಿಯಿತು ಎಂಬುದನ್ನು ಮರೆಯುವಂತಿಲ್ಲ. ಬಹುಶಃ ಸಿಡ್ನಿಯಲ್ಲಿ ಅವರು ಶತಕದ ಗಡಿಯಲ್ಲಿ ಔಟಾಗದೆ ಹೋಗಿದ್ದರೆ ಭಾರತ ಅಲ್ಲಿಯೂ ಗೆಲುವಿನ ಬಾವುಟ ಹಾರಿಸುತ್ತಿತ್ತು.
ಪಂತ್ ಹೆಚ್ಚುಗಾರಿಕೆಯೆಂದರೆ “ಸೆಕೆಂಡ್ ಇನ್ನಿಂಗ್ಸ್ ಹೀರೋ’ ಎನ್ನುವುದು. ವಿಶ್ವ ಕ್ರಿಕೆಟಿನ ಬಹುತೇಕ ಬ್ಯಾಟ್ಸ್‌ಮನ್ ದಾಖಲೆಗಳನ್ನು ಗಮನಿಸಿ, ಅವು ಕಡಿಮೆ ಒತ್ತಡವನ್ನು ಹೊಂದಿರುವ ಪ್ರಥಮ ಇನ್ನಿಂಗ್ಸ್‌ನಲ್ಲೇ ಬಂದಿವೆ. ಆದರೆ ರಿಷಭ್ ಪಂತ್ ಅವರ ಬಹುತೇಕ ದೊಡ್ಡ ಇನ್ನಿಂಗ್ಸ್‌ಗಳು ದಾಖಲಾದದ್ದು ದ್ವಿತೀಯ ಅಥವಾ ಪಂದ್ಯದ 4ನೇ ಇನ್ನಿಂಗ್ಸ್
ನಲ್ಲಿ ಎಂಬುದು ಉಲ್ಲೇಖನೀಯ. ಅದು ಓವಲ್ ಶತಕವಾಗಿರಬಹುದು (114), ವೆಸ್ಟ್ ಇಂಡೀಸ್ ಎದುರಿನ ಹೈದರಾಬಾದ್ ಪಂದ್ಯದ 92 ರನ್ ಸಾಹಸವಾಗಿರಬಹುದು, ಮೊನ್ನೆ ಸಿಡ್ನಿಯಲ್ಲಿ 97 ರನ್ ಸಿಡಿಸಿದ್ದು, ಇದೀಗ ಬ್ರಿಸ್ಬೇನ್‌ನಲ್ಲಿ ಅಜೇಯ 89 ರನ್ ಬಾರಿಸಿದ್ದೆಲ್ಲ ಇದಕ್ಕೆ ಅತ್ಯುತ್ತಮ ನಿದರ್ಶನಗಳು.
ಕೀಪಿಂಗ್ ಸುಧಾರಣೆ ಅಗತ್ಯ :
ಕೀಪಿಂಗ್‌ನಲ್ಲಿ ಸುಧಾರಣೆ ಮಾಡಿಕೊಂಡರೆ ರಿಷಭ್ ಪಂತ್ ಅವರ ಭವಿಷ್ಯ ಉಜ್ವಲ. ಈ ಕೀಪಿಂಗ್ ಪ್ರಗತಿಯ ಕೆಲಸವನ್ನು ಅವರಾಗಿಯೇ ಮಾಡಬೇಕು. ಏಕೆಂದರೆ, ಪಂತ್ ಬೇರೆಯವನರ ಸಲಹೆಗಳನ್ನು ಹೀಗೆ ಕೇಳಿ ಹಾಗೆ ಬಿಡುವ ಸ್ವಭಾವದವರು. ಮಾಜಿ ಕ್ರಿಕೆಟಿಗ ಅಜಯ್ ಜಡೇಜ ನೀಡಿದ ಉದಾಹರಣೆ ಇಲ್ಲಿ ಪ್ರಸ್ತುತವೆನಿಸುತ್ತದೆ.
4 ವರ್ಷಗಳ ಹಿಂದಿನ ಘಟನೆ :
ಅಂದು ಪಂತ್ ಅವರನ್ನು ರಣಜಿ ತಂಡದಿಂದ ಕೈಬಿಡಲಾಗಿತ್ತು. ಆದರೇನಂತೆ, ನೀನು ಅಭ್ಯಾಸಕ್ಕೆ ಬರಬಹುದು ಎಂದು ಜಡೇಜ ಕರೆದರಂತೆ. ಆಗ ರಿಷಭ್ ಪಂತ್ , “ಅಗತ್ಯ ಬಿದ್ದರೆ ಅವರೇ ನನಗೆ ಕರೆ ಮಾಡಿ ಮನೆಯಿಂದ ಕರೆಸಿಕೊಳ್ಳುತ್ತಾರೆ’ ಎಂದು ಜವಾಬಿತ್ತರಂತೆ!
ಬ್ರಿಸ್ಬೇನ್ ಅಂತಿಮ ದಿನದಾಟದ ವೇಳೆಯೂ ಅಷ್ಟೇ, ಗಡಿಬಿಡಿ ಮಾಡದೇ ಎಚ್ಚರಿಕೆಯಿಂದ ಆಡು ಎಂದು ರಿಷಭ್ ಪಂತ್‌ಗೆ ಸೂಚಿಸಲಾಗಿತ್ತು. ಆದರೆ ಪಂತ್ ಇದನ್ನು ಕಿವಿಗೇ ಹಾಕಿಕೊಳ್ಳಲಿಲ್ಲ. ಅವರದೇ ಶೈಲಿಯಲ್ಲಿ ಬೀಸತೊಡಗಿದರು. ರಿಷಭ್ ಪಂತ್ ಸ್ವಲ್ಪವೂ ಬದಲಾಗಿರಲಿಲ್ಲ. ಆದರೆ ಅವರು ಪಂದ್ಯದ ಫಲಿತಾಂಶವನ್ನೇ ಬದಲಿಸಿ ಬಿಟ್ಟರು!
ಮೊದಲು ರಾಜಸ್ಥಾನ್ ಕ್ರಿಕೆಟಿಗ :
ಪಂತ್ ಹುಟ್ಟಿದ್ದು ಹರಿದ್ವಾರದಲ್ಲಿ. ದಿಲ್ಲಿ ಕ್ರಿಕೆಟ್‌ನಲ್ಲಿ ಮೇಲೇರುವ ಮೊದಲು ರಾಜಸ್ಥಾನ್ ಪರ ಸ್ವಲ್ಪಕಾಲ ಆಡಿದ್ದರು. ಇದಕ್ಕೆ ಕೋಚ್ ತಾರಕ್ ಸಿನ್ಹಾ ನೀಡಿದ ಸಲಹೆಯೇ ಕಾರಣ. ಯು-14, ಯು-16 ಕೂಟಗಳಲ್ಲಿ ರಾಜಸ್ಥಾನ್ ಪರ ಆಟ. ಆದರೆ “ಹೊರಗಿನವ’ ಎಂಬ ಕಾರಣಕ್ಕೆ ಇವರನ್ನು ನಿರ್ಲಕ್ಷಿಸಲಾಯಿತು. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ದಿಲ್ಲಿಯನ್ನು ಪ್ರತಿನಿಧಿಸಲಾರಂಭಿಸಿದರು. 2016ರ ಐಸಿಸಿ ಅಂಡರ್-19 ವಿಶ್ವಕಪ್ ಮೂಲಕ ಭಾರತ ತಂಡಕ್ಕೆ ಲಗ್ಗೆ ಇಟ್ಟರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
INDvAUS: ಯುವ ಆಟಗಾರನ ಕೆಣಕಿ ತಪ್ಪು ಮಾಡಿದರೆ ಕೊಹ್ಲಿ? ಶಿಕ್ಷೆ ಗ್ಯಾರಂಟಿ!
Pro Kabaddi League-11: ಇಂದು ಎಲಿಮಿನೇಟರ್ ಸ್ಪರ್ಧೆ ಸೋತವರು ಮನೆಗೆ, ಗೆದ್ದವರು ಸೆಮಿಗೆ
ICC : 904 ರೇಟಿಂಗ್ ಅಂಕ ನೂತನ ಎತ್ತರಕ್ಕೆ ಜಸ್‌ಪ್ರೀತ್ ಬುಮ್ರಾ
Vijay Hazare Trophy: ಇಂದು ರಾಜ್ಯಕ್ಕೆ ಪಂಜಾಬ್ ಎದುರಾಳಿ
Boxing Day Test: ನೀಗಲಿ ಭಾರತದ ಬ್ಯಾಟಿಂಗ್ ಬರ; ಇಂದಿನಿಂದ ವರ್ಷಾಂತ್ಯದ ಭಾರತಸ್ಟ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mangaluru: ಪದವು ಜಂಕ್ಷನ್- ಶರ್ಬತ್ ಕಟ್ಟೆ ರಸ್ತೆಗೆ ಅಗತ್ಯವಿದೆ ಫುಟ್‌ಪಾತ್
Padil: ಡಿಸಿ ಕಚೇರಿ ಸಂಕೀರ್ಣಕ್ಕೆ ಚಿನ್ನದ ಬಣ್ಣದ ರಾಷ್ಟ್ರ ಲಾಂಛನ
Uppunda: ಪಾಳು ಕೆರೆ ಈಗ ಈಜುಕೊಳ!; ಚೌಂಡಿ ಕೆರೆಗೆ ಊರಿನ ಯುವಕರಿಂದ ಕಾಯಕಲ್ಪ
Bajpe: ತಂಗುದಾಣ ತೆರವು, ಪ್ರಯಾಣಿಕರು ಅನಾಥ!
Perfect: ಎಡ್ ಶಿರನ್ ಹಾಡಿನಿಂದ ರಾಷ್ಟ್ರೀಯ ಸೆನ್ಸೇಶನ್ ಆದ ಉಡುಪಿಯ ಹುಡುಗ | Video
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.