ಉದ್ಘಾಟನೆಗೆ ತ್ರಿ ಸ್ಟಾರ್
Team Udayavani, Jun 12, 2018, 6:00 AM IST
ಆತಿಥೇಯ ರಶ್ಯ ಮತ್ತು ಸೌದಿ ಅರೇಬಿಯಾ ಫಿಫಾ ವಿಶ್ವಕಪ್ ಕೂಟದ ಮೊದಲ ಪಂದ್ಯವಾಡುವ ಮುನ್ನ ಸಂಪ್ರದಾಯದಂತೆ ಉದ್ಘಾಟನಾ ಸಮಾರಂಭ ನಡೆಯಲಿದೆ. “ಲುಝಿ°ಕಿ ಸ್ಟೇಡಿಯಂ’ನಲ್ಲಿ ನಡೆಯುವ ಈ ಸಮಾರಂಭದಲ್ಲಿ ಮೂವರು ಖ್ಯಾತ ತಾರೆಯರು ಮುಖ್ಯ ಆಕರ್ಷಣೆಯಾಗಿರುತ್ತಾರೆ.
ಇವರೆಂದರೆ ಗ್ಲೋಬಲ್ ಮ್ಯೂಸಿಕ್ ಐಕಾನ್ ಎಂದೇ ಗುರುತಿಸಲ್ಪಡುವ ರಾಬ್ಬಿ ವಿಲಿಯಮ್ಸ್, ರಶ್ಯದ ಖ್ಯಾತ ಸೊಪ್ರಾನೊ ಗಾಯಕಿ ಐಡಾ ಗರಿಫುಲ್ಲಿನಾ ಮತ್ತು ಬ್ರಝಿಲ್‌ನ ಸೂಪರ್‌ಸ್ಟಾರ್ ರೊನಾಲ್ಡೊ.
“ರಶ್ಯದಲ್ಲಿ ಇಂಥದೊಂದು ಜಾಗತಿಕ ಮಟ್ಟದ ಕಾರ್ಯಕ್ರಮ ನೀಡುವುದನ್ನು ಯೋಚಿಸಿಯೇ ರೋಮಾಂಚನವಾಗುತ್ತಿದೆ. 80 ಸಾವಿರದಷ್ಟು ಫುಟ್‌ಬಾಲ್ ಅಭಿಮಾನಿಗಳು ನೆರೆಯುವ ಬೃಹತ್ ಸ್ಟೇಡಿಯಂನಲ್ಲಿ ಫಿಫಾ ವಿಶ್ವಕಪ್ ಪಂದ್ಯಾವಳಿಗಾಗಿ ಕಾರ್ಯಕ್ರಮ ನೀಡುವುದೊಂದು ಕನಸಿನ ಅನುಭವ. ನೀವು ಬಹಳ ಮೊದಲೇ ಟಿವಿ ಸೆಟ್ ಆನ್ ಮಾಡಿಕೊಂಡು ಈ ಮರೆಯಲಾಗದ ಕಾರ್ಯಕ್ರಮಕ್ಕೆ ಸಜ್ಜಾಗಿರಿ’ ಎಂದು ರಾಬ್ಬಿ ವಿಲಿಯಮ್ಸ್ ಕೇಳಿಕೊಂಡಿದ್ದಾರೆ.
“ನನಗೆ ಇದನ್ನು ಕಲ್ಪಿಸಿಕೊಳ್ಳಲಿಕ್ಕೂ ಆಗದು. ನನ್ನ ದೇಶದಲ್ಲಿ ನಡೆಯುವ ಇಂಥದೊಂದು ಬೃಹತ್ ಕಾರ್ಯಕ್ರಮದಲ್ಲಿ ನಾನೂ ಭಾಗಿಯಾಗುತ್ತಿದ್ದೇನೆ ಎಂಬುದನ್ನು ನಂಬಲಾಗುತ್ತಿಲ್ಲ’ ಎಂದವರು ಗಾಯಕಿ ಗರಿಫುಲ್ಲಿನಾ.
ಈ ಬಾರಿಯ ವಿಶ್ವಕಪ್ ಉದ್ಘಾಟನಾ ಕಾರ್ಯಕ್ರಮ ಕೇವಲ ಅರ್ಧ ಗಂಟೆ ಕಾಲ ನಡೆಯಲಿದ್ದು, ಸಂಗೀತ ವೈಭವಕ್ಕೆ ಪ್ರಮುಖ ಆದ್ಯತೆ ನೀಡಲಾಗಿದೆ. ರಶ್ಯದ “ಚಾನೆಲ್ ಒನ್’ ಈ ಕಾರ್ಯಕ್ರಮವನ್ನು ನಡೆಸಿಕೊಡಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
C.T. Ravi; ಅವಾಚ್ಯ ಶಬ್ದಗಳಿಂದ ನಿಂದಿಸಿದ ದಾಖಲೆ ಇಲ್ಲ: ಮಹತ್ವ ಪಡೆದ ಸಭಾಪತಿ ಹೇಳಿಕೆ
TuluMovie; ತೆರೆಗೆ ಬರಲು ಸಿದ್ದವಾಯ್ತು ಮಿಡಲ್ ಕ್ಲಾಸ್ ಫ್ಯಾಮಿಲಿ: ರಿಲೀಸ್ ದಿನಾಂಕ ಬಂತು
BJP ಪೂರ್ವಾಂಚಲಿಗಳನ್ನು ರೋಹಿಂಗ್ಯಾಗಳೆಂದು ಮತಗಳನ್ನು ಅಳಿಸುತ್ತಿದೆ: ಕೇಜ್ರಿವಾಲ್ ಆರೋಪ
Gold & Cash: ಕಾಡಿನ ಬಳಿ ನಿಲ್ಲಿಸಿದ್ದ ಕಾರಿನಲ್ಲಿ 52 ಕೆ.ಜಿ ಚಿನ್ನ, 9 ಕೋಟಿ ನಗದು ಪತ್ತೆ
Aligarh; ಮುಸ್ಲಿಂ ಬಾಹುಳ್ಯದ ಪ್ರದೇಶದಲ್ಲಿ ಮತ್ತೊಂದು ಶಿವ ದೇವಾಲಯ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.