ಅತ್ಯುತ್ತಮ ನಾಯಕರೆಂದರೆ ಹೀಗೆ.. ಗಂಭೀರ್ ನಾಯಕತ್ವವನ್ನು ನೆನೆದ ಉತ್ತಪ್ಪ
Team Udayavani, Jun 5, 2020, 9:36 AM IST
ಬೆಂಗಳೂರು: ಕನ್ನಡಿಗ ರಾಬಿನ್ ಉತ್ತಪ್ಪ ಐಪಿಎಲ್ ನಲ್ಲಿ ಸಫಲತೆ ಕಂಡ ಕೆಲವು ಆಟಗಾರರಲ್ಲಿ ಓರ್ವ. ಎರಡು ಬಾರಿ ಐಪಿಎಲ್ ವಿಜೇತ ತಂಡದ ಸದಸ್ಯನಾಗಿದ್ದ ಉತ್ತಪ್ಪ ತಮ್ಮ ಐಪಿಎಲ್ ಪಯಣದ ಬಗ್ಗೆ ಮೆಲುಕು ಹಾಕಿದ್ದಾರೆ.
ಇದುವರೆಗೆ ನಾಲ್ಕು ತಂಡಗಳಲ್ಲಿ ಆಡಿ, ಮುಂದಿನ ಆವೃತ್ತಿಗೆ ರಾಜಸ್ಥಾನ ರಾಯಲ್ಸ್ ಪಾಲಾಗಿರುವ ಉತ್ತಪ್ಪ ಹೆಚ್ಚು ಸಫಲತೆ ಕಂಡಿದ್ದು ಕೋಲ್ಕತ್ತಾ ನೈಟ್ ರೈಡರ್ಸ್ ತಂಡದಲ್ಲಿ. ಗೌತಮ್ ಗಂಭೀರ್ ನಾಯಕತ್ವದಲ್ಲಿ ವಿಕೆಟ್ ಕೀಪರ್ ಬ್ಯಾಟ್ಸಮನ್ ಆಗಿ ಹಲವು ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡಿದ್ದ ರಾಬಿನ್, ಗಂಭೀರ್ ನಾಯಕತ್ವದ ಬಗ್ಗ ಮಾತನಾಡಿದ್ದಾರೆ.
ಗೌತಮ್ ಗಂಭೀರ್ ನ ನಾಯಕತ್ವದ ಒಂದು ಅತ್ಯುತ್ತಮ ವಿಚಾರವೆಂದರೆ ಆತ ಯಾರ ಆಟದಲ್ಲೂ ಮಧ್ಯಪ್ರವೇಶ ಮಾಡುತ್ತಿರಲಿಲ್ಲ. ನಮ್ಮ ಅಭಿಪ್ರಾಯಗಳನ್ನು ಹೇಳಲು ಅವಕಾಶ ಕೊಡುತ್ತಿದ್ದರು. ನಮಗೊಂದು ಸುರಕ್ಷಿತಾ ಭಾವನೆ ಇತ್ತು. ಬಹುಶಃ ಅತ್ಯುತ್ತಮ ನಾಯಕರು ಇದನ್ನೇ ಮಾಡುತ್ತಾರೆ ಎಂದು ಉತ್ತಮ ಅಭಿಪ್ರಾಯ ಪಟ್ಟಿದ್ದಾರೆ.
ಸ್ಟಾರ್ ಸ್ಪೋರ್ಟ್ಸ್ ನ ಕ್ರಿಕೆಟ್ ಕನೆಕ್ಟೆಡ್ ಶೋ ನಲ್ಲಿ ಮಾತನಾಡಿದ ಉತ್ತಪ್ಪ, ಐಪಿಎಲ್ ನಂತಹ ದೊಡ್ಡ ಕೂಟಗಳನ್ನು ಗೆಲ್ಲಬೇಕಾದರೆ ಅತ್ಯುತ್ತಮ ನಾಯಕರು ತನ್ನ ಆಟಗಾರರಿಗೆ ಅವಕಾಶ ನೀಡುತ್ತಾರೆ, ಅವರಿಗೆ ಸ್ವಾತಂತ್ರ್ಯ ನೀಡುತ್ತಾರೆ ಎಂದಿದ್ದಾರೆ.
177 ಐಪಿಎಲ್ ಪಂದ್ಯಗಳನ್ನು ಆಡಿರುವ ಉತ್ತಪ್ಪ, ನಾಲ್ಕು ಸಾವಿರಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. 2008ರಲ್ಲಿ ಮುಂಬೈ ಇಂಡಿಯನ್ಸ್ ತಂಡದಲ್ಲಿ ಐಪಿಎಲ್ ಪಯಣ ಆರಂಭಿಸಿದ ಉತ್ತಪ್ಪ ಮುಂದಿನ ಎರಡು ಆವೃತ್ತಿಗಳನ್ನು ಆರ್ ಸಿಬಿ ತಂಡದಲ್ಲಿ ಆಡಿದ್ದರು. 2011ರಿಂದ 2013ರ ವರೆಗೆ ಪುಣೆ ವಾರಿಯರ್ಸ್ ಪರವಾಡಿದ್ದ ಉತ್ತಪ್ಪ 2014ರಿಂದ 2019ರವರೆಗೆ ಕೆಕಾರ್ ಪರವಾಗಿ ಆಡಿದ್ದರು. ಸದ್ಯ ರಾಜಸ್ಥಾನ ರಾಯಲ್ಸ್ ತಂಡಕ್ಕೆ ಮಾರಾಟವಾಗಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.