ರೋಜರ್ ಕಪ್ ಟೆನಿಸ್: ರಫೆಲ್ ನಡಾಲ್, ಬಿಯಾಂಕಾ ಚಾಂಪಿಯನ್ಸ್
ಡ್ಯಾನಿಲ್ ಮೆಡ್ವಡೇವ್‌ಗೆ 3-6, 0-6 ಆಘಾತ ; ಬೆನ್ನಿನ ಸೆಳೆತದಿಂದ ಪಂದ್ಯ ತ್ಯಜಿಸಿದ ಸೆರೆನಾ ವಿಲಿಯಮ್ಸ್
Team Udayavani, Aug 13, 2019, 5:55 AM IST
ಮಾಂಟ್ರಿಯಲ್/ಟೊರಂಟೊ: ರಶ್ಯದ ಡ್ಯಾನಿಲ್ ಮೆಡ್ವಡೇವ್ ಅವರನ್ನು ನೇರ ಸೆಟ್‌ಗಳಿಂದ ಉರುಳಿಸಿದ ರಫೆಲ್ ನಡಾಲ್ ಮಾಂಟ್ರಿಯಲ್‌ನಲ್ಲಿ ನಡೆದ “ರೋಜರ್ ಕಪ್’ ಟೆನಿಸ್ ಕೂಟದ ಪ್ರಶಸ್ತಿ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
6-3, 6-0 ಸೆಟ್‌ಗಳಿಂದ ಜಯಭೇರಿ ಬಾರಿಸಿದ ನಡಾಲ್ ತನ್ನ “ಮಾಸ್ಟರ್ 1000′ ಪ್ರಶಸ್ತಿ ಗೆಲುವಿನ ದಾಖಲೆಯನ್ನು 35ಕ್ಕೆ ಏರಿಸಿದರು. ಇದು ವಿಶ್ವ ನಂ.1 ನೊವಾಕ್ ಜೊಕೋವಿಕ್ ಸಾಧನೆಗಿಂತ ಎರಡು ಹೆಚ್ಚು. ಜೊಕೋವಿಕ್ 33 ಬಾರಿ ಮಾಸ್ಟರ್ ಪ್ರಶಸ್ತಿ ಜಯಿಸಿದ್ದಾರೆ. ನಡಾಲ್ ಮಾಸ್ಟರ್ ಕೂಟದ ಪ್ರಶಸ್ತಿಯನ್ನು ಸತತ 2ನೇ ಬಾರಿ ಉಳಿಸಿಕೊಂಡಿರುವುದು ಇದೇ ಮೊದಲ ಸಲವಾಗಿದೆ.
ಉತ್ತಮ ನಿರ್ವಹಣೆಯ ಮೂಲಕ ಪಂದ್ಯ ಆರಂಭಿಸುವುದು ಅತೀ ಮುಖ್ಯ ಎಂದು 18 ಬಾರಿಯ ಗ್ರ್ಯಾನ್‌ಸ್ಲಾಮ್ ವಿಜೇತ ನಡಾಲ್ ಹೇಳಿದರು.
“ಅವರು ಅತ್ಯುತ್ತಮವಾಗಿ ಆಡುತ್ತಿದ್ದಾರೆ. ಕಳೆದ ವಾರ ಬಹಳಷ್ಟು ಪಂದ್ಯಗಳನ್ನು ಆಡಿದ್ದರು’ ಎಂದು ಎದುರಾಳಿ ಮೆಡ್ವಡೇವ್ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು. ಮೆಡ್ವಡೇವ್ ಕಳೆದ ವಾರ ವಾಷಿಂಗ್ಟನ್‌ನ ಕೂಟದ ಫೈನಲ್‌ನಲ್ಲಿ ನಿಕ್ ಕಿರ್ಗಿಯೋಸ್‌ಗೆ ಶರಣಾಗಿದ್ದರು.
ಯುಎಸ್ ಓಪನ್‌ಗೆ ಪೂರ್ವಭಾವಿಯಾಗಿ ತನ್ನ ಸಿದ್ಧತೆ ಆರಂಭಿಸಿದ ಬಳಿಕ ನಡಾಲ್ ಕೇವಲ 3 ಹಾರ್ಡ್‌ಕೋರ್ಟ್ ಪಂದ್ಯಗಳನ್ನು ಆಡಿದ್ದರು. ಇಲ್ಲಿ ಸೆಮಿಫೈನಲ್‌ನಲ್ಲಿ ಅವರಿಗೆ ವಾಕ್ ಓವರ್ ಲಭಿಸಿತ್ತು.
ತವರಿನ ಸಾಧಕಿ ಆ್ಯಂಡ್ರಿಸ್ಕಾ ಬಿಯಾಂಕಾ
ಬೆನ್ನಿನ ಸೆಳೆತದಿಂದಾಗಿ ಸೆರೆನಾ ವಿಲಿಯಮ್ಸ್ ಡಬ್ಲ್ಯುಟಿಎ ಟೊರಂಟೊ ಟೆನಿಸ್ ಕೂಟದ ಫೈನಲ್‌ನಲ್ಲಿ ಕೇವಲ 4 ಗೇಮ್ ಆಡಿದ ಬಳಿಕ ಪಂದ್ಯ ತ್ಯಜಿಸಬೇಕಾಯಿತು. ಇದರಿಂದ ತವರಿನ ಆ್ಯಂಡ್ರಿಸ್ಕಾ ಬಿಯಾಂಕಾ ಮೊದಲ ಬಾರಿಗೆ ಪ್ರಶಸ್ತಿಯನ್ನೆತ್ತಿದ ಹೆಗ್ಗಳಿಕೆಗೆ ಪಾತ್ರರಾದರು.
ಫೈನಲ್ ಹೋರಾಟದಲ್ಲಿ 1-3 ಹಿನ್ನೆಡೆಯಲ್ಲಿದ್ದಾಗ ಸೆರೆನಾ ವೈದ್ಯಕೀಯ ಟೈಮ್‌ಔಟ್ ಪಡೆದುಕೊಂಡರು. ಆದರೆ ಒಂದು ನಿಮಿಷದ ಒಳಗಾಗಿ ಅಂಪಾಯರ್ ಸೆರೆನಾ ಪಂದ್ಯ ತ್ಯಜಿಸಿದ್ದಾರೆಂದು ಪ್ರಕಟಿಸಿದರು. ಹೀಗಾಗಿ ಸೆರೆನಾ ಅವರ ಫೈನಲ್ ಎದುರಾಳಿ ತವರಿನ 19ರ ಹರೆಯದ ಬಿಯಾಂಕಾ ಆ್ಯಂಡ್ರಿಸ್ಕಾ ಪ್ರಶಸ್ತಿ ಗೆದ್ದರು. ಇದು ಆ್ಯಂಡ್ರಿಸ್ಕಾ ಅವರ ವರ್ಷದ 2ನೇ ಪ್ರಶಸ್ತಿಯಾಗಿದೆ.
ನೋವಿನಿಂದಾಗಿ ಪೂರ್ತಿ ಫೈನಲ್ ಆಡುವುದು ಕಷ್ಟವೆಂದು ತಿಳಿದಿತ್ತು ಎಂದು ಪಂದ್ಯದ ಬಳಿಕ ಸೆರೆನಾ ನುಡಿದಿದ್ದಾರೆ.ಪಂದ್ಯ ನಿಂತ ಬಳಿಕ ಸೆರೆನಾ ಹತ್ತಿರ ತೆರಳಿದ ಆ್ಯಂಡ್ರಿಸ್ಕಾ, ಅವರನ್ನು ಆಲಂಗಿಸಿಕೊಂಡು ಭರವಸೆಯ ಮಾತು ಗಳನ್ನಾಡಿದರು. ಈ ವೇಳೆ ಸೆರೆನಾ ದುಃಖ ತಡೆಯಲಾಗದೇ ಕಣ್ಣೀರಿಟ್ಟರು. “ಕ್ಷಮಿಸಿ… ನನ್ನಿಂದ ಇವತ್ತು ಆಡಲು ಸಾಧ್ಯವಾಗಲಿಲ್ಲ’ ಎಂದು ಪ್ರೇಕ್ಷಕರತ್ತ ನೋಡುತ್ತ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
R. B. Timmapur: ಮದ್ಯದಂಗಡಿ ಮಂಜೂರಿಗೆ ಲಂಚ ಕೇಳಿದ್ದ ಇಬ್ಬರ ಅಮಾನತು
8 ಮಸೂದೆ ಮಂಡನೆಗೆ ಸಂಪುಟ ಒಪ್ಪಿಗೆ; ವಿಧಾನಮಂಡಲದ ಅಧಿವೇಶನದಲ್ಲಿ ಮಂಡನೆ
Elephant: ಬಂಡೀಪುರದಲ್ಲಿ ಆನೆ ಮೃತದೇಹ ಪತ್ತೆ: ಆಂಥ್ರಾಕ್ಸ್ ಸೋಂಕು ಶಂಕೆ
Ballari District Hospital: ಬಾಣಂತಿಯರ ಸಾವಿಗೆ ವೈದ್ಯರಲ್ಲ, ದ್ರಾವಣ ಕಾರಣ’
ನಕ್ಸಲರ ಪತ್ತೆಗೆ ಶಿವಮೊಗ್ಗ ಪೊಲೀಸರು ಸಜ್ಜು : ಎಎನ್‌ಎಫ್ ಮಾದರಿಯಲ್ಲಿ ವಿಶೇಷ ಪೊಲೀಸ್ ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.