ರೋಜರ್ ಕಪ್ ಟೆನಿಸ್: ಹಾಲೆಪ್-ಸ್ಲೋನ್ಸ್ ಸ್ಟೀಫನ್ಸ್ ಸೆಣಸಾಟ
Team Udayavani, Aug 13, 2018, 6:00 AM IST
ಮಾಂಟ್ರಿಯಲ್: ವಿಶ್ವದ ನಂಬರ್ ವನ್ ಸಿಮೋನಾ ಹಾಲೆಪ್ ರೋಜರ್ ಕಪ್ ಟೆನಿಸ್ ಕೂಟದ ಪ್ರಶಸ್ತಿಗಾಗಿ ಅಮೆರಿಕದ ಸ್ಲೋನ್ ಸ್ಟೀಫನ್ಸ್ ಅವರ ಸವಾಲನ್ನು ಎದುರಿಸಲಿದ್ದು ಇದು ಫ್ರೆಂಚ್ ಓಪನ್ ಫೈನಲ್ ಹೋರಾಟದ ಪುನರಾವರ್ತನೆಯಾಗಲಿದೆ.
ಹಾಲಿ ಯುಎಸ್ ಓಪನ್ ಚಾಂಪಿಯನ್ ಆಗಿದ್ದ ಸ್ಟೀಫನ್ಸ್ ಅವರನ್ನು ರೋಲ್ಯಾಂಡ್ ಗ್ಯಾರೋಸ್‌ನಲ್ಲಿ ಉರುಳಿಸಿದ್ದ ರುಮಾ ನಿಯಾದ ಹಾಲೆಪ್ ಚೊಚ್ಚಲ ಗ್ರ್ಯಾನ್ ಸ್ಲಾಮ್ (ಫ್ರೆಂಚ್ ಓಪನ್) ಕೂಟದ ಪ್ರಶಸ್ತಿ ಗೆದ್ದ ಸಾಧನೆ ಮಾಡಿದ್ದರು. ಇದೀಗ ಸೇಡು ತೀರಿಸಿಕೊಳ್ಳುವ ಅವಕಾಶ ಸ್ಟೀಫನ್ಸ್ ಅವರಿಗೆ ಲಭಿಸಿದೆ.
ಹಾಲೆಪ್ ಈ ಮೊದಲು ನಡೆದ ಸೆಮಿಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯದ 22ರ ಹರೆಯದ ಆ್ಯಶೆÉ ಬಾರ್ಟಿ ಅವರನ್ನು 6-4, 6-1 ಸೆಟ್‌ಗಳಿಂದ ಕೆಡಹಿ ಪ್ರಶಸ್ತಿ ಸುತ್ತಿಗೆ ತಲುಪಿದ್ದರು. ಇದೇ ವೇಳೆ ಸ್ಟೀಫನ್ಸ್ ಅವರು ಹಾಲಿ ಚಾಂಪಿಯನ್ ಎಲಿನಾ ಸ್ವಿಟೋಲಿನಾ ಅವರನ್ನು 6-3, 6-3 ಸೆಟ್‌ಗಳಿಂದ ಸೋಲಿಸಿದ್ದರು. ಐದು ಬಾರಿ ಸ್ವಿಟೋಲಿನಾ ಅವರ ಗೇಮ್ ಬ್ರೇಕ್ ಮಾಡಿದ್ದ ಸ್ಟೀಫನ್ಸ್ ಈ ಕೂಟದಲ್ಲಿ ಒಂದೇ ಒಂದು ಸೆಟ್ ಕಳೆದುಕೊಳ್ಳದೇ ಪ್ರಶಸ್ತಿ ಸುತ್ತಿಗೆ ತಲುಪಿದ್ದಾರೆ.
8 ಬಾರಿ ಮುಖಾಮುಖೀ
ಹಾಲೆಪ್ ಮತ್ತು ಸ್ಟೀಫನ್ಸ್ ಈ ಹಿಂದೆ 8 ಬಾರಿ ಮುಖಾಮುಖೀ ಯಾಗಿದ್ದು ಹಾಲೆಪ್ 6 ಗೆಲುವು 2 ಸೋಲಿನ ದಾಖಲೆ ಹೊಂದಿದ್ದಾರೆ. ಹಾಲೆಪ್ ಕಳೆದ 5 ಪಂದ್ಯಗಳಲ್ಲಿ ಸ್ಟೀಫನ್ಸ್ ವಿರುದ್ಧ ಜಯ ಸಾಧಿಸಿ ಗೆಲುವಿನ ವಿಶ್ವಾಸ ಮೂಡಿಸಿ ದ್ದಾರೆ. ಅವರಿಬ್ಬರು ರಕ್ಷಣಾತ್ಮಕ ಮತ್ತು ವೇಗದ ಆಟಕ್ಕೆ ಹೆಸರುವಾಸಿಯಾಗಿದ್ದಾರೆ. ಈ ಹಿಂದಿನ ಪಂದ್ಯದಲ್ಲಿ ನಾನು ಗೆಲುವಿನ ಸನಿಹಕ್ಕೆ ಬಂದಿದ್ದೆ. ಹಾಗಾಗಿ ಈ ಬಾರಿ ಗೆಲುವಿಗಾಗಿ ಶಕ್ತಿಮೀರಿ ಪ್ರಯತ್ನಿಸಲಿದ್ದೇನೆ ಎಂದು ಸ್ಟೀಫನ್ಸ್ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Australia: ಪರ್ತ್ಗೆ ಆಗಮಿಸಿದ ರೋಹಿತ್ ಶರ್ಮ
Pro Kabaddi League: ಬೆಂಗಾಲ್ ವಾರಿಯರ್ ಮೇಲೆ ಪುಣೇರಿ ಪಲ್ಟಾನ್ ಸವಾರಿ
RCB ತಂಡಕ್ಕೆ ಸೇರಿದ ಫಿಲ್ ಸಾಲ್ಟ್, ಜಿತೇಶ್ ಶರ್ಮ, ಹ್ಯಾಜಲ್ವುಡ್
IPL Auction 2025: ಸೇಲ್ ಆದ – ಆಗದ ಪ್ರಮುಖರು.. 3ನೇ ಸುತ್ತಿನ ಸಂಪೂರ್ಣ ಪಟ್ಟಿ ಇಲ್ಲಿದೆ..
IPL Mega Auction: ಮೂರನೇ ಸೆಟ್ ನ ಆಟಗಾರರ ಹರಾಜು ಮಾಹಿತಿ ಇಲ್ಲಿದೆ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.