ಫೆಡರರ್-ವಾವ್ರಿಂಕ ಮುಖಾಮುಖೀ
Team Udayavani, Mar 20, 2017, 2:57 PM IST
ಇಂಡಿಯನ್ ವೆಲ್ಸ್: ಇಂಡಿಯನ್ ವೆಲ್ಸ್ ಪುರುಷರ ಸಿಂಗಲ್ಸ್ ಫೈನಲ್ನಲ್ಲಿ ಸ್ವಿಸ್ ಟೆನಿಸ್ ತಾರೆಯರಿಬ್ಬರ ಮುಖಾಮುಖೀಗೆ ವೇದಿಕೆ ಸಿದ್ಧಗೊಂಡಿದೆ. ರೋಜರ್ ಫೆಡರರ್ ಮತ್ತು ಸ್ಟಾನಿಸ್ಲಾಸ್ ವಾವ್ರಿಂಕ ಪ್ರಶಸ್ತಿಗಾಗಿ ಹೋರಾಟ ನಡೆಸಲಿದ್ದಾರೆ. ವರ್ಷಾರಂಭದಲ್ಲಿ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿಯೊಂದಿಗೆ 18ನೇ ಗ್ರ್ಯಾನ್ಸ್ಲಾಮ್ ಗೆದ್ದು ಮಿಂಚಿದ ಫೆಡರರ್, ಶನಿವಾರ ರಾತ್ರಿಯ ಸೆಮಿಫೈನಲ್ ಸೆಣಸಾಟದಲ್ಲಿ ಅಮೆರಿಕದ ಜಾಕ್ ಸೋಕ್ ಅವರನ್ನು 6-1, 7-6 (7-4) ಅಂತರದಿಂದ ಹಿಮ್ಮೆಟ್ಟಿಸಿದರು. ಇನ್ನೊಂದು ಸೆಮಿಸೆಣಸಾಟದಲ್ಲಿ ಸ್ಟಾನಿಸ್ಲಾಸ್ ವಾವ್ರಿಂಕ ಸ್ಪೇನಿನ ಪಾಬ್ಲೊ ಕರೆನೊ ಬುಸ್ಟ ಅವರನ್ನು 6-3, 6-2ರಿಂದ ಪರಾಭವಗೊಳಿಸಿದರು.
ವಾವ್ರಿಂಕ ಈ ಕೂಟದ ಕ್ವಾರ್ಟರ್ ಫೈನಲ್ ದಾಟುತ್ತಿರುವುದು ಇದೇ ಮೊದಲು. ಈ ವರ್ಷ ಆಕ್ಲೆಂಡ್ ಮತ್ತು ಡೆಲ್ರೆ ಬೀಚ್ ಟೆನಿಸ್ ಪ್ರಶಸ್ತಿ ಜಯಿಸಿ ಪ್ರಚಂಡ ಫಾರ್ಮ್ನಲ್ಲಿದ್ದ ಜಾಕ್ ಸೋಕ್ ದ್ವಿತೀಯ ಸೆಟ್ನಲ್ಲಿ ಫೆಡರರ್ಗೆ ಸಾಕಷ್ಟು ಬೆವರಿಳಿಸಿದರು. ಇದನ್ನು ಟೈ ಬ್ರೇಕರ್ಗೆ ಕೊಂಡೊಯ್ದರು. ಆದರೆ ಇಲ್ಲಿ ಅವರು ಫೆಡರರ್ ಅನುಭವಕ್ಕೆ ಶರಣಾಗಬೇಕಾಯಿತು. ಫೈನಲ್ ಪಂದ್ಯದ ಕುರಿತು ಪ್ರತಿಕ್ರಿಯಿಸಿದ ವಾವ್ರಿಂಕ, ‘ರೋಜರ್ ಫೆಡರರ್ ಅವರನ್ನು ನಾವೆಲ್ಲ ಬಲ್ಲೆವು. ಹೀಗಾಗಿ ಹೆಚ್ಚೇನನ್ನೂ ಹೇಳಬೇಕಾಗಿಲ್ಲ…’ ಎಂದು ನಗು ಹೊಮ್ಮಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BGT 2024: ಪರ್ತ್ ನಲ್ಲಿ ಪಲ್ಟಿ ಹೊಡೆದ ಆಸೀಸ್: ಬುಮ್ರಾ ಪಡೆಗೆ ಮೊದಲ ಪಂದ್ಯದಲ್ಲಿ ಜಯ
IPL Mega Auction: ಮೊದಲ ದಿನದ ಹರಾಜಿನ ಬಳಿಕ ಎಲ್ಲಾ 10 ತಂಡಗಳು ಹೀಗಿವೆ ನೋಡಿ
IPL Mega Auction: ಮೊದಲ ದಿನದ ಹರಾಜಿನ ಬಳಿಕ ಆರ್ ಸಿಬಿ ತಂಡ ಹೀಗಿದೆ ನೋಡಿ
Singapore: ಇಂದಿನಿಂದ ವಿಶ್ವ ಚೆಸ್: ಗುಕೇಶ್-ಲಿರೆನ್ ಮುಖಾಮುಖಿ
Australia: ಪರ್ತ್ಗೆ ಆಗಮಿಸಿದ ರೋಹಿತ್ ಶರ್ಮ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Dr.Veerendra Heggade: ಡಾ.ಡಿ.ವೀರೇಂದ್ರ ಹಗ್ಗಡೆಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿ
Sambhal Case Follow Up:ಹೊರಗಿನವರಿಗೆ ಸಂಭಾಲ್ ಪ್ರವೇಶಕ್ಕೆ ನಿರ್ಬಂಧ,ಜಲ್ಲಿ ಮಾರಾಟ ನಿಷೇಧ
Kannappa Movie: ವಿಷ್ಣು ಮಂಚು ʼಕಣ್ಣಪ್ಪʼ ರಿಲೀಸ್ಗೆ ಡೇಟ್ ಫಿಕ್ಸ್
BGT 2024: ಪರ್ತ್ ನಲ್ಲಿ ಪಲ್ಟಿ ಹೊಡೆದ ಆಸೀಸ್: ಬುಮ್ರಾ ಪಡೆಗೆ ಮೊದಲ ಪಂದ್ಯದಲ್ಲಿ ಜಯ
IFFI 2024: ಅಜ್ಜನ ಸಿನಿಮಾಗಳು ಡಿಸೆಂಬರ್ ನಲ್ಲಿ ಚಿತ್ರಮಂದಿರದಲ್ಲಿ ಬಿಡುಗಡೆ: ರಣಬೀರ್ ಕಪೂರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.