9ನೇ ಪ್ರಶಸ್ತಿ ನಿರೀಕ್ಷೆಯಲ್ಲಿ ರೋಜರ್ ಫೆಡರರ್
Team Udayavani, Jul 2, 2018, 3:23 PM IST
ಲಂಡನ್: ವಿಶ್ವಕಪ್ ಫುಟ್‌ಬಾಲ್ ನಾಕೌಟ್ ಪಂದ್ಯಗಳು ಕಾವೇರಿಸಿಕೊಳ್ಳುತ್ತಿರುವ ಹಂತದಲ್ಲೇ ಪ್ರತಿಷ್ಠಿತ ವಿಂಬಲ್ಡನ್ ಗ್ರ್ಯಾನ್‌ಸ್ಲಾಮ್ ಪಂದ್ಯಾವಳಿ ಸೋಮವಾರದಿಂದ ಲಂಡನ್‌ನಲ್ಲಿ ಮೊದಲ್ಗೊಳ್ಳಲಿದೆ. ಕ್ರೀಡಾಭಿಮಾನಿಗಳು ತಮ್ಮ ಆಸಕ್ತಿಯನ್ನು ಫುಟ್‌ಬಾಲ್‌ನಿಂದ ಟೆನಿಸ್‌ಗೆ ವರ್ಗಾಯಿಸಿಕೊಳ್ಳುವುದು ಅನುಮಾನ. 4 ವರ್ಷಗಳಿಗೊಮ್ಮೆ ಬರುವ ಕಾಲ್ಚೆಂಡಿನ ಸಮರಕ್ಕೆ ಹೆಚ್ಚಿನ ಆದ್ಯತೆ ನೀಡಿ ಜತೆಯಲ್ಲೇ ರ್ಕೆಟ್ ಸಮರವನ್ನೂ ವೀಕ್ಷಿಸಲು ಸಮಯವನ್ನು ಹೊಂದಾಣಿಕೆ ಮಾಡಿಕೊಳ್ಳುವುದು ಸದ್ಯದ ಅನಿವಾರ್ಯತೆ.
ಅದೇನೇ ಇದ್ದರೂ ಪ್ರತಿಷ್ಠಿತ ವಿಂಬಲ್ಡನ್ ಟೆನಿಸ್ ಪಂದ್ಯಾವಳಿ ಮಾತ್ರ ತನ್ನ ಚಾರ್ಮ್ ಬಿಟ್ಟುಕೊಡದು. ಈ ಬಾರಿಯ ನೆಚ್ಚಿನ ಆಟ ಗಾರರು ಯಾರು, ಪ್ರಶಸ್ತಿ ಯಾರಿಗೆ ಒಲಿದೀತು ಎಂಬ ಕುರಿತು ಈಗಾಗಲೇ ಚರ್ಚೆ ಮೊದಲ್ಗೊಂಡಿದೆ. ಪುರುಷರ ಸಿಂಗಲ್ಸ್‌ನಲ್ಲಿ ರೋಜರ್ ಫೆಡರರ್ 9ನೇ ಸಲ ಪ್ರಶಸ್ತಿ ಎತ್ತಬಲ್ಲರೇ ಎಂಬುದು ಚರ್ಚೆಯ ಮುಖ್ಯ ಸಂಗತಿ.
ಫ್ರೆಡ್ಡಿಗೆ ಅವಕಾಶ ಹೆಚ್ಚು
ಆಗಸ್ಟ್ ತಿಂಗಳಲ್ಲಿ 37ರ ಹರೆಯಕ್ಕೆ ಕಾಲಿಡಲಿರುವ ಸ್ವಿಸ್ ತಾರೆ ರೋಜರ್ ಫೆಡರರ್ ಹಾಲಿ ವಿಂಬಲ್ಡನ್ ಚಾಂಪಿಯನ್. 2017ರಲ್ಲಿ ಕ್ರೊವೇಶಿಯದ ಮರಿನ್ ಸಿಲಿಕ್ ಅವರನ್ನು ಸೋಲಿಸಿ 8ನೇ ಸಲ ಪ್ರಶಸ್ತಿ ಜಯಿಸಿದ್ದರು. ವರ್ಷಾರಂಭದ ಆಸ್ಟ್ರೇಲಿಯನ್ ಓಪನ್ ಜಯದೊಂದಿಗೆ ತಮ್ಮ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿಗಳ ಸಂಖ್ಯೆಯನ್ನು 20ಕ್ಕೆ ಏರಿಸಿಕೊಂಡಿದ್ದರು. ಆದರೆ ಫ್ರೆಂಚ್ ಓಪನ್‌ನಲ್ಲಿ ಆಡಿರಲಿಲ್ಲ. ಆವೆಯಂಗಳದ ನೆಚ್ಚಿನ ಆಟಗಾರ ರಫೆಲ್ ನಡಾಲ್ 11ನೇ ಸಲ ಪ್ಯಾರಿಸ್ ಕಿರೀಟದೊಂದಿಗೆ ಮೆರೆದಿದ್ದರು. ಆದರೆ ಹುಲ್ಲಿನಂಗಳದಲ್ಲಿ ನಡಾಲ್ ಹೆಚ್ಚು ಅಪಾಯಕಾರಿಯಲ್ಲ. ಹೀಗಾಗಿ ಇಲ್ಲಿ ಫೆಡರರ್ ಅವರಿಗೆ ಅವಕಾಶ ಹೆಚ್ಚು. ಜರ್ಮನಿಯ ಗ್ರಾಸ್ ಕೋರ್ಟ್ ಟೂರ್ನಿ ಯಾದ “ಸ್ಟಟ್‌ಗಾರ್ಟ್’ ಪಂದ್ಯಾವಳಿಯಲ್ಲಿ ಪ್ರಶಸ್ತಿ ಜಯಿಸಿದ ಫೆಡರರ್, ಬಳಿಕ ಹಾಲೆ ಟೂರ್ನಿಯ ಫೈನಲಿಗೂ ಲಗ್ಗೆ ಇರಿಸಿದ್ದರು. ಆದರಿಲ್ಲಿ ಬೋರ್ನ ಕೊರಿಕ್‌ಗೆ ಸೋತು ಆಘಾತಕ್ಕೊಳಗಾಗಿದ್ದರು. “ಫೆಡರರ್ ವಿಂಬಲ್ಡನ್ ಪಂದ್ಯಾವಳಿಯ ನೆಚ್ಚಿನ ಆಟಗಾರ. ಅವರು ಕಳೆದ ವರ್ಷದಂತೆ ಆಡಿದರೆ ಸಾಕು, ಪ್ರಶಸ್ತಿ ಉಳಿಸಿಕೊಳ್ಳಬಲ್ಲರು. ನಿಜ, ಅವರು ಈ ವರ್ಷ ಕೆಲವು 3-ಸೆಟ್ ಪಂದ್ಯಗಳಲ್ಲಿ ಸೋತಿದ್ದಾರೆ. ಆದರೆ ವಿಂಬಲ್ಡನ್ ಎಂಬುದು ಸಂಪೂರ್ಣ ಭಿನ್ನ ಪಂದ್ಯಾವಳಿ’ ಎಂದು ಮಾಜಿ ನಂ.1 ಟೆನಿಸಿಗ ಮ್ಯಾಟ್ಸ್ ವಿಲಾಂಡರ್ ಹೇಳಿದ್ದಾರೆ. ಸರ್ಬಿಯಾದ ದುಸಾನ್ ಲಾಜೋವಿಕ್ ವಿರುದ್ಧ ಫೆಡರರ್ ಮೊದಲ ಸುತ್ತಿನ ಪಂದ್ಯ ಆಡಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Flights: ಇನ್ಮುಂದೆ ವಿಮಾನಗಳಲ್ಲಿ 7 ಕೆ.ಜಿ. ಮೀರದ ಕೇವಲ 1 ಬ್ಯಾಗ್‌ಗಷ್ಟೇ ಅವಕಾಶ!
Derogatary Term: ಸಿ.ಟಿ.ರವಿ ಪ್ರಕರಣಗಳು ಸಿಐಡಿ ತನಿಖೆಗೆ
A.B.Vajapayee Birth Century: ಸರಳತೆಯ ಸಾಕಾರಮೂರ್ತಿ ನಮ್ಮ ವಾಜಪೇಯಿ
ಮೇಲ್ಮನೆಗೆ ನಾನೇ ಫೈನಲ್, ನನ್ನ ಹಕ್ಕುಚ್ಯುತಿ ಬಗ್ಗೆ ಕಾನೂನು ತಜ್ಞರ ಜತೆ ಸಮಾಲೋಚಿಸಿ ಕ್ರಮ
ISRO: ಬಾಹ್ಯಾಕಾಶ ಯೋಜನೆಯ ಪ್ರತಿ 1.ರೂ.ಗೂ ಭಾರತಕ್ಕೆ2.52 ರೂ. ಲಾಭ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.