ಏಗಾನ್ ಟೆನಿಸ್ ಚಾಂಪಿಯನ್ಶಿಪ್: ಬೋಪಣ್ಣ, ಪೇಸ್ ಸೆಮಿಫೈನಲ್ಗೆ
Team Udayavani, Jun 23, 2017, 10:33 AM IST
ಲಂಡನ್: ಖ್ಯಾತ ಟೆನಿಸ್ ಆಟಗಾರರಾದ ರೋಹನ್ ಬೋಪಣ್ಣ ಮತ್ತು ಲಿಯಾಂಡರ್ ಪೇಸ್ ಏಗಾನ್ ಟೆನಿಸ್
ಚಾಂಪಿಯನ್ಶಿಪ್ನಲ್ಲಿ ಸೆಮಿಫೈನಲ್ಗೆ ಪ್ರವೇಶಿಸಿದ್ದಾರೆ.
ಗುರುವಾರ ನಡೆದ ಪುರುಷರ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ರೋಹನ್ ಬೋಪಣ್ಣ ಮತ್ತು ಕ್ರೋವೇಷಿಯಾದ ಇವಾನ್ ಡೊಡಿಗ್ ಜೋಡಿ 7-6, 4-6, 10-2 ರಿಂದ ಆಸ್ಟ್ರೇಲಿಯಾದ ಜಾನ್ ಪೀರ್ಸ್ ಮತ್ತು ಫಿನ್ಲಂಡ್ನ ಹೆನ್ರಿ ಕೊಂಟಿನ್ ಜೋಡಿಯ ವಿರುದ್ಧ ಜಯ ಸಾಧಿಸಿದರು. ಮೊದಲ ಸೆಟ್ ಗೆದ್ದ ಬೋಪಣ್ಣ ಜೋಡಿ 2ನೇ ಸೆಟ್ ಕಳೆದುಕೊಂಡಿತ್ತು. ಹೀಗಾಗಿ ಮೂರನೇ ಸೆಟ್ ನಿರ್ಣಾಯಕವಾಗಿತ್ತು. ಈ ಹಂತದಲ್ಲಿ ಉತ್ತಮ ಪ್ರದರ್ಶನ ನೀಡಿದ ಬೋಪಣ್ಣ ಜೋಡಿ 10-2 ಅಂತರದಿಂದ ಜಯ ಸಾಧಿಸಿ ಸೆಮಿಫೈನಲ್ಗೆ ಪ್ರವೇಶಿಸಿತು.
ಪೇಸ್ -ಆದಿಲ್ಗೆ ಜಯ: ಇದಕ್ಕೂ ಮುನ್ನ ನಡೆದ ಪುರುಷ ಡಬಲ್ಸ್ನ ಮತ್ತೂಂದು ಕ್ವಾರ್ಟರ್ಫೈನಲ್ ಪಂದ್ಯದಲ್ಲಿ
ಭಾರತದ ಲಿಯಾಂಡರ್ ಪೇಸ್ ಮತ್ತು ಕೆನಡಾದ ಆದಿಲ್ ಶಮಸದಿನ್ ಜೋಡಿ 7-6, 6-2 ರಿಂದ ನೆರ ಸೆಟ್ನಲ್ಲಿಯೇ
ಚಿಲಿ ಮತ್ತು ಬೆಲರೋಷಿಯಾ ಜೋಡಿ ಹ್ಯಾನ್ಸ್ ಪೊಡ್ಲಿಪಿಂಕ್ ಮತ್ತು ಆ್ಯಂಡ್ರೆ ವಸಿಲವಿಸ್ಕಿ ವಿರುದ್ಧ ಜಯ ಸಾಧಿಸಿ
ಸೆಮಿಫೈನಲ್ ಪ್ರವೇಶಿಸಿದ್ದಾರೆ. ಪಂದ್ಯದ ಆರಂಭದಿಂದ ಭರ್ಜರಿ ಹೋರಾಟ ನೀಡಿದ ಪೇಸ್ ಜೋಡಿ ನೇರ ಸೆಟ್ನಲ್ಲಿಯೇ ಜಯ ಸಾಧಿಸಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
udupi: ಮಗನ ಅರಸುತ್ತಾ ಬಂದ ತಾಯಿ: ಇಬ್ಬರು ಮಕ್ಕಳ ಸಹಿತ ವೃದ್ಧೆಯ ರಕ್ಷಣೆ
Health Department: ಸರಕಾರಿ ಆಸ್ಪತ್ರೆ, ಕೇಂದ್ರಗಳಲ್ಲಿ ಔಷಧ ಕೊರತೆ ಇಲ್ಲ: ಸಚಿವ ದಿನೇಶ್
Mysuru: ಕೋವಿಡ್ ವೇಳೆ ಔಷಧ ಖರೀದಿಯಲ್ಲಿ ನನ್ನ ಪಾತ್ರವಿಲ್ಲ: ಡಾ.ಸಿ.ಎನ್.ಮಂಜುನಾಥ್
Inquiry Report: ಬಿಜೆಪಿಗೆ ’40 ಪರ್ಸೆಂಟ್’ ಕ್ಲೀನ್ಚಿಟ್ ಸಿಕ್ಕಿಲ್ಲ: ಸಚಿವ ಪ್ರಿಯಾಂಕ್
Udupi: ಚಿನ್ನ, ವಜ್ರಾಭರಣ ಕದ್ದು ಹೋಂ ನರ್ಸ್ ಪರಾರಿ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.