ಹೋರಾಡಿ ಸೋತ ಬೋಪಣ್ಣ-ಬಬೋಸ್
Team Udayavani, Jan 29, 2018, 6:10 AM IST
ಮೆಲ್ಬರ್ನ್: ಭಾರತದ ರೋಹನ್ ಬೋಪಣ್ಣ-ಹಂಗೇರಿಯ ಟೈಮಿಯಾ ಬಬೋಸ್ ಜೋಡಿ ಆಸ್ಟ್ರೇಲಿಯನ್ ಓಪನ್ ಮಿಶ್ರ ಡಬಲ್ಸ್‌ನಲ್ಲಿ ವೀರೋಚಿತ ಸೋಲುಂಡು ರನ್ನರ್ ಅಪ್ ಸ್ಥಾನಕ್ಕೆ ತೃಪ್ತರಾದರು.
ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಬೋಪಣ್ಣ ಜೋಡಿ 2-6, 6-4, 11-9 ರಿಂದ ಮೇಟ್ ಪಾವಿಕ್, ಗ್ಯಾಬ್ರಿಯೇಲಾ ದಾಬ್ರೋವ್‌ಸ್ಕಿ ವಿರುದ್ಧ ಸೊತರು. 5ನೇ ಶ್ರೇಯಾಂಕದ ಬೋಪಣ್ಣ-ಬಬೋಸ್ ಮೊದಲ ಸೆಟ್ ಅನ್ನು ಸುಲಭದಲ್ಲೇ ವಶಪಡಿಸಿಕೊಂಡರು. ಆದರೆ ದ್ವಿತೀಯ ಸೆಟ್‌ನಲ್ಲಿ ಸ್ವಲ್ಪದರಲ್ಲೇ ಎಡವಿದರು. ನಿರ್ಣಾಯಕ ಸೆಟ್ ತೀವ್ರ ಪೈಪೋಟಿಯಿಂದ ಸಾಗಿತು. ಯಾರೂ ಗೆಲ್ಲಬಹುದಾದ ಸ್ಥಿತಿ ನಿರ್ಮಾಣಗೊಂಡಿತು. ಇಲ್ಲಿ ಇಂಡೋ-ಹಂಗೇರಿಯನ್ ಜೋಡಿಗೆ ಅದೃಷ್ಟ ಕೈಕೊಟ್ಟಿತು.
ಕಳೆದ ಫ್ರೆಂಚ್ ಓಪನ್ ಪಂದ್ಯಾವಳಿಯಲ್ಲಿ ದಾಬ್ರೋವ್‌ಸ್ಕಿ ಜತೆಗೂಡಿಯೇ ರೋಹನ್ ಬೋಪಣ್ಣ ಮೊದಲ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿ ಜಯಿಸಿದ್ದರು. ಈ ಬಾರಿ ಕೆನಡಿಯನ್ ಆಟಗಾರ್ತಿ ಬೋಪಣ್ಣ ಅವರ ಎದುರಾಳಿಯಾಗಿದ್ದರು. ಗ್ರ್ಯಾಲ್‌ಸ್ಲಾಮ್‌ನಲ್ಲಿ ಬೋಪಣ್ಣನಿಗೆ ಇದು 2ನೇ ರನ್ನರ್ ಅಪ್ ಪ್ರಶಸ್ತಿಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kasaragodu: ಸ್ಲೀಪರ್ ಸೆಲ್ ರಚನೆಗಾಗಿ ಭಾರತಕ್ಕೆ ಬಂದಿದ್ದ ಭಯೋತ್ಪಾದಕ ಶಾಬ್‌ಶೇಖ್
Ayodhya: ರಾಮಮಂದಿರಕ್ಕೆ 1 ವರ್ಷ: ಜ.11ರಿಂದ 3 ದಿನ ಪೂಜೆ
ಸಿ.ಟಿ.ರವಿ ನಕಲಿ ಎನ್‌ಕೌಂಟರ್‌ಗೆ ಸರಕಾರದ ಹುನ್ನಾರ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ
Pope Francis; ಗಾಜಾಪಟ್ಟಿ ಮೇಲೆ ನಡೆದದ್ದು ಯುದ್ಧವಲ್ಲ, ಕ್ರೌರ್ಯ
Horoscope: ಈ ರಾಶಿಯವರಿಗೆ ಧೈರ್ಯ ಮತ್ತು ಸಾಹಸ ಪ್ರವೃತ್ತಿಯಿಂದ ಕಾರ್ಯಸಿದ್ಧಿ ಆಗಲಿದೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.