ಆಸೀಸ್ ಟೆಸ್ಟ್ ಸರಣಿಯಿಂದ ರೋಹಿತ್, ಇಶಾಂತ್ ಶರ್ಮಾ ಔಟ್! ವರದಿ
Team Udayavani, Nov 24, 2020, 4:52 PM IST
ಬೆಂಗಳೂರು: ಗಾಯದ ಸಮಸ್ಯೆಯಿಂದ ಆಸ್ಟ್ರೇಲಿಯಾ ವಿರುದ್ಧದ ನಿಗದಿತ ಓವರ್ ಸರಣಿ ತಪ್ಪಿಸಿಕೊಂಡಿರುವ ರೋಹಿತ್ ಶರ್ಮಾ ಮಹತ್ವದ ಟೆಸ್ಟ್ ಸರಣಿಯಿಂದಲೂ ಹೊರಗುಳಿಯಲಿದ್ದಾರೆ. ಇವರ ಜೊತೆಗೆ ವೇಗಿ ಇಶಾಂತ್ ಶರ್ಮಾ ಕೂಡಾ ಆಸೀಸ್ ಗೆ ಪ್ರಯಾಣ ಬೆಳೆಸುತ್ತಿಲ್ಲ. ಹೀಗೆಂದು ಆಂಗ್ಲ ಮಾಧ್ಯಮ ಮುಂಬೈ ಮಿರರ್ ವರದಿ ಮಾಡಿದೆ.
ರೋಹಿತ್ ಮತ್ತು ಇಶಾಂತ್ ಶರ್ಮಾ ಸದ್ಯ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಫಿಟ್ನೆಟ್ ಟ್ರೈನಿಂಗ್ ಪಡೆದಯುತ್ತಿದ್ದಾರೆ. ಆದರೆ ಇದುವರೆಗೆ ನಿರೀಕ್ಷಿತ ಮಟ್ಟದಲ್ಲಿ ಗುಣಮುಖವಾಗದ ಕಾರಣ ಶರ್ಮಾ ದ್ವಯರು ಆಸೀಸ್ ವಿಮಾನ ಏರುವುದು ಅನುಮಾನ ಎಂದು ಬಿಸಿಸಿಐ ಮೂಲಗಳನ್ನು ಉಲ್ಲೇಖಿಸಿ ಮುಂಬೈ ಮಿರರ್ ವರದಿ ಮಾಡಿದೆ.
ಇದನ್ನೂ ಓದಿ:ಬಿಸಿಸಿಐ: ಅಮಿತ್ ಶಾ, ಗಂಗೂಲಿ ವಿರುದ್ಧ ರಾಮಚಂದ್ರ ಗುಹಾ ಆರೋಪ
ಇವರಿಬ್ಬರೂ ದುಬೈನಲ್ಲಿ ನಡೆದ ಐಪಿಎಲ್ ನಲ್ಲಿ ಗಾಯಗೊಂಡಿದ್ದರು. ಇಶಾಂತ್ ಶರ್ಮಾ ಆರಂಭದಲ್ಲೇ ಗಾಯಾಳಾಗಿ ತಂಡದಿಂದ ಹೊರಬಿದ್ದರೆ, ರೋಹಿತ್ ಟೂರ್ನಿ ಮಧ್ಯೆ ಗಾಯಗೊಂಡಿದ್ದರು. ಕೆಲವು ಪಂದ್ಯಗಳಿಂದ ಹೊರಗುಳಿದಿದ್ದ ರೋಹಿತ್ ಟೂರ್ನಿಯ ಕೊನೆಯಲ್ಲಿ ಮತ್ತೆ ತಂಡವನ್ನು ಮುನ್ನಡೆಸಿದ್ದರು.
ಆಸೀಸ್ ಸರಣಿಗೆ ಆಯ್ಕೆಯಾದ ತಂಡದಿಂದ ಇಬ್ಬರು ಆಟಗಾರರನ್ನು ಕೈಬಿಡಲಾಗಿತ್ತು. ಏಕದಿನ ಮತ್ತು ಟಿ20 ತಂಡಕ್ಕೆ ರೋಹಿತ್ ಬದಲು ಕೆ ಎಲ್ ರಾಹುಲ್ ರನ್ನು ಉಪನಾಯಕರಾಗಿ ಆಯ್ಕೆ ಮಾಡಲಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.