ಐಸಿಸಿ ವಿಶ್ವಕಪ್ ತಂಡದಲ್ಲಿ ರೋಹಿತ್, ಬುಮ್ರಾ
Team Udayavani, Jul 16, 2019, 5:51 AM IST
ಲಂಡನ್: ಹನ್ನೆರಡನೇ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಗೆ ತೆರೆ ಬಿದ್ದಿದೆ. ಇಂಗ್ಲೆಂಡ್ ಮೊದಲ ಸಲ ಚಾಂಪಿಯನ್ ಆಗಿ ಮೂಡಿಬಂದಿದೆ. ಈ ಸಂದರ್ಭದಲ್ಲಿ ಸಂಪ್ರದಾಯದಂತೆ ಐಸಿಸಿ ಶ್ರೇಷ್ಠ ಸಾಧಕರನ್ನು ಒಳಗೊಂಡ ಆಡುವ ಬಳಗವೊಂದನ್ನು ಪ್ರಕಟಿಸಿದೆ. ಇದರಲ್ಲಿ ಭಾರತದ ರೋಹಿತ್ ಶರ್ಮ ಮತ್ತು ಜಸ್‌ಪ್ರೀತ್ ಬುಮ್ರಾ ಸ್ಥಾನ ಸಂಪಾದಿಸಿದ್ದಾರೆ.
ಐಸಿಸಿ ಪ್ಯಾನಲ್ ಆಯ್ದ ಈ ತಂಡದಲ್ಲಿ ನೂತನ ಚಾಂಪಿಯನ್ ಇಂಗ್ಲೆಂಡಿನ ಆಟಗಾರರದೇ ಸಿಂಹಪಾಲು. ಇಲ್ಲಿನ 4 ಮಂದಿ ಆಟಗಾರರಿದ್ದಾರೆ. ರನ್ನರ್ ಅಪ್ ನ್ಯೂಜಿಲ್ಯಾಂಡ್, ಸೆಮಿಫೈನಲಿಸ್ಟ್ ಭಾರತ ಮತ್ತು ಆಸ್ಟ್ರೇಲಿಯದ ತಲಾ ಇಬ್ಬರು ಸ್ಥಾನ ಪಡೆದಿದ್ದಾರೆ. ಉಳಿದೊಬ್ಬ ಆಟಗಾರ ಬಾಂಗ್ಲಾದೇಶದ ಶಕಿಬ್ ಅಲ್ ಹಸನ್. ಆಲ್‌ರೌಂಡರ್ ಆಗಿರುವ ಅವರು ತಂಡದ ಏಕೈಕ ಸ್ಪಿನ್ನರ್ ಎಂಬುದು ವಿಶೇಷ.
ಪಾಕಿಸ್ಥಾನ, ದಕ್ಷಿಣ ಆಫ್ರಿಕಾ, ಶ್ರೀಲಂಕಾ ಮತ್ತು ವೆಸ್ಟ್ ಇಂಡೀಸಿನ ಯಾವುದೇ ಕ್ರಿಕೆಟಿಗರು ಸ್ಥಾನ ಸಂಪಾದಿಸಿಲ್ಲ. ಆರಂಭಿಕನ ಸ್ಥಾನಕ್ಕೆ ಡೇವಿಡ್ ವಾರ್ನರ್ ಬದಲು ಜಾಸನ್ ರಾಯ್ ಅವರನ್ನು ಆರಿಸಿದ್ದೊಂದು ಅಚ್ಚರಿ. ಗಾಯಾಳಾಗಿ ಕೆಲವು ಪಂದ್ಯಗಳಿಂದ ದೂರ ಉಳಿದಿದ್ದ ರಾಯ್ ಒಂದು ಶತಕ, 4 ಅರ್ಧ ಶತಕ ಬಾರಿಸಿ ಮೆರೆದಿದ್ದಾರೆ. ಆದರೆ ವಾರ್ನರ್ 3 ಶತಕ ಸಹಿತ 647 ರನ್ ಬಾರಿಸಿದ್ದಾರೆ.
ಕೀಪರ್ ಆಗಿ ಆಯ್ಕೆಯಾದವರು ಆಸ್ಟ್ರೇಲಿಯದ ಅಲೆಕ್ಸ್ ಕ್ಯಾರಿ. ಸೂಪರ್ ಓವರ್‌ನಲ್ಲಿ ಮಿಂಚಿ, ಒಟ್ಟು 20 ವಿಕೆಟ್ ಕೆಡವಿದ್ದು ಆರ್ಚರ್ ಸಾಧನೆ. ತಂಡದ ಸಾರಥ್ಯ ನ್ಯೂಜಿಲ್ಯಾಂಡಿನ ಕೇನ್ ವಿಲಿಯಮ್ಸನ್ ಪಾಲಾಗಿದೆ.
ಭಾರತದ ರೋಹಿತ್ ಶರ್ಮ 5 ಶತಕಗಳ ವಿಶ್ವದಾಖಲೆ ನಿರ್ಮಿಸಿದರೆ, ಬುಮ್ರಾ ಕೇವಲ 4.41ರ ಸರಾಸರಿಯಲ್ಲಿ 18 ವಿಕೆಟ್ ಕಬಳಿಸಿದ್ದಾರೆ.
ಆಯ್ಕೆ ಸಮಿತಿ ಸದಸ್ಯರು
ಮಾಜಿ ಕ್ರಿಕೆಟಿಗರೂ ಹಾಲಿ ಕಮೆಂಟೇಟರ್ ಆಗಿರುವ ಇಯಾನ್ ಬಿಶಪ್, ಇಯಾನ್ ಸ್ಮಿತ್, ಇಸಾ ಗುಹಾ; ಕ್ರಿಕೆಟ್ ಲೇಖಕ ಲಾರೆನ್ಸ್ ಬೂತ್, ಐಸಿಸಿಯ ಜಿ.ಎಂ. ಕ್ರಿಕೆಟ್ ಜೆಫ್ ಅಲ್ಲಡೈìಸ್ ಆಯ್ಕೆ ಸಮಿತಿ ಸದಸ್ಯರಾಗಿದ್ದರು.
ಐಸಿಸಿ ವರ್ಲ್ಡ್ಕಪ್ ಇಲೆವೆನ್
1 ಜಾಸನ್ ರಾಯ್ (ಇಂಗ್ಲೆಂಡ್), 443 ರನ್
2 ರೋಹಿತ್ ಶರ್ಮ (ಭಾರತ), 648 ರನ್
3 ವಿಲಿಯಮ್ಸನ್ (ನಾಯಕ, ನ್ಯೂಜಿಲ್ಯಾಂಡ್), 578 ರನ್
4 ಜೋ ರೂಟ್ (ಇಂಗ್ಲೆಂಡ್), 556 ರನ್
5 ಶಕಿಬ್ ಅಲ್ ಹಸನ್ (ಬಾಂಗ್ಲಾ), 606 ರನ್, 11 ವಿಕೆಟ್
6 ಬೆನ್ ಸ್ಟೋಕ್ಸ್ (ಇಂಗ್ಲೆಂಡ್), 465 ರನ್
7 ಅಲೆಕ್ಸ್ ಕ್ಯಾರಿ (ವಿ.ಕೀ./ಆಸೀಸ್), 375 ರನ್, 20 ಕ್ಯಾಚ್
8 ಮಿಚೆಲ್ ಸ್ಟಾರ್ಕ್ (ಆಸ್ಟ್ರೇಲಿಯ), 27 ವಿಕೆಟ್
9 ಜೋಫÅ ಆರ್ಚರ್ (ಇಂಗ್ಲೆಂಡ್), 20 ವಿಕೆಟ್
10 ಲಾಕಿ ಫರ್ಗ್ಯುಸನ್ (ನ್ಯೂಜಿಲ್ಯಾಂಡ್), 21 ವಿಕೆಟ್
11 ಜಸ್‌ಪ್ರೀತ್ ಬುಮ್ರಾ (ಭಾರತ), 18 ವಿಕೆಟ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.