![1-congress](https://www.udayavani.com/wp-content/uploads/2025/02/1-congress-415x299.jpg)
![1-congress](https://www.udayavani.com/wp-content/uploads/2025/02/1-congress-415x299.jpg)
Team Udayavani, Jun 30, 2024, 10:12 AM IST
ಬಾರ್ಬಡೋಸ್: ಭಾರತದ ನೆಲದಲ್ಲಿ ಏಕದಿನ ವಿಶ್ವಕಪ್ ಫೈನಲ್ ಸೋತು ನಿರಾಸೆ ಅನುಭವಿಸಿದ್ದ ಭಾರತ ಕ್ರಿಕೆಟ್ ತಂಡವು ಏಳು ತಿಂಗಳ ಬಳಿಕ ಬಾರ್ಬಡೋಸ್ ದ್ವೀಪದಲ್ಲಿ ಭಾರತದ ಧ್ವಜ ನೆಟ್ಟಿದೆ. ಐಸಿಸಿ ಟಿ20 ವಿಶ್ವಕಪ್ 2024ರ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ರೋಚಕ ಹಣಾಹಣಿಯಲ್ಲಿ ಸೋಲಿಸಿ ಮತ್ತೆ ಐಸಿಸಿ ಕಪ್ ಮುಡಿಗೇರಿಸಿಕೊಂಡಿದೆ.
2023ರ ನವೆಂಬರ್ 19 ರ ರಾತ್ರಿ ಕೋಟ್ಯಾಂತರ ಅಭಿಮಾನಿಗಳನ್ನು ನಿರಾಶೆಯ ಕಡಲಿಗೆ ನೂಕಿದ್ದ ಟೀಂ ಇಂಡಿಯಾ ಇಂದು ಮತ್ತೆ ಎದೆಯುಬ್ಬಿಸಿ ನಡೆಯುವಂತೆ ಮಾಡಿದೆ. ರೋಹಿತ್ ಶರ್ಮಾ ಅವರು ತಾನು ಪ್ರತಿಜ್ಞೆ ಮಾಡಿದಂತೆ ಮತ್ತೆ ಭಾರತಕ್ಕೆ ಐಸಿಸಿ ಟಿ20 ವಿಶ್ವಕಪ್ ಟ್ರೋಫಿ ಗೆಲ್ಲಿಸಿಕೊಟ್ಟಿದ್ದಾರೆ.
ಪಂದ್ಯದ ಬಳಿಕ ಭಾವುಕರಾದ ರೋಹಿತ್ ಶರ್ಮಾ ಮೈದಾನದಲ್ಲೇ ಕಣ್ಣಿರು ಹರಿಸಿದರು. ಪಂದ್ಯ ಗೆಲ್ಲುತ್ತಿದ್ದಂತೆ ಮೈದಾನದಲ್ಲಿ ನೆಲಕ್ಕೆ ಕೈಗಳನ್ನು ಬಡಿಯುತ್ತಾ ಸಾಧಿಸಿದ ಸಂತಸದಲ್ಲಿ ತೇಲಾಡಿದರು. ಸಹ ಆಟಗಾರ ವಿರಾಟ್ ಕೊಹ್ಲಿ ಅವರನ್ನು ಬಿಗಿದಪ್ಪಿ ಕಣ್ಣಿರಾದರು.
ರೋಹಿತ್ ಅವರು ನಾಯಕನಾಗಿ ಐಸಿಸಿ ಪ್ರಶಸ್ತಿಯನ್ನು ಗೆದ್ದ ಪಿಚ್ ಗೆ ಮರಳಿ ಈ ಕ್ಷಣವನ್ನು ಶಾಶ್ವತವಾಗಿ ತನ್ನ ಭಾಗವಾಗಿಸಲು ನಿರ್ಧರಿಸಿದರು. ಬ್ರಿಜ್ ಟೌನ್ ನ ಕೆನ್ನಿಂಗ್ಸ್ಟನ್ ಓವಲ್ ಮೈದಾನದ ಪಿಚ್ ನ ಸ್ವಲ್ಪ ಮಣ್ಣನ್ನಯ ಕೈಗೆತ್ತಿಕೊಂಡ ರೋಹಿತ್ ತಿಂದರು. ಈ ಮೂಲಕ ಜೀವಮಾನದ ಈ ಸಾಧನೆಗೆ ಕಾರಣವಾದ ಕೆರಿಬಿಯನ್ ದ್ವೀಪ ರಾಷ್ಟ್ರಕ್ಕೆ ಧನ್ಯತೆ ಅರ್ಪಿಸಿದರು.
View this post on Instagram
ನಿವೃತ್ತಿ ಘೋಷಣೆ
ಟಿ20 ವಿಶ್ವಕಪ್ ಗೆದ್ದ ಬಳಿಕ ರೋಹಿತ್ ಶರ್ಮಾ ಅವರು ಟಿ20 ಮಾದರಿ ಕ್ರಿಕೆಟ್ ಗೆ ವಿದಾಯ ಹೇಳಿದರು. ಫೈನಲ್ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರೋಹಿತ್ ಶರ್ಮಾ, “ಇದು ನನ್ನ ಕೊನೆಯ ಅಂತಾರಾಷ್ಟ್ರೀಯ ಟಿ20 ಪಂದ್ಯವೂ ಹೌದು. ಈ ಫಾರ್ಮ್ಯಾಟ್ ಗೆ ವಿದಾಯ ಹೇಳಲು ಇದಕ್ಕಿಂತ ಸಕಾಲ ಇನ್ನೊಂದಿಲ್ಲ. ನಾನು ಫಾರ್ಮ್ಯಾಟ್ ನೊಂದಿಗೆ ನನ್ನ ವೃತ್ತಿ ಜೀವನ ಆರಂಭಿಸಿದ್ದೆ. ನಾನು ಕಪ್ ಗೆಲ್ಲಬೇಕೆಂದು ಬಯಸಿದ್ದೆ” ಎಂದು ಹೇಳಿದರು.
ಟಿ20ಯಲ್ಲಿ 159 ಪಂದ್ಯಗಳನ್ನು ಆಡಿರುವ ರೋಹಿತ್, 4231 ರನ್ ಗಳಿಸಿದ್ದು, ಇದರಲ್ಲಿ 5 ಶತಕ ಹಾಗೂ 37 ಅರ್ಧಶತಕಗಳು ಸೇರಿವೆ.
Team India: ಪಂತ್-ರಾಹುಲ್ ವಿಚಾರದಲ್ಲಿ ಗಂಭೀರ್- ಅಗರ್ಕರ್ ನಡುವೆ ಭಿನ್ನಾಭಿಪ್ರಾಯ
IPL 2025: ಮತ್ತೊಬ್ಬ ಅಫ್ಘಾನಿ ಬೌಲರ್ ಬದಲು ಮುಂಬೈ ಇಂಡಿಯನ್ಸ್ ತಂಡದ ಸೇರಿದ ಮುಜೀಬ್
ODI Ranking: ನಂ.1 ಸ್ಥಾನದಲ್ಲೇ ಉಳಿದ ಭಾರತ, 4ಕ್ಕೆ ಜಿಗಿದ ನ್ಯೂಜಿಲೆಂಡ್
Team India: ʼನಾವು ನಟರಲ್ಲ..ʼ: ಟೀಂ ಇಂಡಿಯಾದ ಸೂಪರ್‌ಸ್ಟಾರ್ ಸಂಸ್ಕೃತಿ ಟೀಕಿಸಿದ ಅಶ್ವಿನ್
Don’t hug players: ಭಾರತದ ಆಟಗಾರರ ಅಪ್ಪಿಕೊಳ್ಬೇಡಿ… ತಂಡಕ್ಕೆ ಪಾಕ್ ಅಭಿಮಾನಿಗಳು ಕರೆ
You seem to have an Ad Blocker on.
To continue reading, please turn it off or whitelist Udayavani.