ದಿನೇಶ್ ಕಾರ್ತಿಕ್ ಕೈಗೆ ಟ್ರೋಫಿ ಕೊಟ್ಟ ಕಪ್ತಾನ
Team Udayavani, Sep 26, 2022, 10:58 PM IST
ಹೈದರಾಬಾದ್: ಆಸ್ಟ್ರೇಲಿಯ ಎದುರಿನ ಟಿ20 ಸರಣಿ ಗೆಲುವಿನ ಟ್ರೋಫಿ ಪಡೆದ ಬಳಿಕ ನಾಯಕ ರೋಹಿತ್ ಶರ್ಮ ನೂತನ ಸಂಪ್ರದಾಯದ ಮೂಲಕ ಗಮನ ಸೆಳೆದರು. ಇದನ್ನು ತಂಡದ ಅತೀ ಹಿರಿಯ ಆಟಗಾರ ದಿನೇಶ್ ಕಾರ್ತಿಕ್ ಕೈಗೆ ನೀಡಿದರು. ಇದರೊಂದಿಗೆ ಧೋನಿ ಆರಂಭಿಸಿದ ಸಂಪ್ರದಾಯವೊಂದನ್ನು ಮುರಿದರು.
ಸರಣಿ ಗೆಲುವಿನ ಟ್ರೋಫಿಯನ್ನು ತಂಡದ ಹೊಸ ಆಟಗಾರರಿಗೆ ಅಥವಾ ಕಿರಿಯ ಕ್ರಿಕೆಟಿಗರಿಗೆ ನೀಡುವುದು ಅಂದಿನ ನಾಯಕ ಧೋನಿ ಆರಂಭಿಸಿದ ಸಂಪ್ರದಾಯವಾಗಿತ್ತು. ಇದನ್ನು ವಿರಾಟ್ ಕೊಹ್ಲಿ ಮುಂದುವರಿಸಿಕೊಂಡು ಬಂದರು. ರೋಹಿತ್ ಶರ್ಮ ಕೂಡ ಇದನ್ನೇ ಪಾಲಿಸತೊಡಗಿದರು. ಆದರೆ ಆಸ್ಟ್ರೇಲಿಯ ವಿರುದ್ಧದ ಸರಣಿ ಬಳಿಕ ಇದಕ್ಕೆ ಬ್ರೇಕ್ ಹಾಕಿದರು. ತಂಡದ ಅತ್ಯಂತ ಹಿರಿಯ ಆಟಗಾರನಿಗೆ ಟ್ರೋಫಿ ಹಸ್ತಾಂತರಿಸುವ ಮೂಲಕ ಸುದ್ದಿಯಾದರು.
ನಾಯಕನ ಈ ದಿಢೀರ್ ಹಾಗೂ ಅಚ್ಚರಿಯ ಕ್ರಮವನ್ನು ದಿನೇಶ್ ಕಾರ್ತಿಕ್ ಆರಂಭದಲ್ಲಿ ನಿರಾಕರಿಸಿದರು. ಆದರೆ ಸಹ ಆಟಗಾರರಾದ ಆರ್. ಅಶ್ವಿನ್, ಹಾರ್ದಿಕ್ ಪಾಂಡ್ಯ ಮೊದಲಾದವರು ಒತ್ತಾಯ ಮಾಡಿದ ಬಳಿಕ ಕಾರ್ತಿಕ್ ಟ್ರೋಫಿ ಸ್ವೀಕರಿಸಲು ಸಮ್ಮತಿಸಿದರು.
Winners Are Grinners! ☺️ ☺️
That moment when #TeamIndia Captain @ImRo45 received the #INDvAUS @mastercardindia T20I series trophy ? from the hands of Mr. @ThakurArunS, Treasurer, BCCI. ? ? pic.twitter.com/nr31xBrRBQ
— BCCI (@BCCI) September 25, 2022
ಮರಳಿ ಟೀಮ್ ಇಂಡಿಯಾಕ್ಕೆ
2019ರಲ್ಲಿ ಟೀಮ್ ಇಂಡಿಯಾದಿಂದ ಸಂಪೂರ್ಣ ಬೇರ್ಪಟ್ಟಿದ್ದ 37 ವರ್ಷದ ದಿನೇಶ್ ಕಾರ್ತಿಕ್, ವೀಕ್ಷಕ ವಿವರಣಕಾರನಾಗಿಯೂ ಕರ್ತವ್ಯ ನಿಭಾಯಿಸಿದ್ದರು. ಆದರೆ ಕಳೆದ ಐಪಿಎಲ್‌ನಲ್ಲಿ ಪ್ರಚಂಡ ಬ್ಯಾಟಿಂಗ್ ಪ್ರದರ್ಶನ ನೀಡಿ, ಬೆಸ್ಟ್ ಫಿನಿಶರ್ ಎನಿಸುವ ಮೂಲಕ ಮತ್ತೆ ಚಾಲ್ತಿಗೆ ಬಂದಿದ್ದರು. ಟೀಮ್ ಇಂಡಿಯಾದ ಬಾಗಿಲು ಕೂಡ ತೆರೆಯಲ್ಪಟ್ಟಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಕರಾವಳಿಯಲ್ಲಿ “ಕರ್ನಾಟಕ ಕೂಟ’: ಜ. 17-23ರ ವರೆಗೆ ಮಂಗಳೂರು, ಉಡುಪಿಯಲ್ಲಿ
Uppinangady; ಕಾಡಾನೆ ಸಂಚಾರದಿಂದ ಹಿರೇಬಂಡಾಡಿ ಗ್ರಾಮಸ್ಥರು ಭಯಭೀತ
Vijay Hazare Trophy: ಕರ್ನಾಟಕಕ್ಕೆ ಸತತ 2ನೇ ಗೆಲುವಿನ ಸಿಹಿ
Udupi- Mangaluru; ವರ್ಷಾಂತ್ಯಕ್ಕೆ ಹೆಚ್ಚಿದ ಪ್ರವಾಸಿಗರು: ಟ್ರಾಫಿಕ್ ಜಾಮ್
Pro Kabaddi League: ಗುಜರಾತ್ ಜೈಂಟ್ಸ್ ವಿರುದ್ಧದಬಾಂಗ್ ಡೆಲ್ಲಿಗೆ ಗೆಲುವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.