INDvsENG; ರಾಜಕೋಟದಲ್ಲಿ ರೋಹಿತ್ ಶತಕದ ದರ್ಬಾರ್; ಧೋನಿ ದಾಖಲೆ ಮುರಿದ ಕ್ಯಾಪ್ಟನ್
Team Udayavani, Feb 15, 2024, 3:00 PM IST
ರಾಜ್ ಕೋಟ್: ಪ್ರವಾಸಿ ಇಂಗ್ಲೆಂಡ್ ವಿರುದ್ದದ ಟೆಸ್ಟ್ ಸರಣಿಯ ಮೂರನೇ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಶತಕ ಬಾರಿಸಿ ಮಿಂಚಿದ್ದಾರೆ. ರಾಜ್ ಕೋಟ್ ನಲ್ಲಿ ನಡೆಯುತ್ತಿರುವ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ರೋಹಿತ್ ತನ್ನ ಟೆಸ್ಟ್ ಜೀವನದ 11ನೇ ಶತಕ ಪೂರ್ಣಗೊಳಿಸಿದರು.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಭಾರತ ಆರಂಭದಲ್ಲಿಯೇ ಸತತ ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. 33 ರನ್ ಗೆ ಮೂರು ವಿಕೆಟ್ ಕಳೆದುಕೊಂಡಿದ್ದ ವೇಳೆ ರವೀಂದ್ರ ಜಡೇಜಾ ಮತ್ತು ರೋಹಿತ್ ಶರ್ಮಾ ಜತೆಗೂಡಿ ಉತ್ತಮ ಜೊತೆಯಾಟವಾಡಿದರು.
ರೋಹಿತ್ ಶರ್ಮಾ ಅವರು ಎರಡು ಸಿಕ್ಸರ್ ಮತ್ತು 11 ಬೌಂಡರಿಗಳನ್ನು ಬಾರಿಸಿ ಶತಕ ಪೂರೈಸಿದರು. ರವೀಂದ್ರ ಜಡೇಜಾ ಅವರು ಅರ್ಧಶತಕ ಬಾರಿಸಿದರು. ಇವರಿಬ್ಬರು ನಾಲ್ಕನೇ ವಿಕೆಟ್ ಗೆ 150ಕ್ಕೂ ಹೆಚ್ಚು ರನ್ ಜೊತೆಯಾಟವಾಡಿದರು.
58 ಓವರ್ ನಂತರ ಭಾರತ ತಂಡ ಮೂರು ವಿಕೆಟ್ ನಷ್ಟಕ್ಕೆ 204 ರನ್ ಮಾಡಿದೆ. ರೋಹಿತ್ 112 ರನ್ ಮತ್ತು ಜಡೇಜಾ 72 ರನ್ ಗಳಿಸಿ ಆಡುತ್ತಿದ್ದಾರೆ.
ಇದನ್ನೂ ಓದಿ:‘Toxicʼ ನಲ್ಲಿ ಶಾರುಖ್ ನಟನೆ: “ಇದುವರೆಗೆ ಯಾವುದು..” ಯಶ್ ಹೇಳಿದ್ದೇನು?
ಇದೇ ವೇಳೆ ರೋಹಿತ್ ಶರ್ಮಾ ಅವರು ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ಸಿಕ್ಸರ್ ದಾಖಲೆ ಮುರಿದರು. ಟೆಸ್ಟ್ ಕ್ರಿಕೆಟ್ ನಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿ ಭಾರತೀಯರ ಪಟ್ಟಿಯಲ್ಲಿ ರೋಹಿತ್ ಎರಡನೇ ಸ್ಥಾನಕ್ಕೇರಿದರು. 90 ಸಿಕ್ಸರ್ ಬಾರಿಸಿರುವ ವೀರೇಂದ್ರ ಸೆಹವಾಗ್ ಮೊದಲ ಸ್ಥಾನದಲ್ಲಿದ್ದರೆ, 79 ಸಿಕ್ಸರ್ ನೊಂದಿಗೆ ರೋಹಿತ್ ಎರಡನೇ ಸ್ಥಾನದಲ್ಲಿದ್ದಾರೆ. ಎಂ.ಎಸ್ ಧೋನಿ 78 ಸಿಕ್ಸರ್ ಹೊಡೆದಿದ್ದರು.
ಇಂಗ್ಲೆಂಡ್ ವಿರುದ್ಧ ಭಾರತದ ಆರಂಭಿಕ ಆಟಗಾರನಾಗಿ ಅತಿ ಹೆಚ್ಚು ಟೆಸ್ಟ್ ಶತಕಗಳನ್ನು ಬಾರಿಸಿದವರ ಪಟ್ಟಿಯಲ್ಲಿ ರೋಹಿತ್ ಜಂಟಿಯಾಗಿ ಎರಡನೇ ಸ್ಥಾನಕ್ಕೇರಿದರು. ನಾಲ್ಕು ಶತಕ ಬಾರಿಸಿದ ಸುನಿಲ್ ಗವಾಸ್ಕರ್ ಮೊದಲ ಸ್ಥಾನದಲ್ಲಿದ್ದಾರೆ. ವಿಜಯ್ ಮರ್ಚಂಟ್, ಮುರಳಿ ವಿಜಯ್, ಕೆಎಲ್ ರಾಹುಲ್ ಮತ್ತು ರೋಹಿತ್ ಅವರು ತಲಾ ಮೂರು ಶತಕದೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.