ಕ್ಯಾಪ್ಟನ್ ಕಮಾಲ್: ಭರ್ಜರಿ ದ್ವಿಶತಕ ಸಿಡಿಸಿದ ರೋಹಿತ್ ಶರ್ಮಾ
Team Udayavani, Dec 13, 2017, 3:17 PM IST
ಮೊಹಾಲಿ : ಇಲ್ಲಿ ಬುಧವಾರ ಪ್ರವಾಸಿ ಶ್ರೀಲಂಕಾ ವಿರುದ್ಧ ನಡೆಯುತ್ತಿರುವ ದ್ವಿತೀಯ ಏಕದಿನ ಪಂದ್ಯದಲ್ಲಿ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಭರ್ಜರಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದ್ದು ದ್ವಿಶತಕ ಸಿಡಿಸಿ (208) ಅಜೇಯರಾಗಿ ಉಳಿದಿದ್ದಾರೆ.
ಇದು ರೋಹಿತ್ ಶರ್ಮಾ ಏಕದಿನ ಕ್ರಿಕೆಟ್‌ನಲ್ಲಿ ಸಿಡಿಸಿದ ಮೂರನೇ ದ್ವಿಶತಕದ ದಾಖಲೆಯಾಗಿದೆ. 2014 ರಲ್ಲಿ ಕೋಲ್ಕತಾದಲ್ಲಿ ಶ್ರೀಲಂಕಾ ವಿರುದ್ಧವೇ 264 ರನ್ ಸಿಡಿಸಿದ್ದರು. 2013 ರಲ್ಲಿ ಬೆಂಗಳೂರಿನಲ್ಲಿ ಆಸೀಸ್ ವಿರುದ್ಧ 209 ಸಿಡಿಸಿದ್ದರು.
ಆರಂಭದಲ್ಲಿ ತಾಳ್ಮೆಯ ಆಟವಾಡಿದ ರೋಹಿತ್ 117 ಎಸೆತಗಳನ್ನು ಬಳಸಿಕೊಂಡು ಶತಕ ಪೂರೈಸಿದರು. ಶತಕದ ಬಳಿಕ ಸಿಡಿದೆದ್ದ ರೋಹಿತ್ ಬೌಂಡರಿ ಸಿಕ್ಸರ್‌ಗಳ ಮಳೆಯನ್ನೇ ಸುರಿಸಿದರು. ಕೇವಲ 36 ಎಸೆತಗಳಲ್ಲಿ ಇನ್ನೂ ನೂರು ರನ್ ಪೂರೈಸಿ ಸಂಭ್ರಮಿಸಿದರು. ಅವರ ಇನ್ನಿಂಗ್ಸ್‌ನಲ್ಲಿ ಬರೋಬ್ಬರಿ 12 ಸಿಕ್ಸರ್‌ಗಳು ಮತ್ತು 13 ಬೌಂಡರಿಗಳಿದ್ದವು.
ಧರ್ಮಶಾಲಾ ಪಂದ್ಯದಲ್ಲಿ ಹೀನಾಯ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದ ತಂಡ ಪುಟಿದೆದ್ದು ಬಂದಿರುವುದಕ್ಕೆ ಈ ಪಂದ್ಯ ಸಾಕ್ಷಿಯಾಗಿದೆ.
ನಿಗದಿತ 50 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 392 ರನ್ ಗಳಿಸಿ ಶ್ರೀಲಂಕಾ ತಂಡಕ್ಕೆ 393 ರನ್‌ಗಳಭಾರೀ ಸವಾಲು ಮುಂದಿಟ್ಟಿದೆ.
ತಂಡದ ಪರ ರೋಹಿತ್‌ಗೆ ಭರ್ಜರಿ ಸಾಥ್ ನೀಡಿದ ಶಿಖರ್ ಧವನ್ 68, ಶ್ರೇಯಸ್ ಅಯ್ಯರ್ 88 ರನ್‌ಗಳಿಸಿ ಫಾರ್ಮ್ ಪ್ರದರ್ಶಿಸಿದರು. ಧೋನಿ 7 ರನ್‌ಗಳಿಸಿ ಔಟಾದರೆ, ಹಾರ್ದಿಕ್ ಪಾಂಡ್ಯಾ 8 ರನ್‌ಗಳಿಸಿ ಔಟಾದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ
Waqf Notice: ಬಸನಗೌಡ ಪಾಟೀಲ್ ಯತ್ನಾಳ್ ತಂಡದಿಂದ 1 ತಿಂಗಳು ಜನ ಜಾಗೃತಿ
Waqf Issue: ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ
Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ
Black Days: ಜಮೀರ್+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್.ಡಿ.ಕುಮಾರಸ್ವಾಮಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.