T20 World Cup ; ರೋಹಿತ್ ಶರ್ಮರದ್ದೇ ನಾಯಕತ್ವ: ಗೊಂದಲಗಳಿಗೆ ತೆರೆ ಎಳೆದ ಜಯ್ ಶಾ
ಶರ್ಮ ಸಾಮರ್ಥ್ಯಗಳನ್ನು ನಾವು ಪ್ರಶ್ನಿಸಲು ಸಾಧ್ಯವಿಲ್ಲ
Team Udayavani, Feb 15, 2024, 6:30 PM IST
ರಾಜ್ ಕೋಟ್ : ಜೂನ್‌ನಲ್ಲಿ ನಡೆಯಲಿರುವ ಟಿ-20 ವಿಶ್ವಕಪ್‌ನಲ್ಲಿ ರೋಹಿತ್ ಶರ್ಮ ಅವರೇ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ,ಹಾರ್ದಿಕ್ ಪಾಂಡ್ಯ ಉಪನಾಯಕರಾಗಿರಲಿದ್ದಾರೆ ಎಂದು ಗುರುವಾರ ರಾಜ್‌ಕೋಟ್‌ನಲ್ಲಿ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಖಚಿತಪಡಿಸಿದ್ದಾರೆ.
ಕೆರಿಬಿಯನ್ ಮತ್ತು ಯುಎಸ್‌ನಲ್ಲಿ ನಡೆಯುವ ಟಿ-20 ವಿಶ್ವಕಪ್ ಪಂದ್ಯಾವ ಳಿಗಳ ನಾಯಕತ್ವದ ಸುತ್ತಲಿನ ಗೊಂದಲವನ್ನು ಜಯ್ ಶಾ ಕೊನೆಗೊಳಿಸಿದ್ದಾರೆ.
“ಈ ಸಮಯದಲ್ಲಿ, ರೋಹಿತ್ ಎಲ್ಲಾ ಮಾದರಿಗೆ ನಾಯಕ. ಇದು ಸಾಮೂಹಿಕ ನಿರ್ಧಾರ, ಮತ್ತು ಆಯ್ಕೆದಾರರು ಈ ವಿಷಯದಲ್ಲಿ ಸಂಪೂರ್ಣವಾಗಿ ಹೊಂದಾಣಿಕೆ ಮಾಡಿಕೊಂಡಿದ್ದಾರೆ. ಹಾರ್ದಿಕ್ ಪಾಂಡ್ಯ ಟಿ 20 ವಿಶ್ವಕಪ್‌ಗೆ ಉಪನಾಯಕನಾಗಿ ತಮ್ಮ ಸ್ಥಾನವನ್ನು ಉಳಿಸಿಕೊಳ್ಳಲಿದ್ದಾರೆ ಎಂದು ಶಾ ಹೇಳಿದ್ದಾರೆ.
“ನೀವು ಅಫ್ಘಾನಿಸ್ಥಾನ ಎದುರಿನ ಟಿ 20 ಪಂದ್ಯವನ್ನು ನೆನಪಿಸಿಕೊಂಡರೆ, ನಾವು ನಾಲ್ಕು ವಿಕೆಟ್‌ಗೆ 27 ರನ್ ಗಳಿಸಿ ಕಠಿಣ ಸ್ಥಾನದಲ್ಲಿದ್ದೆವು, ಆದರೆ ರೋಹಿತ್ ಅವರ ಗಮನಾರ್ಹ ಶತಕವು ಆಟವನ್ನು ತಿರುಗಿಸಿತು. ಅವರ ಸಾಮರ್ಥ್ಯಗಳನ್ನು ನಾವು ಪ್ರಶ್ನಿಸಲು ಸಾಧ್ಯವಿಲ್ಲ. ನಾವು ಏಕದಿನ ವಿಶ್ವಕಪ್ ನಲ್ಲಿ ಸತತ ಹತ್ತು ಪಂದ್ಯಗಳನ್ನು ಗೆದ್ದಿದ್ದರೂ ಸಹ ಫೈನಲ್‌ನಲ್ಲಿ ಸೋತಿದ್ದೇವೆ. ಇದು ಆಟದ ಭಾಗವಾಗಿದೆ” ಎಂದು ಶಾ ಅವರು ತಮ್ಮ ಹಿಂದಿನ ಹೇಳಿಕೆಗಳನ್ನು ಪುನರುಚ್ಚರಿಸಿದ್ದಾರೆ.
ಟಿ20 ವಿಶ್ವಕಪ್‌ವರೆಗೆ ರಾಹುಲ್ ದ್ರಾವಿಡ್ ಕೋಚ್
ಮುಂದಿನ ಜೂನ್‌ನಲಿಲ ನಡೆಯಲಿರುವ ಟಿ20 ವಿಶ್ವಕಪ್ ಕೂಟದವರೆಗೆ ರಾಹುಲ್ ದ್ರಾವಿಡ್ ಅವರು ಭಾರತೀಯ ತಂಡದ ಮುಖ್ಯ ಕೋಚ್ ಆಗಿ ಮುಂದುವರಿಯಲಿದ್ದಾರೆ ಎಂದು ಜಯ್ ಶಾ ಸ್ಪಷ್ಟಪಡಿಸಿದ್ದಾರೆ.
ದ್ರಾವಿಡ್ ಅವರ ಒಪ್ಪಂದವು ಕಳೆದ ವರ್ಷದ ಏಕದಿನ ವಿಶ್ವಕಪ್ ಬಳಿಕ ಮುಗಿದಿತ್ತು. ಆದರೆ ಡಿಸೆಂಬರ್-ಜನವರಿ ತಿಂಗಳ ದಕ್ಷಿಣ ಆಫ್ರಿಕಾ ಪ್ರವಾಸದವರೆಗೆ ದ್ರಾವಿಡ್ ಮತ್ತು ಅವರ ಬೆಂಬಲ ಸಿಬಂದಿಗೆ ತಮ್ಮ ಹುದ್ದೆಯಲ್ಲಿ ಮುಂದುವರಿಯುವಂತೆ ಕೇಳಿಕೊಳ್ಳಲಾಗಿತ್ತು. ಆದರೆ ಶಾ ಗುರುವಾರ ದ್ರಾವಿಡ್ ಜತೆ ಚರ್ಚಿಸಿದ್ದು ಮುಂಬರುವ ಐಸಿಸಿ ಟಿ20 ವಿಶ್ವಕಪ್‌ತನಕ ಹುದ್ದೆಯಲ್ಲಿ ಮುಂದುವರಿಯವ ನಿರ್ಧಾರಕ್ಕೆ ಬಂದರು.ಏಕದಿನ ವಿಶ್ವಕಪ್ ಬಳಿಕ ರಾಹುಲ್ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ತೆರಳಿದ್ದರು. ಹಾಗಾಗಿ ಅವರೊಂದಿಗೆ ಚರ್ಚಿಸಲು ನಮಗೆ ಸಮಯ ಸಿಕ್ಕಿರಲಿಲ್ಲ ಎಂದು ಹೇಳಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.