ಲ್ಯೂಕೇಮಿಯಾ ಗೆದ್ದ ರೋಮನ್ ರೈನ್ಸ್ WWE ಗೆ ಗ್ರ್ಯಾಂಡ್ ರೀ ಎಂಟ್ರಿ
Team Udayavani, Feb 26, 2019, 9:46 AM IST
ವಾಷಿಂಗ್ಟನ್: ವರ್ಲ್ಡ್ ರೆಸ್ಲಿಂಗ್ ಎಂಟರ್ಟೈನ್ಮೆಂಟ್ ನ ಸೂಪರ್ ಸ್ಟಾರ್ ರೋಮನ್ ರೈನ್ಸ್ ಮತ್ತೆ ಡಬ್ಲ್ಯೂಡಬ್ಲ್ಯೂಇ ರಿಂಗ್ ಗೆ ಕಾಲಿಟ್ಟಿದ್ದಾರೆ. ಕಳೆದ ಅಕ್ಟೋಬರ್ ನಲ್ಲಿ ಲ್ಯೂಕೇಮಿಯಾ (ರಕ್ತ ಕಾನ್ಸರ್) ಗೆ ತುತ್ತಾಗಿದ್ದ ಚಾಂಪಿಯನ್ ರಸ್ಲರ್ ರೋಮನ್ ರೈನ್ಸ್ ಸೋಮವಾರ ನಡೆದ ‘ಮಂಡೇ ನೈಟ್ ರಾ ರೆಸ್ಲಿಂಗ್’ ನಲ್ಲಿ ಮರಳಿ ಅಖಾಡಕ್ಕೆ ಇಳಿದಿದ್ದಾರೆ.
ಮಂಡೇ ನೈಟ್ ರಾ ರಿಂಗ್ ನಲ್ಲಿ ಕಾಣಿಸಿಕೊಂಡ ರೋಮನ್ ರೈನ್ಸ್, ನಾನು ನಿಮಗೆಲ್ಲರಿಗೂ ಒಂದು ಶುಭ ಸುದ್ದಿ ನೀಡುತ್ತಿದ್ದೇನೆ. ನಾನೀಗ ಲ್ಯೂಕೇಮಿಯಾದಿಂದ ಗುಣಮುಖನಾಗಿದ್ದೇನೆ ಎಂದಾಗ ಸಂಪೂರ್ಣ ಸಭಾಂಗಣ ಎದ್ದುನಿಂತು ಕರಾತಾಡನದಿಂದ ರೋಮನ್ ರೈನ್ಸ್ ರನ್ನು ಸ್ವಾಗತಿಸಿತು. ‘ದ ಬಿಗ್ ಡಾಗ್ ಈಸ್ ಬ್ಯಾಕ್’ ಎಂದು ರೋಮನ್ ತನ್ನ ಪುನರಾಗಮನವನ್ನು ಅಧಿಕೃತವಾಗಿ ಘೋಷಿಸಿದರು.
ಅಮೇರಿಕಾ ಮೂಲದ ಈ ಆಟಗಾರ ಕಳೆದ ಅಕ್ಟೋಬರ್ ನಲ್ಲಿ ಲ್ಯೂಕೇಮಿಯಾ ಅಂದರೆ ರಕ್ತ ಕ್ಯಾನ್ಸರ್ ರೋಗ ಉಲ್ಬಣಿಸಿದ್ದರಿಂದ ಡಬ್ಲ್ಯೂಡಬ್ಲ್ಯೂಇ ರಿಂಗ್ ತೊರೆದಿದ್ದರು. ನಾಲ್ಕು ಬಾರಿಯ ಚಾಂಪಿಯನ್ ಆಗಿದ್ದ ರೋಮನ್ ರೈನ್ಸ್ ಡಬ್ಲ್ಯೂಡಬ್ಲ್ಯೂಇ ತೊರೆಯುವಾಗಲೂ ಚಾಂಪಿಯನ್ ಪಟ್ಟದಲ್ಲಿದ್ದರು.
33 ವರ್ಷದ ರೋಮನ್ ರೈನ್ಸ್ ಕಳೆದ 11 ವರ್ಷಗಳಿಂದ ಈ ಕಾಯಿಲೆಯಿಂದ ಬಳಲುತ್ತಿದ್ದಾರೆ. 2008ರಲ್ಲಿ ಮೊದಲ ಬಾರಿಗೆ ಲ್ಯೂಕೇಮಿಯಾ ಆಪರೇಷನ್ ಗೆ ಒಳಗಾಗಿದ್ದರು. ಆಗ ಗುಣಮುಖವಾಗಿದ್ದ ಈ ಮಾರಣಾಂತಿಕ ಕಾಯಿಲೆ ಕಳೆದ ವರ್ಷ ಮತ್ತೆ ಕಾಣಿಸಿಕೊಂಡ ಹಿನ್ನಲೆಯಲ್ಲಿ ರೋಮನ್ ರೈನ್ಸ್ ಅನಿವಾರ್ಯವಾಗಿ ಚಾಂಪಿಯನ್ ಪಟ್ಟ ತೊರೆದು ಡಬ್ಲ್ಯೂಡಬ್ಲ್ಯೂಇ ರಿಂಗ್ ಬಿಟ್ಟು ಹೊರನಡೆದಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.