ಚೇಸಿಂಗ್‌ನಲ್ಲಿ ನ್ಯೂಜಿಲೆಂಡ್ ದಾಖಲೆ: ರಾಸ್ ಟೇಲರ್ ಶತಕಗಳ ಸಾಧನೆ
Team Udayavani, Feb 6, 2020, 4:09 PM IST
ಹ್ಯಾಮಿಲ್ಟನ್: ಭಾರತ ನೀಡಿದ 348 ರನ್ನುಗಳ ಕಠಿಣ ಸವಾಲನ್ನು ದಿಟ್ಟ ರೀತಿಯಲ್ಲಿ ಬೆನ್ನಟ್ಟಿದ ನ್ಯೂಜಿಲೆಂಡ್ ತಂಡವು ನಾಲ್ಕು ವಿಕೆಟ್‌ಗಳ ಗೆಲುವು ಸಾಧಿಸುವ ಮೂಲಕ ದಾಖಲೆ ನಿರ್ಮಿಸಿತು. ಇದು ಏಕದಿನ ಕ್ರಿಕೆಟ್‌ನಲ್ಲಿ ಚೇಸಿಂಗ್ ನಲ್ಲಿ ನ್ಯೂಜಿಲೆಂಡಿನ ದಾಖಲೆಯಾಗಿದೆ.
ಈ ಹಿಂದೆ 2007ರಲ್ಲಿ ಸೆಡ್ಡಾನ್ ಪಾರ್ಕ್‌ನಲ್ಲಿ ನಡೆದಿದ್ದ ಪಂದ್ಯದಲ್ಲಿ ಆಸ್ಟ್ರೇಲಿಯ ನೀಡಿದ 347 ರನ್ನುಗಳ ಸವಾಲನ್ನು ಚೇಸ್ ಮಾಡಲು ನ್ಯೂಜಿಲೆಂಡ್ ಯಶಸ್ವಿಯಾಗಿತ್ತು.
ಈ ದಾಖಲೆಯ ಚೇಸಿಂಗ್ ನಲ್ಲಿ ರಾಸ್ ಟೇಲರ್ ಕೂಡಾ ವಿಶಿಷ್ಟ ಸಾಧನೆ ಮಾಡಿದರು. ನ್ಯೂಜಿಲೆಂಡ್ ನಾಲ್ಕು ಬೃಹತ್ ಮೊತ್ತದ ಚೇಸಿಂಗ್ ಗೆಲುವುಗಳ ವೇಳೆ ರಾಸ್ ಟೇಲರ್ ಮೂರು ಬಾರಿ ಶತಕ ದಾಖಲಿಸಿರುವುದು ವಿಶೇಷವಾಗಿದೆ.
ಆಸ್ಟ್ರೇಲಿಯ ವಿರುದ್ಧ 347 ರನ್ ಚೇಸ್ ವೇಳೆ ಟೇಲರ್ 11 ರನ್ ಗಳಿಸಿದ್ದರು. 2007ರಲ್ಲಿ ಆಸ್ಟ್ರೇಲಿಯ ನೀಡಿದ 337 ರನ್ ಸವಾಲನ್ನು ಚೇಸ್ ಮಾಡಿ ಗೆಲ್ಲುವಾಗ ಟೇಲರ್ 117 ರನ್ ಬಾರಿಸಿದ್ದರು. 2018ರಲ್ಲಿ ಇಂಗ್ಲೆಂಡ್ ನೀಡಿದ 336 ರನ್ ಸವಾಲನ್ನು ಚೇಸ್ ಮಾಡುವಾಗ ಟೇಲರ್ 181 ರನ್ ಗಳಿಸಿ ಅಜೇಯರಾಗಿ ಉಳಿದಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.