IPL ಚೆನ್ನೈ ಗೆ ಗೆಲ್ಲಲು 219 ರನ್ ಗಳ ಗುರಿ ಮುಂದಿಟ್ಟ ಆರ್ ಸಿಬಿ
18 ರ ಲೆಕ್ಕಾಚಾರ... ಮಳೆ ನಡುವೆ ಬಿಸಿಯೇರಿಸಿದ ಪಂದ್ಯ...!!
Team Udayavani, May 18, 2024, 9:59 PM IST
ಬೆಂಗಳೂರು: ಇಲ್ಲಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ ನಡೆಯುತ್ತಿರುವ ರೋಚಕ ಐಪಿಎಲ್ ಹಣಾಹಣಿಯಲ್ಲಿ ಭರ್ಜರಿಯಾಗಿ ಗೆಲ್ಲಲೇ ಬೇಕಾದ ಒತ್ತಡದಲ್ಲಿರುವ ಆರ್ ಸಿಬಿಯು ಚೆನ್ನೈ ಸೂಪರ್ ಕಿಂಗ್ಸ್ ಗೆ 219 ರನ್ ಗಳ ಗುರಿ ಮುಂದಿಟ್ಟಿದೆ.
ಚೆನ್ನೈ ಸೂಪರ್ ಕಿಂಗ್ಸ್ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಸಮಯಕ್ಕೆ ಸರಿಯಾಗಿ ಪಂದ್ಯ ಆರಂಭವಾಯಿತು ಆದರೆ 3 ಓವರ್ ಆಗುವಷ್ಟರಲ್ಲಿ ನಿರೀಕ್ಷೆಯಂತೆ ಮಳೆ ಅಡ್ಡಿ ಪಡಿಸಿತು. ಆರ್ ಸಿಬಿ 31 ರನ್ ಗಳಿಸಿತ್ತು. ಕೊಹ್ಲಿ 19 ರನ್ ಮತ್ತು ನಾಯಕ ಫ್ಲೆಸಿಸ್ 12 ರನ್ ಗಳಿಸಿ ಆಟವಾಡುತ್ತಿದ್ದ ವೇಳೆ ಕೆಲ ಹೊತ್ತು ಪಂದ್ಯಕ್ಕೆ ಮಳೆ ಅಡ್ಡಿ ಪಡಿಸಿತು. ಬಳಿಕ ಆರಂಭವಾದ ಪಂದ್ಯ ಸರಾಗವಾಗಿ ಸಾಗಿತು.
ಅಮೋಘ ಆಟವಾಡಿದ ಕೊಹ್ಲಿ 29 ಎಸೆತದಲ್ಲಿ 47 ರನ್ ಕೊಡುಗೆ ಸಲ್ಲಿಸಿ ಔಟಾದರು.3 ಬೌಂಡರಿ ಮತ್ತು 4 ಆಕರ್ಷಕ ಸಿಕ್ಸರ್ ಸಿಡಿಸಿದರು. ಸಾಥ್ ನೀಡಿದ ನಾಯಕ ಫ್ಲೆಸಿಸ್ 39 ಎಸೆತಗಳಲ್ಲಿ 54 ರನ್ ಗಳಿಸಿದ್ದ ವೇಳೆ ನಾನ್ ಸ್ಟ್ರೈಕರ್ಸ್ ನಲ್ಲಿದ್ದ ವೇಳೆ ಅನಿರೀಕ್ಷಿತ ರನ್ ಔಟಾಗುವ ಮೂಲಕ ನಿರಾಶರಾದರು.
ಆ ಬಳಿಕ ರಜತ್ ಪಾಟೀದಾರ್ 23 ಎಸೆತಗಳಲ್ಲಿ 41 ರನ್ ಗಳಿಸಿ ಕ್ಯಾಚಿತ್ತು ನಿರ್ಗಮಿಸಿದರು. ದಿನೇಶ್ ಕಾರ್ತಿಕ್ 6 ಎಸೆತದಲ್ಲಿ 14 ರನ್ ಕೊಡುಗೆ ನೀಡಿದರು. ಉತ್ತಮ ಆಟವಾಡಿದ ಕ್ಯಾಮರೂನ್ ಗ್ರೀನ್ 17 ಎಸೆತದಲ್ಲಿ 38 ರನ್ ಗಳಿಸಿ ಔಟಾಗದೆ ಉಳಿದರು. ಕೊನೆಯಲ್ಲಿ ಬಂದ ಮ್ಯಾಕ್ಸ್ ವೆಲ್ 5 ಎಸೆತದಲ್ಲಿ 16 ರನ್ ಗಳಿಸಿ ಔಟಾದರು. 5 ವಿಕೆಟ್ ನಷ್ಟಕ್ಕೆ 218 ರನ್ ಕಲೆ ಹಾಕಿತು.
ಬೌಂಡರಿ ಲೈನ್ ನಲ್ಲಿ ಡೇರಿಲ್ ಮಿಚೆಲ್ ಎರಡು ಅದ್ಭುತ ಕ್ಯಾಚ್ ಪಡೆದರು. ಒಂದು ಕ್ಯಾಚನ್ನು ಕೈಚೆಲ್ಲಿದರು. ಕೊಹ್ಲಿ ಅವರ ಕ್ಯಾಚ್ ಮೊದಲನೆಯದಾಗಿದ್ದರೆ, ಅದೇ ರೀತಿ ಪಾಟೀದಾರ್ ಅವರ ಕ್ಯಾಚ್ ಕೂಡ ಪಡೆದರು. ಕ್ಯಾಮರೂನ್ ಗ್ರೀನ್ ಅವರ ಸುಲಭ ಕ್ಯಾಚ್ ಕೈಚೆಲ್ಲಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Perth test: ಜೈಸ್ವಾಲ್, ವಿರಾಟ್ ಶತಕ; ಆಸೀಸ್ ಗೆ ಭಾರೀ ಗುರಿ ನೀಡಿದ ಭಾರತ
Rishabh Pant: ಅಪಘಾತದ ವೇಳೆ ನೆರವಾದವರಿಗೆ ಗಿಫ್ಟ್ ನೀಡಿದ ರಿಷಭ್ ಪಂತ್
Perth test: ಜಸ್ಪ್ರೀತ್ ಬುಮ್ರಾ ಬೌಲಿಂಗ್ ಶೈಲಿ ಅನುಮಾನ: ಏನಿದು ವಿವಾದ?
Perth Test: ಜೈಸ್ವಾಲ್ ಶತಕದಾಟ; ರಾಹುಲ್ ಜತೆ ದಾಖಲೆಯ ಜೊತೆಯಾಟ
IPL Auction 2025: ಇಂದು, ನಾಳೆ ಐಪಿಎಲ್ ಬೃಹತ್ ಹರಾಜು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.