ಝಾಕೀರ್ ನಾಯ್ಕನ 16 ಕೋಟಿ ರೂ.ಆಸ್ತಿ ಜಪ್ತಿ
Team Udayavani, Jan 20, 2019, 1:20 AM IST
ಹೊಸದಿಲ್ಲಿ: ಹಣಕಾಸು ಅಕ್ರಮ ಆರೋಪ ಎದುರಿಸುತ್ತಿರುವ ವಿವಾದಾತ್ಮಕ ಇಸ್ಲಾಮಿಕ್ ವಿದ್ವಾಂಸ ಝಾಕೀರ್ ನಾಯ್ಕಗೆ ಸೇರಿದ 16.40 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಹೊಸದಾಗಿ ಜಾರಿ ನಿರ್ದೇಶನಾಲಯ ಮುಟ್ಟುಗೋಲು ಹಾಕಿಕೊಂಡಿದೆ.
ಮುಂಬಯಿ ಮತ್ತು ಪುಣೆಯಲ್ಲಿ ನಾಯ್ಕ ಕುಟುಂಬ ಸದಸ್ಯರು ಹೊಂದಿರುವ ಆಸ್ತಿ ಪಾಸ್ತಿಗಳ ಜಪ್ತಿಗೆ ಆದೇಶ ಹೊರಡಿಸಲಾಗಿದೆ ಎಂದು ಇ.ಡಿ. ತಿಳಿಸಿದೆ. ಮುಂಬಯಿನ ಫಾತಿಮಾ ಹೈಟ್ಸ್, ಆಫಿಯಾ ಹೈಟ್ಸ್, ಪುಣೆಯಲ್ಲಿರುವ ಎನ್ಗೆÅàಷಿಯಾ ಮತ್ತಿತರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.
ಹಣಕಾಸು ಮೂಲದ ಬಗ್ಗೆ ಹಾಗೂ ನೈಜ ಮಾಲಕತ್ವದ ಬಗ್ಗೆ ಮಾಹಿತಿ ಬಚ್ಚಿಡುವ ಉದ್ದೇಶದಿಂದ, ನಾಯ್ಕ ಬ್ಯಾಂಕ್ ಖಾತೆಯಿಂದ ಮಾಡಲಾದ ಪಾವತಿಗಳನ್ನು ರೀಫಂಡ್ ಮಾಡಿ, ಆತನ ಪತ್ನಿ, ಮಗ ಮತ್ತು ಕುಟುಂಬದ ಇತರೆ ಸದಸ್ಯರ ಖಾತೆಗೆ ವರ್ಗಾಯಿಸಲಾಗಿದೆ. ತನಿಖೆ ವೇಳೆ ಈ ವಿಚಾರ ಬಹಿರಂಗವಾದ ಹಿನ್ನೆಲೆಯಲ್ಲಿ ಜಪ್ತಿ ಆದೇಶ ಹೊರಡಿಸಲಾಗಿದೆ. ಈ ಮೂಲಕ ಒಟ್ಟಾರೆ 50.49 ಕೋಟಿ ರೂ. ಮೌಲ್ಯದ ಆಸ್ತಿಗಳನ್ನು ಜಪ್ತಿ ಮಾಡಿದಂತಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.