ಶ್ರೀಶಾಂತ್ ಪ್ರಕಾರ ಕೊಹ್ಲಿ, ರೋಹಿತ್ ಬಿಟ್ಟರೆ ಈತನೇ ಟೀಂ ಇಂಡಿಯಾ ಮುಂದಿನ ನಾಯಕ
Team Udayavani, May 2, 2020, 10:58 AM IST
ಬೆಂಗಳೂರು: ಟೀಂ ಇಂಡಿಯಾದಲ್ಲಿ ವೇಗಿಯಾಗಿ ಮೆರೆದಾಡಿ ನಂತರ ಸ್ಪಾಟ್ ಫಿಕ್ಸಿಂಗ್ ಹಗರಣದಲ್ಲಿ ಸಿಲುಕಿದ್ದ ಕೇರಳದ ಎಸ್ ಶ್ರೀಶಾಂತ್ ಈಗ ಮತ್ತೆ ಸುದ್ದಿಯಲ್ಲಿದ್ದಾರೆ. ತನ್ನ ಹಲೋ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಲೈವ್ ಬಂದಿರುವ ಶ್ರೀಶಾಂತ್ ಹಲವಾರು ವಿಚಾರಗಳನ್ನು ಮಾತನಾಡಿದ್ದಾರೆ.
ಫಿಕ್ಸಿಂಗ್ ಕಳಂಕದಿಂದ ದೂರವಾದ ನಂತರ ಕ್ರಿಕೆಟ್ ಗೆ ಮರಳುವ ಬಗ್ಗೆ ಅಭಿಲಾಶೆ ವ್ಯಕ್ತಪಡಿಸಿದ್ದ ಶ್ರೀಶಾಂತ್. ಈಗಲೂ ಅದರ ಬಗ್ಗೆ ಮಾತನಾಡಿದ್ದಾರೆ. ಕೇರಳ ಕ್ರಿಕೆಟ್ ತಂಡದ ತರಬೇತಿಯಲ್ಲಿ ಭಾಗಿಯಾಗಿದ್ದೇನೆ. ಮುಂದಿನ ರಣಜಿಯಲ್ಲಿ ಕೇರಳ ತಂಡದ ಪರವಾಗಿ ಆಡುವ ವಿಶ್ವಾಸದಲ್ಲಿದ್ದೇನೆ ಎಂದರು.
ನಾನು ಮತ್ತೆ ವೃತ್ತಿಪರ ಕ್ರಿಕೆಟ್ ಗೆ ಮರಳುತ್ತೇನೆ. ಐಪಿಎಲ್ ನಲ್ಲಿ ಬೇಕಾದರೆ ಉಚಿತವಾಗಿ ಆಡಬಲ್ಲೆ. ಇನ್ನೂ ಐದು ವರ್ಷ ಕ್ರಿಕೆಟ್ ಆಡುತ್ತೇನೆ. ಮತ್ತೆ ಟೀಂ ಇಂಡಿಯಾಗೆ ಎಂಟ್ರಿ ಕೊಟ್ಟು ವಿರಾಟ್, ರೋಹಿತ್, ರಾಹುಲ್ ಜೊತೆ ಆಡುತ್ತೇನೆ ಎಂದಿದ್ದಾರೆ.
ಕನ್ನಡಿಗ ಕೆ ಎಲ್ ರಾಹುಲ್ ಬಗ್ಗೆ ಮಾತನಾಡಿದ ಶ್ರೀಶಾಂತ್, ಆತನ ಕ್ರಿಕೆಟ್ ಆಸಕ್ತಿ ಮತ್ತು ಶಿಸ್ತು ನನಗೆ ಇಷ್ಟವಾಗಿದೆ. ವಿರಾ್ ಕೊಹ್ಲಿಯಂತೆ ರಾಹುಲ್ ಗೂ ಆಟದಲ್ಲಿ ಒಂದು ಶಿಸ್ತು ಇದೆ. ವೈಯಕ್ತಿಕ ದಾಖಲೆಗಿಂತ ತಂಡಕ್ಕಾಗಿ ಆಡುವ ಗುಣವಿದೆ. ಕೊಹ್ಲಿ, ರೋಹಿತ್ ನಂತರ ಟೀಂ ಇಂಡಿಯಾ ನಾಯಕನಾಗುವ ಗುಣ ರಾಹುಲ್ ಗೆ ಇದೆ ಎಂದು ಶ್ರೀಶಾಂತ್ ಅಭಿಪ್ರಾಯಪಟ್ಟಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sydney: ಆಸ್ಟ್ರೇಲಿಯಾ ಪ್ರೇಕ್ಷಕರಿಗೆ ಸ್ಯಾಂಡ್‌ಪೇಪರ್ ಕೇಸ್ ನೆನಪು ಮಾಡಿದ ವಿರಾಟ್|Video
World Test Championship: ಭಾರತದ ಕನಸು ಛಿದ್ರ; ಆಸೀಸ್ ಫೈನಲ್ ಸ್ಥಾನ ಭದ್ರ
INDvAUS: ಸಿಡ್ನಿಯಲ್ಲಿ ಸೋಲು; ದಶಕದ ಬಳಿಕ ಬಾರ್ಡರ್ ಗಾವಸ್ಕರ್ ಟ್ರೋಫಿ ಸೋತ ಭಾರತ
Vijay Hazare: ಕರ್ನಾಟಕಕ್ಕೆ ಇಂದು ನಾಗಾಲ್ಯಾಂಡ್ ಎದುರಾಳಿ
Australian Open: ಗಾಯಾಳಾಗಿ ಹೊರಬಿದ್ದ ಡಿಮಿಟ್ರೋವ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.