SA vs Ind ಇಂದು ಸರಣಿ ನಿರ್ಣಾಯಕ ಪಂದ್ಯ: ಭಾರತಕ್ಕೆ ಅಗ್ರ ಕ್ರಮಾಂಕದ ಸಮಸ್ಯೆ
Team Udayavani, Dec 21, 2023, 6:15 AM IST
ಪಾರ್ಲ್: ದಕ್ಷಿಣ ಆಫ್ರಿಕಾ ವಿರುದ್ಧದ ದ್ವಿತೀಯ ಪಂದ್ಯದಲ್ಲಿ ಸಾಮಾನ್ಯ ಮಟ್ಟದ ಬ್ಯಾಟಿಂಗ್ ಪ್ರದರ್ಶಿಸಿ ಎಡವಿದ ಭಾರತ ತಂಡ, ಗುರುವಾರ ಪಾರ್ಲ್ನಲ್ಲಿ ಎದ್ದು ನಿಂತು ಸರಣಿ ಗೆಲ್ಲಬೇಕಾದ ಒತ್ತಡಕ್ಕೆ ಸಿಲುಕಿದೆ. ಇದಕ್ಕೆ ಅಗ್ರ ಕ್ರಮಾಂಕದ ಬ್ಯಾಟಿಂಗ್ ಸಮಸ್ಯೆಯನ್ನು ಮೊದಲು ನಿವಾರಿಸಿಕೊಳ್ಳಬೇಕಿದೆ.
ಗಾಯಕ್ವಾಡ್ ಎರಡೂ ಪಂದ್ಯಗಳಲ್ಲಿ ಮುಗ್ಗರಿಸಿರುವುದು ಚಿಂತೆಯ ಸಂಗತಿಯಾಗಿದೆ. ಇವರ ಗಳಿಕೆ 5 ಮತ್ತು 4 ರನ್ ಮಾತ್ರ. ಹೀಗಾಗಿ ಮೊದಲ ವಿಕೆಟಿಗೆ ಭಾರತದಿಂದ ಗಳಿಸಲು ಸಾಧ್ಯವಾದದ್ದು ಕೇವಲ 23 ಮತ್ತು 4 ರನ್. ಇದರಿಂದ ಮಧ್ಯಮ ಕ್ರಮಾಂಕದ ಮೇಲೆ ಹೆಚ್ಚಿನ ಒತ್ತಡ ಬೀಳುತ್ತದೆ. ಆದರೆ ಇದೇ ಸರಣಿಯಲ್ಲಿ ಪದಾರ್ಪಣೆ ಮಾಡಿದ ಸಾಯಿ ಸುದರ್ಶನ್ ಸತತ 2 ಅರ್ಧಶತಕಗಳೊಂದಿಗೆ ಮೆರೆದದ್ದು ಶುಭಸಮಾಚಾರ. ಕ್ರಮವಾಗಿ 55 ಹಾಗೂ 62 ರನ್ ಬಾರಿಸಿ ಲಭಿಸಿದ ಅವಕಾಶ ವನ್ನು ಚೆನ್ನಾಗಿ ಬಳಸಿಕೊಂಡಿದ್ದಾರೆ.
ಭಾರತಕ್ಕೆ ಹೋಲಿಸಿದರೆ ದಕ್ಷಿಣ ಆಫ್ರಿಕಾದ ಓಪನಿಂಗ್ ಬಹಳ ಮೇಲ್ಮಟ್ಟ ದಲ್ಲಿದೆ. ದ್ವಿತೀಯ ಪಂದ್ಯದ ಚೇಸಿಂಗ್ ವೇಳೆ ಟೋನಿ ಡಿ ಝೋರ್ಜಿ ಚೊಚ್ಚಲ ಶತಕ (ಅಜೇಯ 119) ಮತ್ತು ರೀಝ ಹೆಂಡ್ರಿಕ್ಸ್ ಅರ್ಧ ಶತಕ (52) ಬಾರಿಸುವಲ್ಲಿ ಯಶಸ್ವಿಯಾಗಿದ್ದರು. ಈ ಜೋಡಿಯಿಂದ ಮೊದಲ ವಿಕೆಟಿಗೆ 27.5 ಓವರ್‌ಗಳಿಂದ 130 ರನ್ ಒಟ್ಟುಗೂಡಿತ್ತು.
ಇದು ಭಾರತದ ಬೌಲಿಂಗ್ ವೈಫಲ್ಯ ದತ್ತಲೂ ಬೆಟ್ಟು ಮಾಡಿದೆ. ಮೊದಲ ಏಕದಿನದಲ್ಲಿ ದಕ್ಷಿಣ ಆಫ್ರಿಕಾವನ್ನು ಅಲ್ಪ ಮೊತ್ತಕ್ಕೆ ಕೆಡವಿದ ಭಾರತ, ಮಂಗಳವಾರ ಇದೇ ಲಯವನ್ನು ಉಳಿಸಿಕೊಳ್ಳಲು ವಿಫಲವಾಯಿತು. ಅರ್ಷದೀಪ್ ಮತ್ತು ಆವೇಶ್ ಖಾನ್ ರನ್ ನಿಯಂತ್ರಿಸಿದರೂ ಹರಿಣಗಳನ್ನು ಪೆವಿಲಿಯನ್ನಿಗೆ ಅಟ್ಟುವ ಪ್ರಯತ್ನದಲ್ಲಿ ಯಶಸ್ಸು ಕಾಣಲಿಲ್ಲ. 42.3 ಓವರ್‌ಗಳಲ್ಲಿ ಎರಡೇ ವಿಕೆಟಿಗೆ 215 ರನ್ ಬಾರಿಸಿದ ದಕ್ಷಿಣ ಆಫ್ರಿಕಾ ಸರಣಿಗೆ ಮರಳಿದ್ದು ಯಂಗ್ ಇಂಡಿಯಾ ಪಾಲಿಗೊಂದು ಎಚ್ಚರಿಕೆಯ ಗಂಟೆ.
ಆರಂಭ: ಸಂಜೆ 4.30
ಪ್ರಸಾರ: ಸ್ಟಾರ್ ಸ್ಪೋರ್ಟ್ಸ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
WTC 25; ಕಠಿಣವಾಯ್ತು ಭಾರತದ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಹಾದಿ; ಹೀಗಿದೆ ಲೆಕ್ಕಾಚಾರ
R.Ashwin retirement: ಅಶ್ವಿನ್ ವಿದಾಯದ ಸುತ್ತಮುತ್ತ…
Shaw left out; ಓ ದೇವರೇ, ನಾನು ಇನ್ನೇನೆಲ್ಲ ನೋಡಬೇಕು..; ಪೃಥ್ವಿ ಶಾ ನೋವು
Ravichandran Ashwin: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಆರ್.ಅಶ್ವಿನ್
Brisbane Test; ವರುಣನ ಅಡ್ಡಿ: ಕೂತೂಹಲ ಮೂಡಿಸಿದ್ದ ಪಂದ್ಯ ಡ್ರಾದಲ್ಲಿ ಅಂತ್ಯ
MUST WATCH
ಹೊಸ ಸೇರ್ಪಡೆ
Mogilaiah: ಪದ್ಮಶ್ರೀ ಪುರಸ್ಕೃತ, ಜಾನಪದ ಕಲಾವಿದ ಬಳಗಂ ಚಿತ್ರ ಖ್ಯಾತಿಯ ಮೊಗಿಲಯ್ಯ ನಿಧನ
Bantwala: ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಟೆಂಪೋ ಟ್ರಾವೆಲ್
Betting App; ಬಾಲಿವುಡ್ ನಟಿಯರು ಪ್ರಚಾರ ಮಾಡಿದ್ದ ಬೆಟ್ಟಿಂಗ್ ಆ್ಯಪ್ ಮಾಲಕ ಪಾಕಿಸ್ತಾನಿ!
Dharwad: ಜಿಲ್ಲಾಧಿಕಾರಿ ಕಚೇರಿಯಲ್ಲಿ ಬ್ಯಾಟರಿ ಕಳ್ಳತನ
K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.