ಟಾಮಿ ಬೇಮಂಟ್ ಇಲೆವೆನ್‌ನಲ್ಲಿ ಸಚಿನ್ ತೆಂಡುಲ್ಕರ್‌ಗೆ ಜಾಗವಿಲ್ಲ!
Team Udayavani, Mar 3, 2018, 6:05 AM IST
ಲಂಡನ್: ಇಂಗ್ಲೆಂಡಿನ ಕ್ರಿಕೆಟ್ ಆಟಗಾರ್ತಿ ಟಾಮಿ ಬೇಮಂಟ್ ಪುರುಷರ ಸಾರ್ವಕಾಲಿಕ ಶ್ರೇಷ್ಠ ಟೆಸ್ಟ್ ಕ್ರಿಕೆಟ್ ತಂಡವೊಂದನ್ನು ಪ್ರಕಟಿಸಿದ್ದು, ಇದರಲ್ಲಿ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಸ್ಥಾನ ಸಂಪಾದಿಸಿಲ್ಲ! ಅಷ್ಟೇ ಅಲ್ಲ, ಶೇನ್ ವಾರ್ನ್, ರಾಹುಲ್ ದ್ರಾವಿಡ್, ಸುನೀಲ್ ಗಾವಸ್ಕರ್, ರಿಕಿ ಪಾಂಟಿಂಗ್ ಮೊದಲಾದ ಮಹಾನ್ ಕ್ರಿಕೆಟಿಗರೂ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದಾರೆ.
ಇವರ ಬದಲು ಜಸ್ಟಿನ್ ಲ್ಯಾಂಗರ್, ಡ್ಯಾರನ್ ಗೌ ಮೊದಲಾದ ಸಾಮಾನ್ಯ ಆಟಗಾರರು ಕಾಣಿಸಿಕೊಂಡಿದ್ದಾರೆ. ಇದನ್ನು ಗಮನಿಸಿದಾಗ ಟಾಮಿ ಬೇಮಂಟ್ ಅವರ ಕ್ರಿಕೆಟ್ ಜ್ಞಾನದ ಬಗ್ಗೆ ಸಂಶಯ ಮೂಡುತ್ತದೆ ಎಂಬ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬೇಮಂಟ್ ಇಲೆವೆನ್‌ನಲ್ಲಿರುವ ಗತಕಾಲದ ಪ್ರಮುಖ ಕ್ರಿಕೆಟಿಗನೆಂದರೆ ಗ್ಯಾರಿ ಸೋಬರ್ ಮಾತ್ರ. ಅವರು ಈ ತಂಡದ ನಾಯಕರಾಗಿದ್ದಾರೆ.
26ರ ಹರೆಯದ ಟಾಮಿ ಬೇಮಂಟ್ ಕಳೆದ ವರ್ಷದ ವನಿತಾ ಏಕದಿನ ವಿಶ್ವಕಪ್ ಪಂದ್ಯಾವಳಿಯ ಸರಣಿಶ್ರೇಷ್ಠ ಆಟಗಾರ್ತಿಯಾಗಿ ಮೂಡಿಬಂದಿದ್ದರು. ಕೂಟದಲ್ಲೇ ಸರ್ವಾಧಿಕ 410 ರನ್ ಬಾರಿಸಿ ಸರಣಿಶ್ರೇಷ್ಠ ಗೌರವಕ್ಕೆ ಪಾತ್ರರಾಗಿದ್ದರು. ಭಾರತದೆದುರಿನ ಫೈನಲ್ ಪಂದ್ಯವನ್ನು ಗೆದ್ದ ಇಂಗ್ಲೆಂಡ್ ಚಾಂಪಿಯನ್ ಆಗಿ ಮೂಡಿಬಂದಿತ್ತು.
ಬೇಮಂಟ್ ಟೆಸ್ಟ್ ಇಲೆವೆನ್: ಅಲಸ್ಟೇರ್ ಕುಕ್, ಜಸ್ಟಿನ್ ಲ್ಯಾಂಗರ್, ಬ್ರಿಯಾನ್ ಲಾರಾ, ಕುಮಾರ ಸಂಗಕ್ಕರ, ಜಾಕ್ ಕ್ಯಾಲಿಸ್, ಸರ್ ಗ್ಯಾರಿ ಸೋಬರ್ (ನಾಯಕ), ಆ್ಯಡಂ ಗಿಲ್‌ಕ್ರಿಸ್ಟ್ (ವಿ.ಕೀ.), ಡ್ಯಾರನ್ ಗೌ, ವಾಸಿಮ್ ಅಕ್ರಂ, ಜೇಮ್ಸ್ ಆ್ಯಂಡರ್ಸನ್, ಮುತ್ತಯ್ಯ ಮುರಳೀಧರನ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kambala ಋತುವಿನ ಪ್ರಥಮ ಕಂಬಳ; ಕೊಡಂಗೆ ವೀರ-ವಿಕ್ರಮ ಜೋಡುಕರೆ ಬಯಲು ಕಂಬಳಕ್ಕೆ ಚಾಲನೆ
Wayanad Results 2024:ವಯನಾಡ್ ನಲ್ಲಿ ಪ್ರಿಯಾಂಕಾಗೆ 3.68 ಲಕ್ಷಕ್ಕೂ ಅಧಿಕ ಮತಗಳ ಮುನ್ನಡೆ!
Video: ವಿದ್ಯಾರ್ಥಿಯಿಂದ ಕಾಲು ಒತ್ತಲು ಹೇಳಿ ಶಾಲೆಯಲ್ಲೇ ವಿಶ್ರಾಂತಿಗೆ ಜಾರಿದ ಶಿಕ್ಷಕ
Sandur Result: ಭದ್ರಕೋಟೆಯಲ್ಲಿ ಮತ್ತೆ ಗೆದ್ದ ಕಾಂಗ್ರೆಸ್: ಇಲ್ಲಿದೆ ಮತಎಣಿಕೆಯ ಪೂರ್ಣವಿವರ
Bengaluru: ಠಾಣೆಯಲ್ಲಿ ಪೊಲೀಸ್ ಸಿಬ್ಬಂದಿ ನಡುವೆ ಜಗಳ: ವಿಡಿಯೋ ವೈರಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.