ರಾಜ್ಯಸಭೆಯಲ್ಲಿ ತೆಂಡುಲ್ಕರ್‌ಭಾಷಣ!
Team Udayavani, Dec 21, 2017, 8:38 AM IST
ಹೊಸದಿಲ್ಲಿ: ಕ್ರಿಕೆಟ್ ದೇವರು ಎಂದೇ ಕರೆಸಿಕೊಳ್ಳುವ ಸಚಿನ್ ತೆಂಡುಲ್ಕರ್ ರಾಜ್ಯಸಭೆಯಲ್ಲಿ ಮಾತ್ರ ಕಳಪೆ ಪ್ರದರ್ಶನ ತೋರಿದ್ದಾರೆ. ರಾಜ್ಯಸಭೆಯ ಇತಿಹಾಸದಲ್ಲೇ ಕಳಪೆ ಪ್ರದರ್ಶನ ನೀಡಿದವರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಅಂತಹ ತೆಂಡುಲ್ಕರ್ ತಮ್ಮ ಅವಧಿ ಮುಗಿಯುವುದಕ್ಕೆ ಇನ್ನು ಕೇವಲ 1 ವರ್ಷವಿರುವಾಗ ಮಾತನಾಡಲು ತೀರ್ಮಾನಿಸಿದ್ದಾರೆ. ಗುರುವಾರ ಮಧ್ಯಾಹ್ನ 2 ಗಂಟೆಗೆ ಭಾರತ ಕ್ರೀಡೆಯ ಸ್ಥಿತಿಗತಿಗಳ ಬಗ್ಗೆ ಮಾತನಾಡಲಿದ್ದಾರೆ. ಇದು ರಾಜ್ಯಸಭೆಯಲ್ಲಿ ಅವರು ಮಾಡುತ್ತಿರುವ ಮೊದಲ ಭಾಷಣ!
2012ರಲ್ಲಿ ರಾಜ್ಯಸಭೆಗೆ ಆಯ್ಕೆಯಾಗಿದ್ದ ಅವರು ಒಟ್ಟು 348 ದಿನಗಳ ಅವಧಿಯಲ್ಲಿ ಕೇವಲ 23 ದಿನ (ಎಪ್ರಿಲ್ ಹೊತ್ತಿಗೆ) ಕಲಾಪಗಳಿಗೆ ಹಾಜರಾಗಿದ್ದರು. ಆದ್ದರಿಂದ ಬಹಿರಂಗ ಟೀಕೆಗೆ ಕಾರಣವಾಗಿದ್ದರು. ಸಮಾಜವಾದಿ ಪಕ್ಷದ ನಾಯಕ ನರೇಶ್ ಅಗರ್ವಾಲ್ ಇದನ್ನು ಪ್ರಶ್ನಿಸಿದ್ದರು. ಸಂವಿಧಾನದ ಸಂಸತ್ ನಿಯಮಗಳ ಪ್ರಕಾರ, 60 ದಿನಗಳಿಗೂ ಹೆಚ್ಚು ಕಾಲ ಒಬ್ಬ ಸದಸ್ಯ ಸಂಸತ್‌ಗೆ ಗೈರಾದರೆ ಆ ಸ್ಥಾನ ಖಾಲಿಯಿದೆ ಎಂದು ತೀರ್ಮಾನಿಸಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Udupi: ಶ್ರೀಕೃಷ್ಣ ಮಠ: ಗೀತೋತ್ಸವಕ್ಕೆ ಪರ್ತಗಾಳಿ ಶ್ರೀಗಳಿಗೆ ಆಹ್ವಾನ
Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ
Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ
Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಿತ್ತೂರು ಪ್ರಭಾಕರ ಆಚಾರ್ಯರಿಗೆ ಗೌರವಾರ್ಪಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.