ಸ್ಯಾಫ್ ಫುಟ್ಬಾಲ್: ಮಾಲ್ಡೀವ್ಸ್ಗೆ ಪ್ರಶಸ್ತಿ
Team Udayavani, Sep 16, 2018, 12:23 PM IST
ಢಾಕಾ: ರೋಚಕ ಫೈನಲ್ ಸೆಣಸಾಟದಲ್ಲಿ ಭಾರತವನ್ನು 2-1 ಗೋಲುಗಳಿಂದ ಸೋಲಿಸಿದ ಮಾಲ್ಡೀವ್ಸ್ ತಂಡ ಸ್ಯಾಫ್ ಕಪ್ ಫುಟ್ಬಾಲ್ ಕೂಟದ ಚಾಂಪಿಯನ್ ಪಟ್ಟ ಅಲಂಕರಿಸಿತು. ಒಟ್ಟಾರೆ 2ನೇ ಬಾರಿಗೆ ಮಾಲ್ಡೀವ್ಸ್ ಸ್ಯಾಫ್ ಕಪ್ನ ಮೇಲೆ ಹಿಡಿತ ಸಾಧಿಸಿತು ಎನ್ನುವುದು ವಿಶೇಷ.
ಮಾಲ್ಡೀವ್ಸ್ ಪರ ಇಬ್ರಾಹಿಂ ಹುಸೇನ್ (19ನೇ ನಿಮಿಷ), ಅಲಿ ಫಝಿರ್ (66ನೇ ನಿಮಿಷ) ಗೋಲು ಸಿಡಿಸಿದರೆ ತಾರಾ ಆಟಗಾರ ಸುನೀಲ್ ಚೆಟ್ರಿ ಅನುಪಸ್ಥಿತಿಯಲ್ಲಿ ಕಣಕ್ಕಿಳಿದಿದ್ದ ಭಾರತದ ಪರ 90 ಪ್ಲಸ್ 2ನೇ ನಿಮಿಷದಲ್ಲಿ ಪಾಸಿ ಗೋಲು ಸಿಡಿಸಿದರು.
ಮಾಲ್ಡೀವ್ಸ್ಗೆ 2ನೇ ಪ್ರಶಸ್ತಿ
2008ರಲ್ಲಿ ಮಾಲ್ಡೀವ್ಸ್ 1-0 ಗೋಲುಗಳಿಂದ ಫೈನಲ್ನಲ್ಲಿ ಭಾರತವನ್ನು ಸೋಲಿಸಿ ಮೊದಲ ಬಾರಿಗೆ ಸ್ಯಾಫ್ ಕಪ್ ಟ್ರೋಫಿ ಗೆದ್ದಿತ್ತು. ಇದಕ್ಕೂ ಮೊದಲು 1997ರಲ್ಲಿ ಫೈನಲ್ ಪ್ರವೇಶಿಸಿ 5-1ರಿಂದ ಭಾರತ ವಿರುದ್ಧ ಸೋತು ಟ್ರೋಫಿ ಕಳೆದುಕೊಂಡಿತ್ತು. ಇದಾದ ಬಳಿಕ 2003ರಲ್ಲೂ ಫೈನಲ್ ಪ್ರವೇಶಿಸಿದ್ದ ಮಾಲ್ಡೀವ್ಸ್ ಬಾಂಗ್ಲಾದೇಶ ವಿರುದ್ಧ ಪೆನಾಲ್ಟಿ ಶೂಟೌಟ್ನಲ್ಲಿ 5-3 ಅಂತರದಿಂದ ಸೋತಿತ್ತು. 2008ರಲ್ಲಿ ಮಾಲ್ಡೀವ್ಸ್ ಕೊನೆಗೂ ಟ್ರೋಫಿ ಗೆದ್ದು ಕನಸು ನನಸು ಮಾಡಿಕೊಂಡಿತ್ತು. 2009ರಲ್ಲಿ ಮಾಲ್ಡೀವ್ಸ್ ಫೈನಲ್ ಪ್ರವೇಶಿಸಿತ್ತಾದರೂ ಭಾರತದ ವಿರುದ್ಧ 3-1 ಪೆನಾಲ್ಟಿ ಶೂಟೌಟ್ನಲ್ಲಿ ಸೋಲು ಕಂಡು ನಿರಾಸೆ ಅನುಭವಿಸಿತ್ತು.
ಭಾರತ ಇಷ್ಟರವರೆಗೆ 7 ಬಾರಿ ಈ ಪ್ರಶಸ್ತಿ ಜಯಿಸಿದೆ.ಉತ್ತಮ ರೀತಿಯಲ್ಲಿ ಆಟ ಆರಂಭಿಸಿದ್ದ ಭಾರತ ಪ್ರತಿ ದಾಳಿ ಸಂಘಟಿಸಿ ಗೋಲು ಹೊಡೆಯುವ ಕೆಲವು ಪ್ರಯತ್ನ ನಡೆಸಿತ್ತು. ಆದರೆ ಮಾಲ್ಡೀವ್ಸ್ ತಂಡದ ರಕ್ಷಣಾತ್ಮಕ ಆಟದಿಂದಾಗಿ ಭಾರತ ತಂಡದ ದಾಖಲೆ ಎಂಟನೇ ಬಾರಿ ಸ್ಯಾಫ್ ಪ್ರಶಸ್ತಿ ಗೆಲ್ಲುವ ಕನಸು ನುಚ್ಚುನೂರಾಯಿತು. ಮಾಲ್ಡೀವ್ಸ್ ಮೊದಲು ಗೋಲು ಹೊಡೆದ ಬಳಿಕ ಭಾರತ ಸಮಬಲಕ್ಕೆ ತೀವ್ರ ಪ್ರಯತ್ನ ನಡೆಸಿತ್ತು. ಆದರೆ ತಂಡದ ಆಕ್ರಮಣಕಾರಿ ಆಟಗಾರರು ಗೋಲು ಹೊಡೆಯಲು ವಿಫಲರಾದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL: ಇನ್ನು ಮೂರು ಸೀಸನ್ ಐಪಿಎಲ್ ಗೆ ಈ ದೇಶಗಳ ಆಟಗಾರರು ಸಂಪೂರ್ಣ ಲಭ್ಯ
BGT 2024: ಬುಮ್ರಾ ಬೆಂಕಿ ದಾಳಿಗೆ ನಲುಗಿದ ಆಸೀಸ್: ಭಾರತದ ಹಿಡಿತದಲ್ಲಿ ಪರ್ತ್ ಟೆಸ್ಟ್
FIP Padel: ಭಾರತದ ಮೊದಲ ಎಫ್ಐಪಿ ಪ್ಯಾಡಲ್ ಟೂರ್ನಮೆಂಟ್ ಆರಂಭ
BGT 24: ಕೆಎಲ್ ರಾಹುಲ್ ಔಟ್ ಅಥವಾ ನಾಟೌಟ್: ಏನಿದು ವಿವಾದ? ಇಲ್ಲಿದೆ ಅಂಪೈರ್ ಉತ್ತರ
IPL 2025-27: ಮುಂದಿನ ಮೂರು ಐಪಿಎಲ್ ಸೀಸನ್ ನ ದಿನಾಂಕ ಪ್ರಕಟಿಸಿದ ಬಿಸಿಸಿಐ
MUST WATCH
ಹೊಸ ಸೇರ್ಪಡೆ
Karnataka HC; ನಾಲ್ಕನೇ ಪ್ರಕರಣದಲ್ಲೂ ಪ್ರಜ್ವಲ್ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾ
Sagara: ಟ್ರಾಫಿಕ್ ಜಾಮ್ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು
Siruguppa: ತೆಕ್ಕಲಕೋಟೆಯಲ್ಲಿ ಅಕ್ರಮ ಪಡಿತರ ಅಕ್ಕಿ ವಶ
Mangaluru Airport; ಕೆ 9 ಹೀರೋ ಜಾಕ್ ಇನ್ನಿಲ್ಲ: ಭಾವನಾತ್ಮಕ ವಿದಾಯ
Kottigehara: ಅಪಘಾತದಿಂದ ಗಾಯಗೊಂಡ ನಾಗರಹಾವಿಗೆ ಚಿಕಿತ್ಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.