![DKSHi-4](https://www.udayavani.com/wp-content/uploads/2025/02/DKSHi-4-415x234.jpg)
![DKSHi-4](https://www.udayavani.com/wp-content/uploads/2025/02/DKSHi-4-415x234.jpg)
Team Udayavani, Sep 28, 2019, 10:31 AM IST
ಹೊಸದಿಲ್ಲಿ: ಸಿಕ್ಕಿದ ಅವಕಾಶಗಳನ್ನು ಕೈಚೆಲ್ಲುತ್ತಿರುವ, ಗಂಭೀರ ಕ್ರಿಕೆಟ್ ಪ್ರದರ್ಶನ ನೀಡುವಲ್ಲಿ ಎಡವುತ್ತಿರುವ ಯುವ ವಿಕೆಟ್ ಕೀಪರ್ ರಿಷಭ್ ಪಂತ್ ಅವರನ್ನು ಪ್ರವಾಸಿ ದಕ್ಷಿಣ ಆಫ್ರಿಕಾ ಎದುರಿನ ಮೊದಲ ಟೆಸ್ಟ್ ಪಂದ್ಯದಿಂದ ಹೊರಗಿಡಲಾಗುವುದೇ? ಮತ್ತೆ ವೃದ್ಧಿಮಾನ್ ಸಾಹಾ ಕೀಪಿಂಗ್ ನಡೆಸುವರೇ? ಇಂಥದೊಂದು ಸುದ್ದಿ ಭಾರತದ ಕ್ರಿಕೆಟ್ ಚಾವಡಿಯಲ್ಲಿ ಹರಿದಾಡುತ್ತಿದೆ.
ಭಾರೀ ಭರವಸೆಯೊಂದಿಗೆ “ಧೋನಿ ಉತ್ತರಾಧಿಕಾರಿ’ ಎಂಬ ಹೆಗ್ಗಳಿಕೆಯೊಂದಿಗೆ ಟೀಮ್ ಇಂಡಿಯಾ ಪ್ರವೇಶಿಸಿದ 21ರ ಹರೆಯದ ರಿಷಭ್ ಪಂತ್, ಮೊದಲ ಆಯ್ಕೆಯ ಕೀಪರ್ ಆಗಿಯೇ ಗುರುತಿಸಿಕೊಂಡಿದ್ದರು. ಆದರೆ ಅವರು ಆಯ್ಕೆಗಾರರು ಇರಿಸಿದ ನಂಬಿಕೆಯನ್ನು ನಿಧಾನವಾಗಿ ಕಳೆದುಕೊಳ್ಳುತ್ತಿದ್ದಾರೆ ಎಂಬುದಕ್ಕೆ ಇತ್ತೀಚಿನ ನಿರ್ವಹಣೆಯೇ ಸಾಕ್ಷಿ.
ವೆಸ್ಟ್ ಇಂಡೀಸ್ ಪ್ರವಾಸ ಹಾಗೂ ದಕ್ಷಿಣ ಆಫ್ರಿಕಾ ಎದುರಿನ ತವರಿನ ಟಿ20 ಸರಣಿಯಲ್ಲಿ ಪಂತ್ ಬ್ಯಾಟಿಂಗ್ ಹಾಗೂ ಕೀಪಿಂಗ್ ವಿಭಾಗಗಳೆರಡರಲ್ಲೂ ವಿಫಲರಾಗಿದ್ದರು. ತಾಳ್ಮೆ, ಏಕಾಗ್ರತೆಯ ಕೊರತೆ ಜತೆಗೆ “ಸಿಲ್ಲಿ’ಯಾಗಿ ವಿಕೆಟ್ ಕೈಚೆಲ್ಲುವುದು ಪಂತ್ ಮೇಲಿರುವ ದೊಡ್ಡ ಆರೋಪ. ಹರಿಣಗಳೆದುರಿನ 2 ಟಿ20 ಪಂದ್ಯಗಳಲ್ಲಿ ಪಂತ್ ಗಳಿಸಿದ್ದು 4 ಮತ್ತು 19 ರನ್ ಮಾತ್ರ.
ಒಂದು ಮೂಲದ ಪ್ರಕಾರ, ಮೊದಲ ಟೆಸ್ಟ್ ಪಂದ್ಯದಲ್ಲಿ ಆಡಿಸುವ ಮೂಲಕ ರಿಷಭ್ ಪಂತ್‌ಗೆ ಅಂತಿಮ ಅವಕಾಶ ನೀಡಬೇಕೆನ್ನುವುದೊಂದು ಯೋಜನೆ. ಆದರೆ ತಂಡದ ಆಡಳಿತ ಮಂಡಳಿ, ಸಾಹಾ ಅವರನ್ನು ಸರಣಿಯ ಆರಂಭದಿಂದಲೇ ಆಡಿಸುವ ಇರಾದೆ ಹೊಂದಿದೆ.
ವಿಂಡೀಸ್ ಪ್ರವಾಸದ ಜತೆಗೆ ತವರಿನ ಸರಣಿಯಲ್ಲೂ ಪಂತ್ ವೈಫಲ್ಯ
ಕೀಪಿಂಗ್‌ನಲ್ಲೂ ಪಂತ್ ಫೇಲ್
“ಪಂತ್ ಬ್ಯಾಟಿಂಗ್‌ನಲ್ಲಿ ವಿಫಲರಾಗುತ್ತಿದ್ದಾರೆ ಎಂಬುದನ್ನು ಹೇಗೂ ಸಹಿಸಿಕೊಳ್ಳಬಹುದು. ಆದರೆ ಪ್ರಮುಖ ಹೊಣೆಗಾರಿಕೆಯಾದ ಕೀಪಿಂಗ್‌ನಲ್ಲೂ ಅವರು ಯಶಸ್ಸು ಕಾಣದಿರುವುದನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ಭಾರತದ ಟರ್ನಿಂಗ್ ಟ್ರ್ಯಾಕ್‌ಗಳಲ್ಲೇ ಪಂತ್ ಪರದಾಡುತ್ತಿದ್ದಾರೆ. ಡಿಆರ್‌ಎಸ್ ರಿವ್ಯೂಗಳೂ ಪರಿಣಾಮಕಾರಿ ಯಾಗಿಲ್ಲ.ಇವರಿಗಿಂತ ಸಾಹಾ ಅವರೇ ಎಷ್ಟೋ ಉತ್ತಮ ಕೀಪರ್. ಕೆಳ ಕ್ರಮಾಂಕದಲ್ಲಿ ಉಪಯುಕ್ತ ರನ್ ಕೂಡ ಗಳಿಸುತ್ತಾರೆ…’ ಎಂಬುದು ಬಿಸಿಸಿಐ ಅಧಿಕಾರಿಯೊಬ್ಬರ ಹೇಳಿಕೆ. ಈ ಬೆಳವಣಿಗೆಯನ್ನೆಲ್ಲ ಗಮನಿ ಸುವಾಗ ರಿಷಭ್ ಪಂತ್ ಅವರನ್ನು ಕೇವಲ ಸೀಮಿತ ಓವರ್‌ಗಳ ಪಂದ್ಯಗಳಲ್ಲಷ್ಟೇ ಆಡಿಸುವ ಸಾಧ್ಯತೆಯೊಂದು ಕಂಡುಬರುತ್ತದೆ. ಅವರದು ಹೊಡಿ-ಬಡಿ ಬ್ಯಾಟಿಂಗ್ ಶೈಲಿ ಆಗಿರುವುದೂ ಇದಕ್ಕೊಂದು ಕಾರಣ.
ಬ್ಯಾಟಿಂಗ್ ಜತೆಗೆ ಕೀಪಿಂಗ್‌ನಲ್ಲೂ ಸಾಮಾನ್ಯ ಮಟ್ಟದ ನಿರ್ವಹಣೆ
ಮಾಜಿಗಳಿಂದ ಎಚ್ಚರಿಕೆ, ಮಾರ್ಗದರ್ಶನ
ರಿಷಭ್ ಪಂತ್ ಅಂತಾರಾಷ್ಟ್ರೀಯ ಕ್ರಿಕೆಟನ್ನು ಹೆಚ್ಚು ಗಂಭೀರವಾಗಿ ತೆಗೆದುಕೊಳ್ಳಬೇಕು, ಬದ್ಧತೆ ಪ್ರದರ್ಶಿಸಬೇಕು ಎಂದು ಮಾಜಿ ಕ್ರಿಕೆಟಿಗರನೇಕರು ಸಲಹೆ ನೀಡಿದ್ದನ್ನು, ಎಚ್ಚರಿಕೆ ಕೊಟ್ಟಿದ್ದನ್ನು ಇಲ್ಲಿ ಉಲ್ಲೇಖೀಸಬೇಕಾಗುತ್ತದೆ. ಮುಖ್ಯವಾಗಿ, ದಿಲ್ಲಿಯವರೇ ಆದ ಮಾಜಿ ಆರಂಭಕಾರ ಸೆಹವಾಗ್ ತಮ್ಮದೇ ಉದಾಹರಣೆ ನೀಡಿ ಪಂತ್‌ಗೆ ಬೆಂಬಲ ನೀಡಿದ್ದಾರೆ.
“ನಾನು ಕೂಡ ಭಾರತ ತಂಡವನ್ನು ಪ್ರವೇಶಿಸಿದ ಆರಂಭದ ದಿನಗಳಲ್ಲಿ ಇದೇ ರೀತಿ ಆಡಿ ವಿಕೆಟ್ ಕೈಚೆಲ್ಲುತ್ತಿದ್ದೆ. ಧೋನಿ ಕೂಡ ಆರಂಭಿಕ ದಿನಗಳಲ್ಲಿ ನಿರೀಕ್ಷಿತ ಯಶಸ್ಸು ಕಂಡವರಲ್ಲ. ಪಳಗಿದ ಬಳಿಕವಷ್ಟೇ ಅವರು ಬೆಸ್ಟ್ ಫಿನಿಶರ್ ಎನಿಸಿಕೊಂಡರು. ನಾನು ಸ್ಫೋಟಕ ಆಟಕ್ಕೆ ಕುದುರಿಕೊಂಡೆ. ಆದ್ದರಿಂದ ಪಂತ್ ಅವರಿಗೆ ಇನ್ನಷ್ಟು ಅವಕಾಶ ನೀಡಬೇಕು ಹಾಗೂ ಅವರು ಇದರ ಪ್ರಯೋಜನ ಎತ್ತಬೇಕು’ ಎಂದಿದ್ದಾರೆ ಸೆಹವಾಗ್.
ಸುನೀಲ್ ಗಾವಸ್ಕರ್ ಕೂಡ ಪಂತ್ ಪರ ಬ್ಯಾಟ್ ಬೀಸಿದ್ದಾರೆ. ಹುಡುಗಾಟಿಕೆ ಬಿಟ್ಟು ಗಂಭೀರವಾಗಿ ಆಡಬೇಕು ಎಂದು ಪಂತ್‌ಗೆ ಎಚ್ಚರಿಕೆ ನೀಡಿದವರಲ್ಲಿ ಕೋಚ್ ರವಿಶಾಸ್ತ್ರೀ ಪ್ರಮುಖರು. ಜತೆಗೆ ಪಂತ್ ವಿಶ್ವ ದರ್ಜೆಯ ಆಟಗಾರ ಎಂದೂ ಸರ್ಟಿಫಿಕೇಟ್ ಕೊಟ್ಟಿದ್ದಾರೆ.
Team India: ಪಂತ್-ರಾಹುಲ್ ವಿಚಾರದಲ್ಲಿ ಗಂಭೀರ್- ಅಗರ್ಕರ್ ನಡುವೆ ಭಿನ್ನಾಭಿಪ್ರಾಯ
IPL 2025: ಮತ್ತೊಬ್ಬ ಅಫ್ಘಾನಿ ಬೌಲರ್ ಬದಲು ಮುಂಬೈ ಇಂಡಿಯನ್ಸ್ ತಂಡದ ಸೇರಿದ ಮುಜೀಬ್
ODI Ranking: ನಂ.1 ಸ್ಥಾನದಲ್ಲೇ ಉಳಿದ ಭಾರತ, 4ಕ್ಕೆ ಜಿಗಿದ ನ್ಯೂಜಿಲೆಂಡ್
Team India: ʼನಾವು ನಟರಲ್ಲ..ʼ: ಟೀಂ ಇಂಡಿಯಾದ ಸೂಪರ್‌ಸ್ಟಾರ್ ಸಂಸ್ಕೃತಿ ಟೀಕಿಸಿದ ಅಶ್ವಿನ್
Don’t hug players: ಭಾರತದ ಆಟಗಾರರ ಅಪ್ಪಿಕೊಳ್ಬೇಡಿ… ತಂಡಕ್ಕೆ ಪಾಕ್ ಅಭಿಮಾನಿಗಳು ಕರೆ
You seem to have an Ad Blocker on.
To continue reading, please turn it off or whitelist Udayavani.