ಒಲಿಂಪಿಕ್ಸ್ ಸಿದ್ಧತೆಗೆ 398 ತರಬೇತುದಾರರು
Team Udayavani, Feb 18, 2022, 6:43 AM IST
ಹೊಸದಿಲ್ಲಿ: ಮುಂಬರುವ ಪ್ಯಾರಿಸ್ (2024) ಮತ್ತು ಲಾಸ್ ಏಂಜಲೀಸ್ (2028) ಒಲಿಂಪಿಕ್ಸ್ ಸೇರಿದಂತೆ ಪ್ರಮುಖ ಕ್ರೀಡಾಕೂಟಗಳಿಗೆ ತಯಾರಿ ನಡೆಸಲು 398 ತರಬೇತುದಾರರನ್ನು ನೇಮಿಸಲಾಗಿದೆ ಎಂದು ಭಾರತ ಕ್ರೀಡಾ ಪ್ರಾಧಿಕಾರ (ಸಾಯ್) ತಿಳಿಸಿದೆ.
“ಮುಂದಿನೆರಡು ಒಲಿಂಪಿಕ್ಸ್ ಸೇರಿದಂತೆ ಪ್ರಮುಖ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಕೂಟಗಳಿಗೆ ತಯಾರಿ ನಡೆಸುತ್ತಿರುವ ಕ್ರೀಡಾಪಟುಗಳಿಗೆ ಸಂಪೂರ್ಣ ಬೆಂಬಲವನ್ನು ಒದಗಿಸಲು ಸಚಿವಾಲಯದ ಪ್ರಯತ್ನದ ಭಾಗವಾಗಿ ಈ ನೇಮಕಾತಿ ನಡೆದಿದೆ’ ಎಂದು ಕ್ರೀಡಾ ಸಚಿವಾಲಯದ ಪ್ರಕಟನೆ ತಿಳಿಸಿದೆ.
ತರಬೇತುದಾರರು ಮತ್ತು ಸಹಾಯಕ ತರ ಬೇತುದಾರರನ್ನು ಒಳಗೊಂಡ ಗುಂಪಿನಲ್ಲಿ ಏಶ್ಯಾಡ್ ಚಿನ್ನದ ಪದಕ ವಿಜೇತ ರೋಯಿಂಗ್‌ಪಟು ಬಜರಂಗ್ ಲಾಲ್ ಥಕ್ಕರ್ ಸೇರಿದಂತೆ ಪ್ರಮುಖರು ಇ¨ªಾರೆ. ಬಜರಂಗ್ ಅವರಿಗೆ ರೋಯಿಂಗ್ ತರಬೇತಿಯ ಹೊಣೆ ನೀಡಲಾಗಿದೆ.
ಉಳಿದಂತೆ ಕಾಮನ್ವೆಲ್ತ್ ಚಾಂಪಿಯಶಿಪ್ ಚಿನ್ನದ ಪದಕ ವಿಜೇತ ಕುಸ್ತಿಪಟು ಶಿಲ್ಪಿ ಶೆರಾನ್ ಅವರು ಕುಸ್ತಿಯ ಸಹಾಯಕ ಕೋಚ್ ಆಗಿರುವರು. ಒಲಿಂಪಿಯನ್ ಜಿನ್ಸಿ ಫಿಲಿಪ್ ಆ್ಯತ್ಲೆಟಿಕ್ಸ್, ಪ್ರಣಾಮಿಕಾ ಬೋರಾ ಬಾಕ್ಸಿಂಗ್ ಕೋಚ್ ಆಗಿ ನೇಮಕಗೊಂಡಿದ್ದಾರೆ. 398 ಕೋಚ್‌ಗಳ ಪೈಕಿ 101 ಮಂದಿಯನ್ನು ಸಾರ್ವಜನಿಕ ವಲಯದ ಉದ್ದಿಮೆಗಳು (ಪಿಎಸ್‌ಯು) ಮತ್ತು ಸರಕಾರದ ಇನ್ನುಳಿದ ಸಂಸ್ಥೆಗಳಿಂದ ನಿಯೋಜನೆ ಮಾಡಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chess player; ಕುಟುಂಬ ಸಮೇತ ಮೋದಿ ಭೇಟಿಯಾದ ಕೊನೆರು ಹಂಪಿ
Vijay Hazare; ವಾಸುಕಿ,ಗೋಪಾಲ್ ಬೊಂಬಾಟ್ ಬೌಲಿಂಗ್; ಸೌರಾಷ್ಟ್ರ ವಿರುದ್ದ ಗೆದ್ದ ಕರ್ನಾಟಕ
Test Cricket; ರೋಹಿತ್ ಆಯ್ತು, ಈಗ ವಿರಾಟ್..: ಬಿಸಿಸಿಐ ಕಳಿಸಿದ ʼಆʼ ಸಂದೇಶದಲ್ಲಿ ಏನಿದೆ?
Sydney Test; ಬದಲಾದ ನಾಯಕ; ಮುಂದುವರಿದ ಬ್ಯಾಟಿಂಗ್ ಪರದಾಟ
Test; ಸಿಡ್ನಿ ಸಂಘರ್ಷಕ್ಕೆ ಭಾರತ ಸಿದ್ಧ :ರೋಹಿತ್-ಗಂಭೀರ್ ಮನಸ್ತಾಪ ತೀವ್ರ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.