ಏಶ್ಯಾಡ್‌ ಬ್ಯಾಡ್ಮಿಂಟನ್‌ ಸೈನಾಗೆ ಕಂಚಿನ ಪದಕ


Team Udayavani, Aug 28, 2018, 3:17 PM IST

saina-nehwal.png

ಜಕಾರ್ತಾ: ಭಾರತದ ಸ್ಟಾರ್‌ ಆಟಗಾರ್ತಿ ಸೈನಾ ನೆಹ್ವಾಲ್‌ ವಿಶ್ವದ ಅಗ್ರ ಶ್ರೇಯಾಂಕಿತೆ, ಚೈನೀಸ್‌ ತೈಪೆಯ ತೈ ಜು ಯಿಂಗ್‌ ವಿರುದ್ಧ ಸೆಮಿಫೈನಲ್‌ನಲ್ಲಿ ಎಡವಿ ಕಂಚಿನ ಪದಕಕ್ಕೆ ತೃಪ್ತಿಪಟ್ಟಿದ್ದಾರೆ. 

ಈವರೆಗೆ ಏಶ್ಯಾಡ್‌ ಬ್ಯಾಡ್ಮಿಂಟನ್‌ ವನಿತಾ ಸಿಂಗಲ್ಸ್‌ನಲ್ಲಿ ವೈಯಕ್ತಿಕ ಪದಕ ಗೆಲ್ಲದ ಭಾರತಕ್ಕೆ ಸಿಂಧು-ಸೈನಾ ಆಶಾಕಿರಣವಾಗಿ ಗೋಚರಿಸಿದ್ದರು. 

ಇವರಿಬ್ಬರು ಪ್ರಶಸ್ತಿ ಸುತ್ತಿನಲ್ಲಿ ಎದುರಾಗಬಹುದೆಂಬ ನಿರೀಕ್ಷೆಯೂ ಇತ್ತು. ಈ ಪ್ರಯತ್ನದಲ್ಲಿ ಸಿಂಧು ಯಶಸ್ಸು ಕಂಡಿದ್ದಾರೆ. ಚಿನ್ನದ ಕಾಳಗದಲ್ಲಿ ಅವರು ತೈ ಜು ಯಿಂಗ್‌ ವಿರುದ್ಧ ಸೆಣಸಲಿದ್ದು, ಈ ಸ್ಪರ್ಧೆ ಮಂಗಳವಾರ ನಡೆಯಲಿದೆ. 

ಆದರೆ ಇತ್ತೀಚೆಗೆ ಸಿಂಧು ಪ್ರಮುಖ ಕೂಟಗಳ ಫೈನಲ್‌ಗ‌ಳಲ್ಲಿ ಸತತವಾಗಿ ಸೋಲುತ್ತಲೇ ಇರುವುದು ಆತಂಕದ ಸಂಗತಿಯಾಗಿ ಪರಿಣಮಿಸಿದೆ. ಈ ಸೋಲಿನ ಸರಪಳಿ ಏಶ್ಯಾಡ್‌ನ‌ಲ್ಲಿ ಮುರಿಯಲ್ಪಡಲಿ ಎಂಬುದು ಭಾರತೀಯ ಕ್ರೀಡಾಭಿಮಾನಿಗಳ ಹಾರೈಕೆ.

ಸಿಂಧು ಸವಾರಿ
ಸೋಮವಾರ ನಡೆದ ಸೆಮಿಫೈನಲ್‌ ಹಣಾಹಣಿಯಲ್ಲಿ ವಿಶ್ವದ 3ನೇ ಶ್ರೇಯಾಂಕಿತೆ ಸಿಂಧು ಜಪಾನ್‌ನ ಅಕಾನೆ ಯಮಾಗುಚಿ ಅವರನ್ನು 21-17, 15-21, 21-10 ಗೇಮ್‌ಗಳಿಂದ ಸೋಲಿಸುವಲ್ಲಿ ಯಶಸ್ವಿಯಾದರು. ಇದು ಪ್ರಸಕ್ತ ಏಶ್ಯಾಡ್‌ನ‌ಲ್ಲಿ ಯಮಾಗುಚಿ ವಿರುದ್ಧ ಸಿಂಧು ಸಾಧಿಸಿದ 2ನೇ ಗೆಲುವು. ಇದಕ್ಕೂ ಮುನ್ನ ತಂಡ ಸ್ಪರ್ಧೆಯಲ್ಲೂ ಸಿಂಧು ಯಮಾಗುಚಿಗೆ ಸೋಲುಣಿಸಿದ್ದರು. 

ಆರಂಭದಲ್ಲಿ ಕೆಲವು ತಪ್ಪುಗಳನ್ನು ಮಾಡಿದ ಸಿಂಧು ಬಳಿಕ ಎಚ್ಚೆತ್ತುಗೊಂಡು ಪಂದ್ಯದಲ್ಲಿ ಹಿಡಿತ ಸಾಧಿಸತೊಡಗಿದರು. ಯಮಾಗುಚಿ ಆಕ್ರಮಣ ಆಟಕ್ಕೆ ಇಳಿದರೂ, ಪ್ರತಿದಾಳಿ ನಡೆಸಿದ ಸಿಂಧು ಮೊದಲ ಗೇಮ್‌ನಲ್ಲಿ 11-8 ಅಂಕಗಳ ಮುನ್ನಡೆ ಕಾಯ್ದುಕೊಂಡರು. ವಿವಿಧ ಸ್ಟ್ರೋಕ್‌ಗಳನ್ನು ಬಳಸಿ ಪ್ರತಿಸ್ಪರ್ಧಿಗೆ ತಪ್ಪು ಮಾಡುವಂತೆ ಪ್ರೇರೇಪಿಸಿದರು. ಈ ಮೂಲಕ ಮೊದಲ ಗೇಮ್‌ ಸಿಂಧು ಪಾಲಾಯಿತು.

2ನೇ ಗೇಮ್‌ನ ಆರಂಭದಿಂದಲೂ ಮುನ್ನಡೆ ಕಾಯ್ದುಕೊಂಡಿದ್ದ ಸಿಂಧು, ಸಣ್ಣ ತಪ್ಪುಗಳನ್ನು ಮಾಡಿ ಹಿನ್ನಡೆ ಅನುಭವಿಸಿದರು. ಯಮಾಗುಚಿ ತಿರುಗಿ ಬಿದ್ದರು. ನಿರ್ಣಾಯಕ ಗೇಮ್‌ನಲ್ಲಿ 7-3 ಅಂಕಗಳಿಂದ ಮುನ್ನಡೆಯತೊಡಗಿದ ಸಿಂಧು ಜಪಾನೀ ಆಟಗಾರ್ತಿ ಮೇಲೆ ಸವಾರಿ ಮಾಡುವಲ್ಲಿ ಯಶಸ್ವಿಯಾದರು. ನಿರೀಕ್ಷೆಗೂ ಸುಲಭದಲ್ಲಿ ಗೆಲುವು ಸಾಧಿಸಿದರು. ಇವರಿಬ್ಬರ ಕಾದಾಟ 65 ನಿಮಿಷಗಳ ಕಾಲ ನಡೆಯಿತು.

ಎಡವಿದ ಸೈನಾ 
ಮತ್ತೂಂದು ಸೆಮಿಫೈನಲ್‌ ಪಂದ್ಯದಲ್ಲಿ 10ನೇ ಶ್ರೇಯಾಂಕಿ ಸೈನಾ ನೆಹ್ವಾಲ್‌ಗೆ ವಿಶ್ವದ ನಂ.1 ಆಟಗಾರ್ತಿ, ಚೈನೀಸ್‌ ತೈಪೆಯ ತೈ ಜು ಯಿಂಗ್‌ ಕೈಯಿಂದ ಪಾರಾಗಿ ಬರಲು ಸಾಧ್ಯವಾಗಲಿಲ್ಲ. 17-21, 14-21 ಅಂತರದ ಸೋಲನುಭವಿಸಿ ಕಂಚಿನ ಪದಕಕ್ಕೆ ತೃಪ್ತಿಪಟ್ಟರು. ಇದು ತೈ ಜು ಯಿಂಗ್‌ ವಿರುದ್ಧ ಸೈನಾ ಅನುಭವಿಸಿದ ಸತತ 10ನೇ ಸೋಲಾಗಿದೆ. ಈ ವರ್ಷ ಅನುಭವಿಸಿದ 4ನೇ ಸೋಲು. ಸೈನಾಗೆ ಸೋಲುಣಿಸಿದ ತೈ ಜು ಯಿಂಗ್‌ ವಿರುದ್ಧ ಸಿಂಧು ಸೇಡು ತೀರಿಸಿಕೊಳ್ಳುವರೇ ಎಂಬುದು ಮಂಗಳವಾರದ ಕುತೂಹಲ.

ಇದು 3 ಏಶ್ಯನ್‌ ಗೇಮ್ಸ್‌ನಲ್ಲಿ ಸೈನಾ ನೆಹ್ವಾಲ್‌ ಗೆದ್ದ ಮೊದಲ ಪದಕ. ಕಳೆದೆರಡು ಸಲ ಅವರು ಕ್ವಾರ್ಟರ್‌ ಫೈನಲ್‌ನಲ್ಲೇ ಸೋಲನುಭವಿಸಿ ಪದಕದಿಂದ ದೂರಾಗಿದ್ದರು.

ಫೈನಲ್‌ ಪಂದ್ಯ 50-50 
ತೈ ಜು ಯಿಂಗ್‌ ಓರ್ವ ಪರಿಪೂರ್ಣ ಆಟಗಾರ್ತಿ. ಇಷ್ಟು ಸಲ ಎದುರಿಸಿದರೂ ಆಕೆಯನ್ನು ಅರ್ಥೈಸಿಕೊಳ್ಳಲಾಗಿಲ್ಲ. ನಾನು ಇನ್ನೇನು ಆಕೆಯ ಆಟವನ್ನು ಅರಿತುಕೊಂಡೆ ಎನ್ನುವಷ್ಟರಲ್ಲಿ ಜು ಯಿಂಗ್‌ ಇನ್ನೊಂದು ಹೊಸ ಶಾಟ್‌ನೊಂದಿಗೆ ಸವಾಲೊಡ್ಡುತ್ತಿದ್ದರು. ನಾನು ಉತ್ತಮ ಆಟವನ್ನೇ ಆಡಿದೆ. ಆದರೆ ಆಕೆಯ ಆಟ ಅತ್ಯುತ್ತಮ ಮಟ್ಟದಲ್ಲಿತ್ತು. ನಾನು ಬಹಳ ಗೊಂದಲಕ್ಕೊಳಗಾದೆ. ಫೈನಲ್‌ ಪಂದ್ಯ 50-50 ಎಂದು ಹೇಳಬಹುದು. ಆದರೆ ಸಿಂಧು ಬಹಳ ಉದ್ದ ಇರುವುದರಿಂದ ಕೌಂಟರ್‌ ಅವಕಾಶಗಳು ಹೆಚ್ಚಿವೆ.
-ಸೈನಾ ನೆಹ್ವಾಲ್‌

ಟಾಪ್ ನ್ಯೂಸ್

1

BBK11: ಇವತ್ತು ಬಿಗ್‌ಬಾಸ್‌ ಮನೆಯಿಂದ ಆಚೆ ಬರುವುದು ಇವರೇ ನೋಡಿ

Vijayapura: One-year-old child kidnapped from district hospital: Crime detected on CCTV

Vijayapura: ಜಿಲ್ಲಾಸ್ಪತ್ರೆಯಲ್ಲಿ ಒಂದು ವರ್ಷದ ಮಗು ಅಪಹರಣ: ಸಿಸಿಟಿವಿಯಲ್ಲಿ ದೃಶ್ಯ

Smart water meters revolutionize water conservation

Smart meters: ನೀರು ಸಂರಕ್ಷಿಸುವ ವಿಚಾರದಲ್ಲಿ ಕ್ರಾಂತಿ ಮಾಡಿದ ಸ್ಮಾರ್ಟ್ ವಾಟರ್ ಮೀಟರ್

Viral Pics: ಡೇಟಿಂಗ್‌ ರೂಮರ್ಸ್‌ ನಡುವೆ ವಿಜಯ್‌ – ರಶ್ಮಿಕಾ ಸೀಕ್ರೆಟ್‌ ಲಂಚ್‌ ಡೇಟ್

Lakkundi: ಹೊಸದಾಗಿ 5 ಬಾವಿ, 5 ಶಾಸನಗಳು, ಸಾವಿರಕ್ಕೂ ಹೆಚ್ಚು ಶಿಲ್ಪಕಲೆಗಳ ಅನ್ವೇಷಣೆ

Lakkundi: ಹೊಸದಾಗಿ 5 ಬಾವಿ, 5 ಶಾಸನಗಳು, ಸಾವಿರಕ್ಕೂ ಹೆಚ್ಚು ಶಿಲ್ಪಕಲೆಗಳ ಅನ್ವೇಷಣೆ

9-someshwara

Someshwara: ಸಮುದ್ರಕ್ಕೆ ಹಾರಿದ ಯುವತಿಯ ರಕ್ಷಣೆ

Perth test: Jasprit Bumrah’s bowling style in doubt: What is the controversy?

Perth test: ಜಸ್ಪ್ರೀತ್‌ ಬುಮ್ರಾ ಬೌಲಿಂಗ್‌ ಶೈಲಿ ಅನುಮಾನ: ಏನಿದು ವಿವಾದ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Perth test: Jasprit Bumrah’s bowling style in doubt: What is the controversy?

Perth test: ಜಸ್ಪ್ರೀತ್‌ ಬುಮ್ರಾ ಬೌಲಿಂಗ್‌ ಶೈಲಿ ಅನುಮಾನ: ಏನಿದು ವಿವಾದ?

Perth Test: Jaiswal scores century; record partnership with Rahul

Perth Test: ಜೈಸ್ವಾಲ್‌ ಶತಕದಾಟ; ರಾಹುಲ್‌ ಜತೆ ದಾಖಲೆಯ ಜೊತೆಯಾಟ

IPL Auction 2025: ಇಂದು, ನಾಳೆ ಐಪಿಎಲ್‌ ಬೃಹತ್‌ ಹರಾಜು

IPL Auction 2025: ಇಂದು, ನಾಳೆ ಐಪಿಎಲ್‌ ಬೃಹತ್‌ ಹರಾಜು

World Super Kabaddi League: ವಿಶ್ವ ಕಬಡ್ಡಿ ಲೀಗ್‌ಗೆ ಅನುಮತಿ

World Super Kabaddi League: ವಿಶ್ವ ಕಬಡ್ಡಿ ಲೀಗ್‌ಗೆ ಅನುಮತಿ

Chinnaswamy Stadium: ಚಿನ್ನಸ್ವಾಮಿ ಸ್ಟಾಂಡ್‌ಗಳಿಗೆ ದಿಗ್ಗಜರ ಹೆಸರು

Chinnaswamy Stadium: ಚಿನ್ನಸ್ವಾಮಿ ಸ್ಟಾಂಡ್‌ಗಳಿಗೆ ದಿಗ್ಗಜರ ಹೆಸರು

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

Prabhutva movie review

Prabhutva movie review: ಪ್ರಗತಿ ಪಥದಲ್ಲಿ ಕ್ರಾಂತಿಯ ಕಿಡಿ

1

BBK11: ಇವತ್ತು ಬಿಗ್‌ಬಾಸ್‌ ಮನೆಯಿಂದ ಆಚೆ ಬರುವುದು ಇವರೇ ನೋಡಿ

Vijayapura: One-year-old child kidnapped from district hospital: Crime detected on CCTV

Vijayapura: ಜಿಲ್ಲಾಸ್ಪತ್ರೆಯಲ್ಲಿ ಒಂದು ವರ್ಷದ ಮಗು ಅಪಹರಣ: ಸಿಸಿಟಿವಿಯಲ್ಲಿ ದೃಶ್ಯ

11-kundagol’

Kundgol: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬೈಕ್; ಸವಾರರು ಕಣ್ಮರೆ

Smart water meters revolutionize water conservation

Smart meters: ನೀರು ಸಂರಕ್ಷಿಸುವ ವಿಚಾರದಲ್ಲಿ ಕ್ರಾಂತಿ ಮಾಡಿದ ಸ್ಮಾರ್ಟ್ ವಾಟರ್ ಮೀಟರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.