ಸರಣಿ ಸೋಲಿನಿಂದ ತೀವ್ರ ನೋವಾಗಿದೆ: ಜಯಸೂರ್ಯ
Team Udayavani, Aug 16, 2017, 10:14 AM IST
ಕೊಲಂಬೊ: ಭಾರತದ ವಿರುದ್ಧ ತವರಿನಲ್ಲೇ ಅನುಭವಿಸಿದ 3-0 ವೈಟ್‌ವಾಶ್ ಸೋಲಿನಿಂದ ತೀವ್ರ ನೋವಾಗಿದೆ ಎಂಬುದಾಗಿ ಶ್ರೀಲಂಕಾ ತಂಡದ ಮಾಜಿ ಕ್ರಿಕೆಟಿಗ, ಹಾಲಿ ಆಯ್ಕೆ ಸಮಿತಿ ಅಧ್ಯಕ್ಷ ಸನತ್ ಜಯಸೂರ್ಯ ಪ್ರತಿಕ್ರಿಯಿಸಿದ್ದಾರೆ.
“ನನಗೆ ಈ ಸೋಲಿನಿಂದ ತೀವ್ರ ನೋವಾಗಿದೆ. ತವರಿನಲ್ಲಿ ಸರಣಿ ಸೋಲುವುದನ್ನು ಯಾವತ್ತೂ ಅರಗಿಸಿಕೊಳ್ಳಲಾಗುವುದಿಲ್ಲ. ಅದರಲ್ಲೂ ಈ ರೀತಿಯಾಗಿ ಹೀನಾಯವಾಗಿ ಸೋಲುವುದನ್ನು ಸಹಿಸಿಕೊಲ್ಲುವುದು ಬಜಳ ಕಷ್ಟ. ನಾವು ತವರಿನಲ್ಲಿ ಭಾರತದ ವಿರುದ್ಧ ಯಾವತ್ತೂ ಉತ್ತಮ ಪ್ರದರ್ಶನ ಕಾಯ್ದುಕೊಂಡು ಬಂದಿದ್ದೇವೆ. 2015ರಲ್ಲಿ ಸರಣಿ ಸೋತರೂ ಮೊದಲ ಪಂದ್ಯವನ್ನು ಗೆದ್ದ ಸಾಧನೆ ನಮ್ಮದಾಗಿತ್ತು. ಆದರೆ ಈ ಸಲದ ಸೋಲು ಅತ್ಯಂತ ಆಘಾತಕಾರಿ. ಇದಕ್ಕೇನು ಕಾರಣ ಎಂಬುದನ್ನು ಆಟಗಾರರು, ತರಬೇತುದಾರರೆಲ್ಲರೂ ಕೂಡಿ ಆತ್ಮಾವಲೋಕನ ಮಾಡಬೇಕಿದೆ. ಸಮಸ್ಯೆಗಳಿಗೆಲ್ಲ ಶೀಘ್ರವೇ ಸೂಕ್ತ ಪರಿಹಾರ ಒದಗಿಸಬೇಕಿದೆ…’ ಎಂದು ಗತ ಕಾಲದ ಬಿಗ್ ಹಿಟ್ಟರ್ ಜಯಸೂರ್ಯ ಅಭಿಪ್ರಾಯಪಟ್ಟರು.
“ಶ್ರೀಲಂಕಾದ ದೇಶಿ ಹಾಗೂ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ದೊಡ್ಡ ಅಂತರವಿದೆ. ಇವೆರಡರ ನಡುವೆ ಹೆಚ್ಚಿನ ಅಭ್ಯಾಸ ಹಾಗೂ ತರಬೇತಿಯ ಸೇತುವೆಯನ್ನು ನಿರ್ಮಿಸಿ ಅಂತರವನ್ನು ಕಡಿಮೆ ಮಾಡಿಕೊಳ್ಳಬೇಕಿದೆ. ಸುದೀರ್ಘಾವಧಿಯ ಪರಿಹಾರನ್ನು ಕಂಡುಕೊಳ್ಳ ಬೇಕಿದೆ. ಕ್ಲಬ್ ಹಾಗೂ ಅಂತಾರಾಷ್ಟ್ರೀಯ ಕ್ರಿಕೆಟ್ ನಡುವೆ ಭಾರೀ ಅಂತರವಿದೆ. ಶ್ರೇಷ್ಠ ಮಟ್ಟದ ತರಬೇತಿ ಹಾಗೂ ತರಬೇತುದಾರರಿಂದ ಯುವ ಆಟಗಾರರನ್ನು ತಾಳ್ಮೆಯಿಂದ ಪಳಗಿಸುವ ಕೆಲಸ ಆಗಬೇಕಿದೆ’ ಎಂದು ಜಯಸೂರ್ಯ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ
Waqf Notice: ಬಸನಗೌಡ ಪಾಟೀಲ್ ಯತ್ನಾಳ್ ತಂಡದಿಂದ 1 ತಿಂಗಳು ಜನ ಜಾಗೃತಿ
Waqf Issue: ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ
Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ
Black Days: ಜಮೀರ್+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್.ಡಿ.ಕುಮಾರಸ್ವಾಮಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.