ಸಾನಿಯಾ-ಬೋಪಣ್ಣ ಜೋಡಿಯ ಫೈಟ್
Team Udayavani, Jan 25, 2017, 3:45 AM IST
ಮೆಲ್ಬರ್ನ್: ಆಸ್ಟ್ರೇಲಿಯನ್ ಓಪನ್ ಮಿಕ್ಸೆಡ್ ಡಬಲ್ಸ್ ಕ್ವಾರ್ಟರ್ ಫೈನಲ್ನಲ್ಲಿ ಭಾರತದ ಸಾನಿಯಾ ಮಿರ್ಜಾ, ರೋಹನ್ ಬೋಪಣ್ಣ ಜೋಡಿ ಪರಸ್ಪರ ಮುಖಾಮುಖೀಯಾಗಲಿವೆ. ಮಂಗಳವಾರದ ದ್ವಿತೀಯ ಸುತ್ತಿನ ಪಂದ್ಯದಲ್ಲಿ ರೋಹನ್ ಬೋಪಣ್ಣ-ಗ್ಯಾಬ್ರಿಯಲ್ ಡಾಬ್ರೋವ್ಸ್ಕಿ (ಕೆನಡಾ) ಸೇರಿಕೊಂಡು 5ನೇ ಶ್ರೇಯಾಂಕದ ಯುಂಗ್ ಜಾನ್ ಚಾನ್ (ಚೀನ)-ಲುಕಾಸ್ ಕ್ಯುಬಟ್ (ಪೋಲೆಂಡ್) ಜೋಡಿಯನ್ನು ಭಾರೀ ಹೋರಾಟದ ಬಳಿಕ 6-4, 5-7, 10-3 ಅಂತರದಿಂದ ಮಣಿಸಿದರು.
ಅನಂತರದ ಪಂದ್ಯದಲ್ಲಿ ದ್ವಿತೀಯ ಶ್ರೇಯಾಂಕದ ಸಾನಿಯಾ ಮಿರ್ಜಾ ಹಾಗೂ ಕ್ರೊವೇಶಿಯಾದ ಇವಾನ್ ಡೋಡಿಗ್ ಕೂಡ ಪ್ರಬಲ ಸವಾಲು ಎದುರಿಸಬೇಕಾಯಿತು. ಸೈಸೈ ಜೆಂಗ್ (ಚೀನ)-ಅಲೆಕ್ಸಾಂಡರ್ ಪೆಯ (ಆಸ್ಟ್ರಿಯಾ) ವಿರುದ್ಧ ನಡೆದ ಈ ಪಂದ್ಯದಲ್ಲಿ ಸಾನಿಯಾ-ಡೋಡಿಗ್ ಜೋಡಿಯ ಗೆಲುವಿನ ಅಂತರ 2-5, 6-3, 10-6.
ಇವರಲ್ಲೀಗ ಭಾರತದ ಒಂದು ಜೋಡಿಯ ಸೆಮಿಫೈನಲ್ ಖಾತ್ರಿಯಾಗಿದೆ. ಇನ್ನೊಂದು ಕಡೆ ಲಿಯಾಂಡರ್ ಪೇಸ್-ಮಾರ್ಟಿನಾ ಹಿಂಗಿಸ್ ಕೂಡ ಜಯ ಸಾಧಿಸಿದರೆ ಆಗ ಸೆಮಿಫೈನಲ್ನಲ್ಲೂ ಭಾರತೀಯ ಆಟಗಾರರ ಜೋಡಿಯೇ ಪರಸ್ಪರ ಮುಖಾಮುಖೀ ಆಗುವುದನ್ನು ಕಾಣಬಹುದು. ಪೇಸ್-ಹಿಂಗಿಸ್ ಸ್ಥಳೀಯ ನೆಚ್ಚಿನ ಜೋಡಿಯಾದ ಸಮಂತಾ ಸ್ಟೋಸರ್-ಸ್ಯಾಮ್ ಗ್ರೋತ್ ವಿರುದ್ಧ ಸೆಣಸಲಿದ್ದಾರೆ.
ಮಿಶ್ರ ಡಬಲ್ಸ್ ಕ್ವಾರ್ಟರ್ ಫೈನಲ್ ಪಂದ್ಯಗಳು ಭಾರತೀಯ ಕಾಲಮಾನದಂತೆ ಜ. 26ರ ಬೆಳಗ್ಗೆ 5.30ಕ್ಕೆ ನಡೆಯಲಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL Mega Auction:1.1 ಕೋಟಿ ರೂ.ಗೆ ಹರಾಜಾದ 13ರ ಬಾಲಕ !!
IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್ ಗೆ ಬಂಪರ್, ಬೆಂಗಳೂರಿಗೆ ಬಂದ ಡೇವಿಡ್
World Test Championship: ಪರ್ತ್ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಭಾರೀ ಬದಲಾವಣೆ
IPL Auction 2025: ಯಾರು, ಯಾವ ತಂಡಕ್ಕೆ, ಎಷ್ಟು ಕೋಟಿಗೆ?.. ಇಲ್ಲಿದೆ ಇದುವರೆಗಿನ ಲಿಸ್ಟ್
IPL Auction: ಕೇನ್, ಮಯಾಂಕ್, ಶಾಗಿಲ್ಲ ಬೇಡಿಕೆ; ಉತ್ತಮ ಹಣ ಪಡೆದ ದ. ಆಫ್ರಿಕಾ ವೇಗಿ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Election: ಶಿಂಧೆ ವಿರುದ್ಧ ಸೋತಿದ್ದ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಶಿವಸೇನೆಗೆ
warrant: ಇಸ್ರೇಲಿ ನಾಯಕರಿಗೆ ವಾರಂಟ್ ಬೇಡ, ಗಲ್ಲು ವಿಧಿಸಿ: ಇರಾನ್
Gold Price Decline: ಚಿನ್ನದ ದರ ಮತ್ತೆ 1,000 ರೂ.ಇಳಿಕೆ: 10 ಗ್ರಾಂಗೆ 78,550 ರೂ.
Assembly Election: ನಾನು ಪ್ರಚಾರ ಮಾಡದ್ದಕ್ಕೆ ನೀನು ಶಾಸಕನಾದೆ: ಸಂಬಂಧಿಗೆ ಅಜಿತ್
Scheme: ದಿಲ್ಲಿಯಲ್ಲಿ ಆಮ್ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.