ವಿಂಬಲ್ಡನ್: ಅಂಕಿತಾ ಜೋಡಿಯನ್ನು ಮಣಿಸಿದ ಸಾನಿಯಾ ಜೋಡಿ
Team Udayavani, Jul 3, 2021, 7:55 AM IST
ಲಂಡನ್: “ಆಲ್ ಇಂಡಿಯನ್’ ವಿಂಬಲ್ಡನ್ ಸ್ಪರ್ಧೆಯಲ್ಲಿ ಸಾನಿಯಾ ಮಿರ್ಜಾ-ರೋಹನ್ ಬೋಪಣ್ಣ ಗೆಲುವಿನ ಓಟ ಆರಂಭಿಸಿದ್ದಾರೆ. ಶುಕ್ರವಾರದ ಮಿಶ್ರ ಡಬಲ್ಸ್‌ನಲ್ಲಿ ಇವರು ಅಂಕಿತಾ ರೈನಾ-ರಾಮ್‌ಕುಮಾರ್ ರಾಮನಾಥನ್ ವಿರುದ್ಧ 6-2, 7-6 (7-5) ಅಂತರದ ಜಯದೊಂದಿಗೆ ದ್ವಿತೀಯ ಸುತ್ತು ತಲುಪಿದರು.
ಮೊದಲ ಸೆಟ್‌ನಲ್ಲಿ ಸುಲಭ ಮೇಲುಗೈ ಸಾಧಿಸಿದ ಸಾನಿಯಾ-ಬೋಪಣ್ಣ ಜೋಡಿಗೆ ದ್ವಿತೀಯ ಸೆಟ್‌ನಲ್ಲಿ ತೀವ್ರ ಪ್ರತಿರೋಧ ಎದುರಾಯಿತು. ಇದು ಟೈ ಬ್ರೇಕರ್‌ಗೆ ಹೊರಳಿತು. ಆದರೆ ಸಾನಿಯಾ-ಬೋಪಣ್ಣ ಅವರ ಅನುಭವ ಇಲ್ಲಿ ನೆರವಿಗೆ ಬಂತು.
ಮಾರ್ಟನ್ ಫುಕ್ಸೋವಿಕ್ಸ್-ಟೈಮಿಯ ಬಬೋಸ್ ಕಡೇ ಗಳಿಗೆಯಲ್ಲಿ ಹಿಂದೆ ಸರಿದ ಕಾರಣ ಅಂಕಿತಾ-ರಾಮ್‌ಕುಮಾರ್ ಜೋಡಿಗೆ ಮಿಶ್ರ ಡಬಲ್ಸ್ ನಲ್ಲಿ ಆಡುವ ಅವಕಾಶ ಲಭಿಸಿತ್ತು.
ಇದನ್ನೂ ಓದಿ:ಬಿ ಸ್ಯಾಂಪಲ್’ ಫಲಿತಾಂಶವೂ ಪಾಸಿಟಿವ್ : ಸುಮಿತ್ ಮಲಿಕ್‌ಗೆ ಎರಡು ವರ್ಷ ನಿಷೇಧ
ಇಲ್ಲಿ ಸಾನಿಯಾ ಜೋಡಿ ಅಂಕಿತಾ ಜೋಡಿಯನ್ನು ಮಣಿಸಿದರೂ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಸಾನಿಯಾ ಮಿರ್ಜಾ-ಅಂಕಿತಾ ರೈನಾ ಅವರೇ ಭಾರತದ ವನಿತಾ ಡಬಲ್ಸ್ ಸ್ಪರ್ಧಿಗಳಾಗಿದ್ದಾರೆಂಬುದು ವಿಶೇಷ.
ಸಾನಿಯಾ-ಬೋಪಣ್ಣ ದ್ವಿತೀಯ ಸುತ್ತಿನಲ್ಲಿ ಫ್ರಾನ್ಸ್‌ನ ಕ್ರಿಸ್ಟಿನಾ ಲಡೆನೋವಿಕ್-ನಿಕೋಲಸ್ ಮಹುತ್ ವಿರುದ್ಧ ಸೆಣಸಲಿದ್ದಾರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BGT 24: ಕೆಎಲ್ ರಾಹುಲ್ ಔಟ್ ಅಥವಾ ನಾಟೌಟ್: ಏನಿದು ವಿವಾದ? ಇಲ್ಲಿದೆ ಅಂಪೈರ್ ಉತ್ತರ
IPL 2025-27: ಮುಂದಿನ ಮೂರು ಐಪಿಎಲ್ ಸೀಸನ್ ನ ದಿನಾಂಕ ಪ್ರಕಟಿಸಿದ ಬಿಸಿಸಿಐ
Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್ ನಲ್ಲೇ ಪರದಾಡಿದ ಬ್ಯಾಟರ್ ಗಳು
Border-Gavaskar Test series ಇಂದಿನಿಂದ: ಹೋರಾಟಕ್ಕೆ ಭಾರತ-ಆಸ್ಟ್ರೇಲಿಯ ಸಿದ್ಧ
Eden Gardens; ‘ಬಿ’ ಬ್ಲಾಕ್‌ಗೆ ಜೂಲನ್ ಗೋಸ್ವಾಮಿ ಹೆಸರಿಡಲು ನಿರ್ಧಾರ
MUST WATCH
ಹೊಸ ಸೇರ್ಪಡೆ
Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಾಘಾತ
Chikkamagaluru: ಅಪರಿಚಿತ ವಾಹನ ಡಿಕ್ಕಿಯಾಗಿ ಕಂಡಕ್ಟರ್ ಸಾವು
Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು
Waqf Protest: ರಾಜ್ಯ ಸರ್ಕಾರವನ್ನು ಜನರೇ ಕಿತ್ತೊಗೆಯಲಿದ್ದಾರೆ: ದಾವಣಗೆರೆಯಲ್ಲಿ ಪ್ರತಿಭಟನೆ
Goa ಕರಾವಳಿಯಲ್ಲಿ ನೌಕಾಪಡೆಯ ಸಬ್ ಮರೈನ್ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.