Sania Mirza – Shoaib Malik ವಿಚ್ಛೇದನ ಪಡೆದು ಕೆಲವು ತಿಂಗಳುಗಳಾಗಿವೆ: ಸಾನಿಯಾ ಕುಟುಂಬ
Team Udayavani, Jan 21, 2024, 12:50 PM IST
ಮುಂಬಯಿ: ಭಾರತದ ಮಾಜಿ ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ ಹಾಗೂ ಪಾಕ್ ಮಾಜಿ ಕ್ರಿಕೆಟಿಗ ಶೋಯೆಬ್ ಮಲಿಕ್ ಅವರ ದಾಂಪತ್ಯ ಜೀವನ ಅಧಿಕೃತವಾಗಿ ಬೇರ್ಪಟ್ಟಿದೆ. ಶನಿವಾರ(ಜ.20 ರಂದು) ಶೋಯೆಬ್ ಮಲಿಕ್ ಪಾಕ್ ನಟಿ ಸನಾ ಜಾವೇದ್ ಅವರನ್ನು ವಿವಾಹವಾಗಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಕಳೆದ ಕೆಲ ಸಮಯದಿಂದ ಸಾನಿಯಾ – ಶೋಯೆಬ್ ದಾಂಪತ್ಯ ಜೀವನದ ಬಗ್ಗೆ ನಾನಾ ರೀತಿಯ ಸುದ್ದಿಗಳು ಹರಿದಾಡುತ್ತಿತ್ತು. ಶೋಯೆಬ್ ಮಲಿಕ್ ಸನಾ ಜಾವೇದ್ ಅವರನ್ನು ವಿವಾಹವಾಗುವ ಮೂಲಕ ಎಲ್ಲಾ ಗೊಂದಲಗಳಿಗೆ ತೆರೆ ಎಳೆದಿದ್ದು, ಇತ್ತ ಕೆಲವರು ವಿಚ್ಚೇದನ ನೀಡದೆ ಶೋಯೆಬ್ ವಿವಾಹವಾಗಿದ್ದಾರೆ ಎನ್ನುವ ಮಾತುಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿತ್ತು
ಇದೀಗ ಅಧಕೃತವಾಗಿ ಈ ಬಗ್ಗೆ ಸಾನಿಯಾ ಮಿರ್ಜಾ ಅವರ ಕುಟುಂಬದ ಮಾತುಗಳ ಆಧಾರದಲ್ಲಿ ಅವರ ತಂಡವೇ ಮಾಹಿತಿ ನೀಡಿದೆ. “ಸಾನಿಯಾ ಅವರು ಯಾವಾಗಲೂ ತನ್ನ ವೈಯಕ್ತಿಕ ಜೀವನವನ್ನು ಸಾರ್ವಜನಿಕರ ಕಣ್ಣುಗಳಿಂದ ದೂರವಿಟ್ಟಿದ್ದಾರೆ. ಶೋಯೆಬ್ – ಸಾನಿಯಾ ವಿಚ್ಛೇದನ ಪಡೆದು ಕೆಲವು ತಿಂಗಳುಗಳಾಗಿವೆ. ಶೋಯೆಬ್ ಅವರ ಹೊಸ ಪ್ರಯಾಣಕ್ಕಾಗಿ ಅವರು ಶುಭ ಹಾರೈಸುತ್ತಾರೆ. ಅವರ ಜೀವನದ ಈ ಸೂಕ್ಷ್ಮ ಅವಧಿಯಲ್ಲಿ, ಯಾವುದೇ ಊಹಾಪೋಹಗಳಿಗೆ ಒಳಗಾಗದಂತೆ ಮತ್ತು ಅವರ ಗೌಪ್ಯತೆಯ ಅಗತ್ಯವನ್ನು ಗೌರವಿಸುವಂತೆ ನಾವು ಎಲ್ಲಾ ಅಭಿಮಾನಿಗಳು ಮತ್ತು ಹಿತೈಷಿಗಳಿಗೆ ವಿನಂತಿಸುತ್ತೇವೆ” ಎಂದು ಪ್ರಕಟಣೆಯಲ್ಲಿ ತಂಡ ತಿಳಿಸಿದೆ.
2010 ರಲ್ಲಿ ಸಾನಿಯಾ – ಶೋಯೆಬ್ ವಿವಾಹವಾಗಿತ್ತು. 2018 ರಲ್ಲಿ ದಂಪತಿ ಇಜಾನ್ ಎಂಬ ಗಂಡು ಮಗುವಿಗೆ ತಂದೆ – ತಾಯಿಯಾಗಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.