ಟೆನಿಸ್ ತಾರೆ ಸಾನಿಯಾಗೆ ಮಂಡಿನೋವು
Team Udayavani, Nov 13, 2017, 7:50 AM IST
ಮುಂಬಯಿ: ಭಾರತದ ಖ್ಯಾತ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಮಂಡಿನೋವಿನಿಂದ ಬಳಲುತ್ತಿದ್ದಾರೆ. ಸದ್ಯದಲ್ಲಿಯೇ ಶಸ್ತ್ರಚಿಕಿತ್ಸೆಗೆ ಒಳಗಾಗುವ ಸಾಧ್ಯತೆ ಇದೆ. ಇದನ್ನು ಸ್ವತಃ ಸಾನಿಯಾ ಮಿರ್ಜಾ ಅವರೇ ತಿಳಿಸಿದ್ದಾರೆ.
ಕೆಲವು ತಿಂಗಳುಗಳಿಂದ ತಾನು ಮಂಡಿನೋವಿನಿಂದ ಬಳಲುತ್ತಿದ್ದೇನೆ. ಆದರೆ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಬೇಕಾ, ಇಲ್ಲವಾ ಅನ್ನುವ ಬಗ್ಗೆ ಸಮಸ್ಯೆ ಇದೆ. ಈ ಬಗ್ಗೆ ಶೀಘ್ರದಲ್ಲಿಯೇ ನಿರ್ಧಾರ ಮಾಡುತ್ತೇನೆ. ಇದೇ ಕಾರಣಕ್ಕೆ ವಾರದಲ್ಲಿ ಒಂದೆರೆಡು ದಿನ ವಿಶ್ರಾಂತಿ ಪಡೆಯುತ್ತೇನೆ. ನನ್ನ ಪ್ರದರ್ಶನದ ಬಗ್ಗೆ ಸಂತಸವಿದೆ ಎಂದು ತಿಳಿಸಿದ್ದಾರೆ. ಇತ್ತೀಚಿನ ಕೂಟಗಳಲ್ಲಿ ಸಾನಿಯಾ ಮಿರ್ಜಾ ಡಬಲ್ಸ್‌ನಲ್ಲಿ ಕಳಪೆ ಪ್ರದರ್ಶನ ನೀಡುತ್ತಿರುವುದರಿಂದ ವಿಶ್ವ ನಂ.10ರಿಂದ ಹೊರಬಿದ್ದಿದ್ದಾರೆ. ಡಬಲ್ಸ್‌ನಲ್ಲಿ ಮಾಜಿ ನಂ.1 ಆಟಗಾರ್ತಿಯಾದ ಸಾನಿಯಾ ಮೂರು ವರ್ಷಗಳ ಅನಂತರ ಇದೇ ಮೊದಲ ಬಾರಿಗೆ ಅಗ್ರ 10ರಿಂದ ಹೊರಬಿದ್ದಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.