ಅಭ್ಯಾಸ ಆರಂಭಿಸಿದ ಸಾನಿಯಾ ಮಿರ್ಜಾ
Team Udayavani, Mar 14, 2019, 12:45 AM IST
ಹೈದರಾಬಾದ್: ಸಾನಿಯಾ ಮಿರ್ಜಾ ಮತ್ತೆ ಅಭ್ಯಾಸ ಆರಂಭಿಸಿದ್ದಾರೆ. ಮಂಡಿನೋವಿನ ಕಾರಣ 2017 ಅಕ್ಟೋಬರ್ ಅನಂತರ ಸಾನಿಯಾ ಟೆನಿಸ್ ಆಡುವುದನ್ನು ನಿಲ್ಲಿಸಿದ್ದರು. 2018ರ ಅಕ್ಟೋಬರ್‌ನಲ್ಲಿ ಮಗುವಿಗೆ ಜನ್ಮ ನೀಡಿದ ಬಳಿಕ ಟೆನಿಸ್‌ನಿಂದ ದೂರವುಳಿದಿದ್ದರು. ಹೆರಿಗೆಯಾಗಿ ಕೇವಲ ನಾಲ್ಕೂವರೆ ತಿಂಗಳಲ್ಲಿ ಮತ್ತೆ ಅಭ್ಯಾಸಕ್ಕೆ ಮರಳಿರುವುದನ್ನು ಸಾನಿಯಾ ಟ್ವಿಟರ್ ಮೂಲಕ ಸಾರಿದ್ದಾರೆ. ಇದಕ್ಕೆ ಕೆಲವೇ ನಿಮಿಷಗಳಲ್ಲಿ ಸಾವಿರಾರು ಪ್ರತಿಕ್ರಿಯೆಗಳು ಬಂದಿವೆ.
2020ರ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸುವುದು ಸಾನಿಯಾ ಗುರಿಯಾಗಿದೆ.ಅಮೆರಿಕದ ವಿಶ್ವಶ್ರೇಷ್ಠ ಆಟಗಾರ್ತಿ ಸೆರೆನಾ ವಿಲಿಯಮ್ಸ್, ಬೆಲ್ಜಿಯಂನ ಕಿಮ್ ಕ್ಲಿಸ್ಟರ್ ಕೂಡ ತಾಯಿಯಾದ ಕೆಲವೇ ತಿಂಗಳಲ್ಲಿ ಟೆನಿಸ್‌ಗೆ ಮರಳಿದ್ದರು. ಸಾನಿಯಾಗಿಂತ ಮುನ್ನ ತಾಯಿಯಾದ ಸೆರೆನಾ ತಮ್ಮ ಎಂದಿನ ಲಯದೊಂದಿಗೆ ಆಡುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Language Development: ಕನ್ನಡ ಕೆಲಸಕ್ಕೆ ಅಭಿವೃದ್ಧಿ ಪ್ರಾಧಿಕಾರದಲ್ಲಿ ಹಣವೇ ಇಲ್ಲ!
Sullia: ಮಗುವಿಗೆ ಸುಟ್ಟು ಗಾಯ ಮಾಡಿದ್ದ ತಾಯಿ; ಆರೋಪ ಸಾಬೀತು; ಶಿಕ್ಷೆ ಪ್ರಕಟ
Naxals Surrender: ಶರಣಾದ ನಕ್ಸಲರ ಪ್ರಕರಣಗಳಿಗೆ ತ್ವರಿತ ನ್ಯಾಯಾಲಯ: ಸಿಎಂ ಸಿದ್ದರಾಮಯ್ಯ
Dinner Politics: ಊಟ, ಅಜೆಂಡಾ ನಮ್ಮದು, ಬೇರೆಯವರಿಗೆ ಆತಂಕ ಏಕೆ?: ಸತೀಶ್ ಜಾರಕಿಹೊಳಿ
CLP Meeting: ಜ.13ರಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.