ಆಸ್ಟ್ರೇಲಿಯನ್ ಓಪನ್ಗೆ ಸಾನಿಯಾ ಮಿರ್ಜಾ ಇಲ್ಲ
Team Udayavani, Dec 17, 2017, 6:15 AM IST
ಹೊಸದಿಲ್ಲಿ: ಬಲ ಮೊಣಕಾಲಿನ ಗಾಯದಿಂದ ಬಳಲುತ್ತಿರುವ ಭಾರತೀಯ ಟೆನಿಸ್ ತಾರೆ ಸಾನಿಯಾ ಮಿರ್ಜಾ ಮುಂದಿನ ವರ್ಷದ ಆರಂಭದಲ್ಲಿ ನಡೆಯಲಿರುವ ಆಸ್ಟ್ರೇಲಿಯನ್ ಓಪನ್ ಟೆನಿಸ್ ಕೂಟದಲ್ಲಿ ಆಡುವುದಿಲ್ಲ.
ಮೊಣಕಾಲಿನ ನೋವು ತೀವ್ರವಾಗಿದೆ. ನೇರವಾಗಿ ನಡೆದುಕೊಂಡು ಹೋಗಲು ತೊಂದರೆಯಿಲ್ಲ. ಆದರೆ ಆಡುವಾಗ ದಿಕ್ಕು ಬದಲಿಸುವ ವೇಳೆ ನೋವು ತೀವ್ರಗೊಳ್ಳುತ್ತದೆ. ಇದು ಬಲುದೊಡ್ಡ ಸಮಸ್ಯೆ. ಹಾಗಾಗಿ ಆಸ್ಟ್ರೇಲಿಯನ್ ಓಪನ್ನಿಂದ ಹಿಂದೆ ಸರಿಯಲು ನಿರ್ಧರಿಸಿದ್ದೇನೆ ಎಂದು 31ರ ಹರೆಯದ ಸಾನಿಯಾ ಹೇಳಿದ್ದಾರೆ. ಈ ಸಮಸ್ಯೆಯ ಬಗ್ಗೆ ವೈದ್ಯರ ಸಲಹೆ ಕೇಳಿದಾಗ ಕೆಲವು ತಿಂಗಳು ವಿಶ್ರಾಂತಿ ಪಡೆಯುವಂತೆ ಸೂಚಿಸಿದ್ದಾರೆ. ಆಬಳಿಕ ಶಸ್ತ್ರಚಿಕಿತ್ಸೆ ಅಥವಾ ಮದ್ದಿನ ಮೂಲಕ ಗುಣಪಡಿಸುವ ಕುರಿತು ಆಲೋಚಿಸುವ ಎಂದು ವೈದ್ಯರು ಹೇಳಿದ್ದಾರೆಂದು ಸಾನಿಯಾ ನುಡಿದರು.
ಮುಂದಿನ ವರ್ಷ ನಡೆಯುವ ಕಾಮನ್ವೆಲ್ತ್ ಗೇಮ್ಸ್ (ಎಪ್ರಿಲ್ 4ರಿಂದ 15) ಮತ್ತು ಏಶ್ಯನ್ ಗೇಮ್ಸ್ (ಆ. 18-ಸೆ. 2) ನಲ್ಲಿ ಭಾಗವಹಿಸುವ ಭರವಸೆಯಿದೆ ಎಂದು ಸಾನಿಯಾ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.