ಸಾನಿಯಾ-ಮಾಟೆಕ್ ಜೋಡಿಗೆ ಬ್ರಿಸ್ಬೇನ್
Team Udayavani, Jan 8, 2017, 3:45 AM IST
ಬ್ರಿಸ್ಬೇನ್: ಭಾರತದ ಸ್ಟಾರ್ ಆಟಗಾರ್ತಿ ಸಾನಿಯಾ ಮಿರ್ಜಾ ಅವರಿಗೆ ವರ್ಷಾರಂಭದಲ್ಲೇ ಮಿಶ್ರ ಫಲ. ಅವರೇನೋ ಅಮೆರಿಕದ ಬೆಥನಿ ಮಾಟೆಕ್ ಸ್ಯಾಂಡ್ಸ್ ಜತೆಗೂಡಿ “ಬ್ರಿಸ್ಬೇನ್ ಇಂಟರ್‌ನ್ಯಾಶನಲ್’ ವನಿತಾ ಡಬಲ್ಸ್ ಪ್ರಶಸ್ತಿಯನ್ನೆತ್ತಿದರು. ಆದರೆ 91 ವಾರಗಳ ಕಾಲ ಕಾಯ್ದುಕೊಂಡು ಬಂದಿದ್ದ ವನಿತಾ ಡಬಲ್ಸ್ ನಂಬರ್ ವನ್ ರ್‍ಯಾಂಕಿಂಗ್ ಕಿರೀಟವನ್ನು ಸಹ ಆಟಗಾರ್ತಿ ಬೆಥನಿಗೆ ಅರ್ಪಿಸಿದರು!
ಅಗ್ರ ಶ್ರೇಯಾಂಕದ ಇಂಡೋ-ಅಮೆರಿಕನ್ ಜೋಡಿ ಶನಿವಾರದ ಫೈನಲ್‌ನಲ್ಲಿ ರಶ್ಯದ ಎಕತೆರಿನಾ ಮಕರೋವಾ-ಎಲೆನಾ ವೆಸ್ನಿನಾ ವಿರುದ್ಧ 6-2, 6-3 ಅಂತರದ ಗೆಲುವು ಒಲಿಸಿಕೊಂಡಿತು.
ಹಾಲಿ ಚಾಂಪಿಯನ್
ಸಾನಿಯಾ ಮಿರ್ಜಾ ಹಾಲಿ ಚಾಂಪಿಯನ್ ಎಂಬ ಹೆಗ್ಗಳಿಕೆಯೊಂದಿಗೆ ಈ ಪಂದ್ಯಾವಳಿಗೆ ಆಗಮಿಸಿದ್ದರು. ಕಳೆದ ವರ್ಷ ಅವರು ಸ್ವಿಸ್ ತಾರೆ ಮಾರ್ಟಿನಾ ಹಿಂಗಿಸ್ ಜತೆಗೂಡಿ ಬ್ರಿಸ್ಬೇನ್ ಪ್ರಶಸ್ತಿ ಎತ್ತಿದ್ದರು.
“ಮಿಸ್ ವರ್ಲ್ಡ್ ನಂ.1 ಕಿರೀಟವನ್ನು ಬೆಥನಿಗೆ ಹಸ್ತಾಂತರಿಸುತ್ತಿರುವ ಅನುಭವ ನನಗಾಗುತ್ತಿದೆ…’ ಎಂದು ಪ್ರಶಸ್ತಿ ಸಮಾರಂಭದ ವೇಳೆ ಸಾನಿಯಾ ಮಿರ್ಜಾ ಪ್ರತಿಕ್ರಿಯಿಸಿದರು.
“ವೆಸ್ನಿನಾ-ಮಕರೋವಾ ವಿರುದ್ಧ ಯಾವತ್ತೂ ನಾವು ಉತ್ತಮ ಪ್ರದರ್ಶನ ನೀಡುತ್ತ ಬಂದಿದ್ದೇವೆ. ಇಂದಿನ ಪಂದ್ಯ ಕೂಡ ಉತ್ತಮ ಹೋರಾಟ ಕಂಡಿತು. ಹಾಲಿ ಚಾಂಪಿಯನ್ ಆಗಿದ್ದರಿಂದ ನನ್ನ ಪಾಲಿಗೆ ಇದೊಂದು ಗ್ರೇಟ್ ಕಮ್ ಬ್ಯಾಕ್. ನನ್ನ ಜತೆಗಾರ್ತಿ, ಅತ್ಯುತ್ತಮ ಗೆಳತಿಯೂ ಆಗಿರುವ ಬೆಥನಿಗೆ ಕೃತಜ್ಞತೆಗಳು. ವರ್ಷಕೊಮ್ಮೆ ಜತೆಯಾಗಿ ಆಡಿದರೂ ನಮ್ಮ ಪಯಣ ಬಹಳ ದೂರ ಸಾಗಬೇಕೆಂಬುದು ನನ್ನ ಅಪೇಕ್ಷೆ. ಕಳೆದ ವರ್ಷ ಜತೆಗೂಡಿ ಆಡಿದಾಗ ಸಿಡ್ನಿ ಪ್ರಶಸ್ತಿ ಒಲಿದಿತ್ತು. ನಂಬರ್ ವನ್ ಆಟಗಾರ್ತಿ ಎನಿಸಿಕೊಂಡ ಬೆಥನಿಗೆ ಅಭಿನಂದನೆಗಳು…’ ಎಂದು ಸಾನಿಯಾ ಹೇಳಿದರು.
ಆಸ್ಟ್ರೇಲಿಯನ್ ಓಪನ್ ಪಂದ್ಯಾವಳಿಗೆ ಪೂರ್ವಭಾವಿಯಾಗಿ ಜ. 16ರಿಂದ ಆರಂಭವಾಗಲಿರುವ “ಸಿಡ್ನಿ ಇಂಟರ್‌ನ್ಯಾಶನಲ್ ಟೆನಿಸ್’ ಕೂಟದಲ್ಲೂ ಸಾನಿಯಾ ಮಿರ್ಜಾ ಸ್ಪರ್ಧೆಗಿಳಿಯಲಿದ್ದಾರೆ. ಇಲ್ಲಿ ಅವರ ಜತೆಗಾರ್ತಿ ಜೆಕ್ ಗಣರಾಜ್ಯದ ಬಾಬೊìರಾ ಸ್ಟ್ರೈಕೋವಾ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
INDWvsIREW: ಪ್ರತಿಕಾ ರಾವಲ್ ಭರ್ಜರಿ ಬ್ಯಾಟಿಂಗ್; ಐರ್ಲೆಂಡ್ ವಿರುದ್ದ ಸರಣಿ ಶುಭಾರಂಭ
Indian Cricket: ಕ್ರಿಕೆಟ್ ಜೀವನಕ್ಕೆ ಗುಡ್ ಬೈ ಹೇಳಿದ ಆರ್‌ಸಿಬಿ ಮಾಜಿ ಆಟಗಾರ
ಕೊಹ್ಲಿ-ರೋಹಿತ್ ಬಳಿಕ ಜಡೇಜಾ ಸ್ಥಾನಕ್ಕೂ ಕುತ್ತು: ಕಠಿಣ ನಿರ್ಧಾರ ಕೈಗೊಂಡ ಬಿಸಿಸಿಐ
Divorce: ಚಾಹಲ್ ಬಳಿಕ ಇದೀಗ ಮನೀಶ್ ಪಾಂಡೆ ವಿಚ್ಛೇದನ? ಏನಿದು ವರದಿ
BPL;ಅಂತಿಮ ಓವರಿನಲ್ಲಿ 30 ರನ್ ಸಿಡಿಸಿದ ನುರುಲ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.