‘ಕರಿಯ’ ವಿವಾದ: ಕ್ಷಮೆ ಕೇಳಿದ ಸರ್ಫರಾಜ್ ಅಹಮದ್
Team Udayavani, Jan 24, 2019, 7:28 AM IST
ಸೆಂಚುರಿಯನ್ : ದಕ್ಷಿಣ ಆಫ್ರಿಕಾ ಆಟಗಾರ ಆಂಡಿಲೊ ಫೆಲುಕ್ವಾಯೋ ರನ್ನು ಕರಿಯ ಎಂದು ಕರೆದು ಭಾರಿ ವಿವಾದ ಸೃಷ್ಠಿಸಿದ್ದ ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಸರ್ಫರಾಜ್ ಅಹಮದ್ ಈಗ ಕ್ಷಮೆ ಕೇಳಿದ್ದಾರೆ.
ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಂಡಿರುವ ಪಾಕಿಸ್ತಾನ ತಂಡ ಎರಡನೇ ಏಕದಿನ ಪಂದ್ಯದ ವೇಳೆ ಆಫ್ರಿಕಾ ಆಟಗಾರನನ್ನು ನಿಂದಿಸಿದ್ದರು. ಇದು ಸ್ಟಂಪ್ ಮೈಕ್ ನಲ್ಲಿ ರೆಕಾರ್ಡ್ ಆಗಿತ್ತು. ಅಹಮದ್ ಈ ಹೇಳಿಕೆಗೆ ಭಾರೀ ವಿರೋಧ ವ್ಯಕ್ತವಾಗಿತ್ತು.
ಸರಣಿ ಟ್ವೀಟ್ ಮಾಡಿ ಕ್ಷಮೆ ಕೇಳಿರುವ ಸರ್ಫರಾಜ್, ಸ್ಟಂಪ್ ಮೈಕ್ ನಲ್ಲಿ ದಾಖಲಾಗಿರುವ ನನ್ನ ಹತಾಶೆಯ ಮಾತುಗಳಿಂದ ಯಾರಿಗಾದರೂ ನೋವಾಗಿದ್ದರೆ ಅವರಿಗೆ ನಾನು ಕ್ಷಮೆಯನ್ನು ಕೇಳುತ್ತೇನೆ ಎಂದು ಬರೆದುಕೊಂಡಿದ್ದಾರೆ.
ನಾನು ಯಾರನ್ನೂ ಗುರಿ ಪಡಿಸಿ ಆ ಮಾತುಗಳನ್ನು ಹೇಳಿರಲಿಲ್ಲ. ಯಾರಿಗೂ ನೋವುಂಟು ಮಾಡುವ ಉದ್ದೇಶ ನನಗಿರಲಿಲ್ಲ. ನಾನು ಈ ಹಿಂದೆಯೂ ಗೌರವದಿಂದ ನಡೆದುಕೊಂಡಿದ್ದೇನೆ. ಮುಂದೆಯೂ ವಿಶ್ವದಾದ್ಯಂತ ಕ್ರಿಕೆಟ್ ಆಟಗಾರರ ಜೊತೆಗೆ ನಿಕಟ ಸಂಬಂಧವನ್ನು ಇರಿಸಲು ಬಯಸುತ್ತೇನೆ. ಎಲ್ಲರನ್ನೂ ಪಂದ್ಯದ ಸಮಯದಲ್ಲಿ ಮತ್ತೆ ಮೈದಾನದ ಹೊರಗಡೆಯೂ ಗೌರವಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.
ಎರಡನೇ ಪಂದ್ಯದ ದ.ಆಫ್ರಿಕಾ ಇನ್ನಿಂಗ್ಸ್ ನ 37ನೇ ಓವರ್ ವೇಳೆ ಪಾಕ್ ನಾಯಕ, ಫೆಕುಲಾಯೋಗೆ, ‘ ಏ ಕರಿಯ, ನಿನ್ನ ತಾಯಿ ಇವತ್ತು ಎಲ್ಲಿ ಕುಳಿತಿದ್ದಾರೆ. ಪ್ರಾರ್ಥನೆ ಮಾಡಲು ನಿನ್ನ ಅಮ್ಮನಿಗೆ ತಿಳಿಸಿದ್ದೀಯ’ ಎಂದು ನಿಂದಿಸಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.