![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Jun 18, 2022, 10:41 PM IST
ಝಾಗ್ರೆಬ್ (ಕ್ರೊವೇಶಿಯ): ಭಾರತದ ಟಿಟಿಪಟು ಜಿ. ಸಥಿಯನ್ ಜ್ಞಾನಶೇಖರನ್ ಇಲ್ಲಿ ನಡೆಯುತ್ತಿರುವ ಡಬ್ಲ್ಯುಟಿಟಿ ಕಂಟೆಂಡರ್ ಕೂಟದ ಪುರುಷರ ಸಿಂಗಲ್ಸ್ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಸೋತು ಹೊರಬಿದ್ದಿದ್ದಾರೆ.
ವಿಶ್ವದ 34ನೇ ರ್‍ಯಾಂಕಿನ ಸಥಿಯನ್ ಚೈನೀಸ್ ತೈಪೆಯ ಚುಯಾಂಗ್ ಚಿಹ್-ಯುಯಾನ್ ಅವರೆದುರು 7-11, 9-11, 5-11 ಗೇಮ್‌ಗಳಿಂದ ಸೋಲನ್ನು ಕಂಡರು. ಇದು ಸಥಿಯನ್ ಅವರಿಗೆ ನಿರಾಶಾದಾಯಕ ಫಲಿತಾಂಶವಾಗಿದೆ. ಅವರು ಈ ಹಿಂದಿನ ಪಂದ್ಯದಲ್ಲಿ ಹಾಲಿ ಯುರೋಪಿಯನ್ ಚಾಂಪಿಯನ್ ಡಾರ್ಕೊ ಜಾರ್ಜಿಕ್ ಅವರನ್ನು 6-11, 12-10, 11-9, 12-10 ಗೇಮ್‌ಗಳಿಂದ ಸೋಲಿಸಿ ಅಚ್ಚರಿಯ ಫಲಿತಾಂಶಕ್ಕೆ ಕಾರಣರಾಗಿದ್ದರು.
ಆಬಳಿಕ ಅವರು 16ರ ಹರೆಯದ ಚೀನದ ಚೆನ್ ಯುವಾನ್ಯು ಅವರನ್ನು 11-9, 11-7, 12-10 ಗೇಮ್‌ಗಳಿಂದ ಸೋಲಿಸಿ ಕ್ವಾರ್ಟರ್‌ಫೈನಲಿಗೇರಿದ್ದರು.
Pro Hockey: ಇಂಗ್ಲೆಂಡ್ ವಿರುದ್ಧ ಭಾರತ ವನಿತೆಯರಿಗೆ ಸೋಲು
WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್ ವಿವಾದ
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Team India: ಪಂತ್-ರಾಹುಲ್ ವಿಚಾರದಲ್ಲಿ ಗಂಭೀರ್- ಅಗರ್ಕರ್ ನಡುವೆ ಭಿನ್ನಾಭಿಪ್ರಾಯ
IPL 2025: ಮತ್ತೊಬ್ಬ ಅಫ್ಘಾನಿ ಬೌಲರ್ ಬದಲು ಮುಂಬೈ ಇಂಡಿಯನ್ಸ್ ತಂಡದ ಸೇರಿದ ಮುಜೀಬ್
You seem to have an Ad Blocker on.
To continue reading, please turn it off or whitelist Udayavani.