ಸಾತ್ವಿಕ್-ಚಿರಾಗ್ ರಜತ ರಾಗ
Team Udayavani, Apr 16, 2018, 7:00 AM IST
ಗೋಲ್ಡ್ ಕೋಸ್ಟ್: ಪುರುಷರ ಡಬಲ್ಸ್ ಬ್ಯಾಡ್ಮಿಂಟನ್ನಲ್ಲಿ ಸಾತ್ವಿಕ್ ರಾಂಕಿರೆಡ್ಡಿ- ಚಿರಾಗ್ ಶೆಟ್ಟಿ ಜೋಡಿ ಭಾರತಕ್ಕೆ ಮೊದಲ ಪದಕವನ್ನು ತಂದಿತ್ತಿದ್ದಾರೆ. ಇವರು ಒಲಿಂಪಿಕ್ ಕಂಚಿನ ಪದಕ ವಿಜೇತ ಜೋಡಿಯಾದ ಇಂಗ್ಲೆಂಡಿನ ಮಾರ್ಕಸ್ ಎಲ್ಲಿಸ್-ಕ್ರಿಸ್ ಲ್ಯಾಂಗ್ರಿಜ್ ವಿರುದ್ಧ 13-21, 16-21 ಅಂತರ ದಿಂದ ಸೋತು ಬೆಳ್ಳಿ ಪದಕ ಜಯಿಸಿದರು.
17ರ ಹರೆಯದ ಸಾತ್ವಿಕ್ ರಾಂಕಿರೆಡ್ಡಿ ಮತ್ತು 20ರ ಹರೆಯದ ಚಿರಾಗ್ ಚಂದ್ರಶೇಖರ್ ಶೆಟ್ಟಿ 2016ರ ಟಾಟಾ ಓಪನ್ ಇಂಟರ್ನ್ಯಾಶನಲ್ ಚಾಲೆಂಜ್ನಲ್ಲಿ ಪ್ರಶಸ್ತಿ ಎತ್ತುವ ಮೂಲಕ ಬೆಳಕಿಗೆ ಬಂದಿದ್ದರು. ಇಬ್ಬರೂ ಮಾರಿಶಸ್ ಹಾಗೂ ಬಾಂಗ್ಲಾದೇಶ ಬ್ಯಾಡ್ಮಿಂಟನ್ ಪ್ರಶಸ್ತಿಯನ್ನೂ ತಮ್ಮದಾಗಿಸಿ ಕೊಂಡಿದ್ದರು. ಇದಕ್ಕಿಂತ ಮಿಗಿಲಾದದ್ದು ಕಳೆದ ವರ್ಷ ಗೆದ್ದ ವಿಯೆಟ್ನಾಮ್ ಓಪನ್ ಇಂಟರ್ನ್ಯಾಶನಲ್ ಚಾಲೆಂಜ್ ಪ್ರಶಸ್ತಿ. ಇದರಲ್ಲಿ ಮಾಜಿ ಒಲಿಂಪಿಕ್ ಮತ್ತು ಮಾಜಿ ವಿಶ್ವ ಚಾಂಪಿ ಯನ್ ಮಾರ್ಕಿಸ್ ಕಿಡೊ ಹಾಗೂ ಅವರ ಜತೆಗಾರ ಹೆಂಡ್ರ ಗುನವಾನ್ ವಿರುದ್ಧ ಭಾರತದ ಜೋಡಿ ಜಯ ಸಾಧಿಸಿತ್ತು.
ಗ್ಲಾಸೊ ವರ್ಲ್ಡ್
ಚಾಂಪಿಯನ್ಶಿಪ್ಗೆ ಅರ್ಹತೆ ಪಡೆದ ಸಾತ್ವಿಕ್- ಚಿರಾಗ್, ಕೊರಿಯಾ ಓಪನ್ ಮತ್ತು ಫ್ರೆಂಚ್ ಓಪನ್ ಕ್ವಾರ್ಟರ್ ಫೈನಲ್ ತಲುಪಿದ್ದರು. ಇದೇ ವರ್ಷ ಇಂಡೋನೇಶ್ಯ ಮಾಸ್ಟರ್ ಸೆಮಿಫೈನಲ್ ಹಾಗೂ ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಕ್ವಾರ್ಟರ್ ಫೈನಲ್ ತನಕ ಸಾಗಿದ್ದರು. ಗೋಲ್ಡ್ಕೋಸ್ಟ್ನಲ್ಲಿ ಬೆಳ್ಳಿ ಪದಕದೊಂದಿಗೆ ಸ್ಮರಣೀಯ ಸಾಧನೆಗೈದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijay Hazare; ವಾಸುಕಿ,ಗೋಪಾಲ್ ಬೊಂಬಾಟ್ ಬೌಲಿಂಗ್; ಸೌರಾಷ್ಟ್ರ ವಿರುದ್ದ ಗೆದ್ದ ಕರ್ನಾಟಕ
Test Cricket; ರೋಹಿತ್ ಆಯ್ತು, ಈಗ ವಿರಾಟ್..: ಬಿಸಿಸಿಐ ಕಳಿಸಿದ ʼಆʼ ಸಂದೇಶದಲ್ಲಿ ಏನಿದೆ?
Sydney Test; ಬದಲಾದ ನಾಯಕ; ಮುಂದುವರಿದ ಬ್ಯಾಟಿಂಗ್ ಪರದಾಟ
Test; ಸಿಡ್ನಿ ಸಂಘರ್ಷಕ್ಕೆ ಭಾರತ ಸಿದ್ಧ :ರೋಹಿತ್-ಗಂಭೀರ್ ಮನಸ್ತಾಪ ತೀವ್ರ?
PCB;ಕರಾಚಿ ಕ್ರೀಡಾಂಗಣದ ನವೀಕರಣ ಕಾರ್ಯ ಪೂರ್ಣಕ್ಕೆ ಹರಸಾಹಸ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
16 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಛೋಟಾ ರಾಜನ್ ಗ್ಯಾಂಗ್ನ ಸದಸ್ಯ ಅರೆಸ್ಟ್
Actor Allu Arjun: ಕಾಲ್ತುಳಿತ ಪ್ರಕರಣ-ನಟ ಅಲ್ಲುಗೆ ರೆಗ್ಯುಲರ್ ಜಾಮೀನ ಮಂಜೂರು
Vijay Hazare; ವಾಸುಕಿ,ಗೋಪಾಲ್ ಬೊಂಬಾಟ್ ಬೌಲಿಂಗ್; ಸೌರಾಷ್ಟ್ರ ವಿರುದ್ದ ಗೆದ್ದ ಕರ್ನಾಟಕ
ಗದಗ: ಮಾವು ಬಂಪರ್ ಬೆಳೆ ನಿರೀಕ್ಷೆ- ಬೆಳೆಗಾರರಿಗೆ ಸಂತಸ
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.