IPL 2024; ಐಪಿಎಲ್ ನಲ್ಲಿ 5 ಬಿಲಿಯನ್ ಡಾಲರ್ ಹೂಡಿಕೆಗೆ ಮುಂದಾದ ಸೌದಿ ಅರೇಬಿಯಾ
Team Udayavani, Nov 4, 2023, 12:43 PM IST
ದುಬೈ: ದೇಶದ ಅತ್ಯಂತ ಕ್ರೀಡಾ ಸಂಸ್ಥೆ ಎಂದೇ ಖ್ಯಾತವೆತ್ತಿರುವ ಬಿಸಿಸಿಐನ ಅಂಗ ಸಂಸ್ಥೆ ಐಪಿಎಲ್‌ನಲ್ಲಿ 5 ಬಿಲಿಯನ್ ಡಾಲರ್‌ನಷ್ಟು ಹೂಡಿಕೆ ಮಾಡಲು ಸೌದಿ ಅರೇಬಿಯಾ ಮುಂದಾಗಿದೆ.
ಕಳೆದ ಸೆಪ್ಟೆಂಬರ್‌ನಲ್ಲಿ ಭಾರತಕ್ಕೆ ಬಂದಿದ್ದ ಸೌದಿ ರಾಜಕುಮಾರ ಮೊಹಮ್ಮದ್ ಬಿನ್ ಸಲ್ಮಾನ್ ಈ ಸಂಬಂಧ ಮಾತುಕತೆ ನಡೆಸಿದ್ದಾರೆ. ಹೀಗಾಗಿ, ಐಪಿಎಲ್ ಅನ್ನು ಒಂದು ಹೋಲ್ಡಿಂಗ್ ಕಂಪನಿಯನ್ನಾಗಿ ಮಾಡಿ, ಇದರಲ್ಲಿ ಸೌದಿ ಅರೆಬಿಯಾದಿಂದ 5 ಬಿಲಿಯನ್ ಅಮೆರಿಕನ್ ಡಾಲರ್ ನಷ್ಟು ಹೂಡಿಕೆಯಾಗುವ ಸಾಧ್ಯತೆ ಇದೆ.
ಈ ಮೂಲಕ ಐಪಿಎಲ್ ಅನ್ನು ಇತರೆ ದೇಶಗಳಿಗೂ ವಿಸ್ತರಿಸುವ ಸಾಧ್ಯತೆಗಳೂ ದಟ್ಟವಾಗಿವೆ. 2008ರಲ್ಲಿ ಆರಂಭವಾದ ಐಪಿಎಲ್, ಈಗ ವಿಶ್ವವಿಖ್ಯಾತಿ ಪಡೆದಿದೆ. ಪಾಕಿಸ್ತಾನ ಹೊರತುಪಡಿಸಿ, ಉಳಿದೆಲ್ಲ ದೇಶಗಳ ಆಟಗಾರರು ಇದರಲ್ಲಿ ಭಾಗಿಯಾಗುತ್ತಿದ್ದಾರೆ.
ಡಿ.19ಕ್ಕೆ ಹರಾಜು?: 2024ನೇ ಸಾಲಿನ ಐಪಿಎಲ್‌ಗಾಗಿ ಇದೇ ಡಿ.19ರಂದು ಹರಾಜು ಪ್ರಕ್ರಿಯೆ ನಡೆಯಲಿದ್ದು, ಇದೇ ಮೊದಲ ಬಾರಿಗೆ ದುಬೈ ಆತಿಥ್ಯ ವಹಿಸಲಿದೆ. ಅಲ್ಲದೆ, ಪ್ರತಿಯೊಂದು ತಂಡಕ್ಕೂ 100 ಕೋಟಿ ರೂ. ಮಿತಿ ಹಾಕಲಾಗಿದೆ ಎಂದು ಹೇಳಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Train ಜನಶತಾಬ್ದಿ ಎಕ್ಸ್‌ಪ್ರೆಸ್‌ನಲ್ಲಿ ಹಾವು ಪ್ರತ್ಯಕ್ಷ: ತನಿಖೆಗೆ ಆದೇಶ
Himachal Pradesh;ನಷ್ಟದಲ್ಲಿರುವ ಹೊಟೇಲ್ ಮುಚ್ಚಲು ಹೈಕೋರ್ಟ್ ಆದೇಶ
Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ
Dinesh Gundu Rao: ಅನರ್ಹರ ಕಾರ್ಡ್ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ
Waqf ಮಸೂದೆ ಕರಡು ವರದಿ ಸಿದ್ಧ: ಜೆಪಿಸಿ ಅಧ್ಯಕ್ಷ ಪಾಲ್ ಘೋಷಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.