ಟೆಸ್ಟ್ ಸರಣಿ ಜಯಿಸಿದ ಭಾರತ “ಎ’; ಕಾರ್ಟರ್ ಶತಕ ವ್ಯರ್ಥ
ನ್ಯೂಜಿಲ್ಯಾಂಡ್ "ಎ' ವಿರುದ್ಧ 113 ರನ್ ಜಯ
Team Udayavani, Sep 18, 2022, 11:32 PM IST
ಬೆಂಗಳೂರು: ಎಡಗೈ ಸ್ಪಿನ್ನರ್ ಸೌರಭ್ ಕುಮಾರ್ ಅವರ ಮತ್ತೂಂದು ಘಾತಕ ಬೌಲಿಂಗ್ ದಾಳಿಯ ನೆರವಿನಿಂದ ಪ್ರವಾಸಿ ನ್ಯೂಜಿಲ್ಯಾಂಡ್ “ಎ’ ವಿರುದ್ಧದ 3ನೇ ಅನಧಿಕೃತ ಟೆಸ್ಟ್ ಪಂದ್ಯವನ್ನು ಭಾರತ “ಎ’ 113 ರನ್ನುಗಳಿಂದ ಜಯಿಸಿದೆ. 3 ಪಂದ್ಯಗಳ ಸರಣಿಯನ್ನು 1-0 ಅಂತರದಿಂದ ತನ್ನದಾಗಿಸಿಕೊಂಡಿದೆ.
ಇಲ್ಲಿನ “ಎಂ. ಚಿನ್ನಸ್ವಾಮಿ ಸ್ಟೇಡಿಯಂ’ನಲ್ಲಿ ನಡೆದ ಅಂತಿಮ ಪಂದ್ಯದಲ್ಲಿ 416 ರನ್ ಗುರಿ ಪಡೆದ ನ್ಯೂಜಿಲ್ಯಾಂಡ್ “ಎ’ 302ಕ್ಕೆ ಆಲೌಟ್ ಆಯಿತು. ಸೌರಭ್ ಕುಮಾರ್ 103 ರನ್ನಿತ್ತು 5 ವಿಕೆಟ್ ಉಡಾಯಿಸಿದರು. ಈ ಐದೂ ವಿಕೆಟ್‌ಗಳನ್ನು ಅವರು ಲೆಗ್ ಬಿಫೋರ್ ರೂಪದಲ್ಲಿ ಕೆಡವಿದ್ದು ವಿಶೇಷ. ಮೊದಲ ಸರದಿಯಲ್ಲಿ ಅವರು 4 ವಿಕೆಟ್ ಉರುಳಿಸಿದ್ದರು.
ಜೋ ಕಾರ್ಟರ್ ಶತಕ
ಆರಂಭಕಾರ ಜೋ ಕಾರ್ಟರ್ 111 ರನ್ ಬಾರಿಸಿ (230 ಎಸೆತ, 12 ಬೌಂಡರಿ, 1 ಸಿಕ್ಸರ್) ಸೋಲು ತಪ್ಪಿಸಲು ಭಾರೀ ಪ್ರಯತ್ನಪಟ್ಟರು. ಇವರು ಪೆವಿಲಿಯನ್ ಸೇರಿಕೊಂಡದ್ದೇ 9ನೇ ವಿಕೆಟ್ ರೂಪದಲ್ಲಿ. ಕಾರ್ಟರ್ ಸಾಹಸದಿಂದಾಗಿ ನ್ಯೂಜಿಲ್ಯಾಂಡ್ “ಎ’ ಒಂದು ಹಂತದಲ್ಲಿ 3 ವಿಕೆಟಿಗೆ 197 ರನ್ ಗಳಿಸಿ ಪಂದ್ಯವನ್ನು ಉಳಿಸಿಕೊಳ್ಳುವ ಸಾಧ್ಯತೆಯನ್ನು ತೆರೆದಿರಿಸಿತ್ತು. ಆದರೆ ಸೌರಭ್ ಕುಮಾರ್ ಪ್ರವಾಸಿ ಸರದಿಯ ಮೇಲೆ ಘಾತಕವಾಗಿ ಎರಗಿದರು. 51 ರನ್ ಅಂತರದಲ್ಲಿ ಕೊನೆಯ 5 ವಿಕೆಟ್ ಉರುಳಿತು.
ಜೋ ಕಾರ್ಟರ್ ಅವರಿಗೆ ಡೇನ್ ಕ್ಲೀವರ್ (44) ಮತ್ತು ಮಾರ್ಕ್ ಚಾಪ್‌ಮನ್ (45) ಉತ್ತಮ ಬೆಂಬಲವಿತ್ತರು. 3ನೇ ಹಾಗೂ 4ನೇ ವಿಕೆಟಿಗೆ ಕ್ರಮವಾಗಿ 85 ಮತ್ತು 82 ರನ್ ಒಟ್ಟುಗೂಡಿಸಿದರು. ಚಾಪ್‌ಮನ್ ಅವರನ್ನು ಔಟ್ ಮಾಡುವ ಮೂಲಕ ಸಫìರಾಜ್ ಖಾನ್ ಭಾರತಕ್ಕೆ ದೊಡ್ಡ ಬ್ರೇಕ್ ಒದಗಿಸಿದರು. ಈ ಜೋಡಿ 19 ಓವರ್‌ಗಳನ್ನು ಯಶಸ್ವಿಯಾಗಿ ನಿಭಾಯಿಸಿ ಪಂದ್ಯವನ್ನು ಉಳಿಸಿಕೊಳ್ಳಲು ಇನ್ನಿಲ್ಲದ ಪ್ರಯತ್ನ ಮಾಡಿದರೂ ಯಶಸ್ವಿಯಾಗಲಿಲ್ಲ.
ಬೆಂಗಳೂರಿನಲ್ಲೇ ನಡೆದ ಮೊದಲ ಟೆಸ್ಟ್ ಹಾಗೂ ಹುಬ್ಬಳ್ಳಿಯಲ್ಲಿ ಆಡಲಾದ ದ್ವಿತೀಯ ಟೆಸ್ಟ್ ಪಂದ್ಯ ಡ್ರಾಗೊಂಡಿತ್ತು.
ಸಂಕ್ಷಿಪ್ತ ಸ್ಕೋರ್:
ಭಾರತ “ಎ’-293 ಮತ್ತು 7 ವಿಕೆಟಿಗೆ 359 ಡಿಕ್ಲೇರ್. ನ್ಯೂಜಿಲ್ಯಾಂಡ್ “ಎ’-237 ಮತ್ತು 302 (ಜೋ ಕಾರ್ಟರ್ 111, ಮಾರ್ಕ್ ಚಾಪ್‌ಮನ್ 45, ಡೇನ್ ಕ್ಲೀವರ್ 44, ಸೌರಭ್ ಕುಮಾರ್ 103ಕ್ಕೆ 5,ಸರ್ಫರಾಜ್ ಖಾನ್ 48ಕ್ಕೆ 2).
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90
T20 Asia Cup: ಬಾಂಗ್ಲಾ ವಿರುದ್ದ ಅಂಡರ್ 19 ವನಿತಾ ಏಷ್ಯಾಕಪ್ ಚಾಂಪಿಯನ್ ಆದ ಭಾರತ
BGT 2024: ಮೆಲ್ಬೋರ್ನ್ ಪಂದ್ಯಕ್ಕೂ ಟೀಂ ಇಂಡಿಯಾಗೆ ಗಾಯಾಳುಗಳ ಸಮಸ್ಯೆ
Vijay Hazare Trophy: ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್ ಸೂರ್ಯವಂಶಿ
IND-W vs WI: ವನಿತೆಯರ ಏಕದಿನ ಮುಖಾಮುಖಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.